ಹೊನ್ನಾವರ : ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎನ್.ಎಮ್.ಮೇಸ್ತ ವರ್ಗಾವಣೆಯಾಗಿದ್ದು, ನೂತನ ಮುಖ್ಯಾಧಿಕಾರಿಯಾಗಿ ಪ್ರವೀಣ ನಾಯಕ ಅಗ್ರಗೋಣ ಇವರು ಅಧಿಕಾರ ಸ್ವೀಕರಿಸಿದರು.
ಈ ಹಿಂದೆ ಸುಮಾರು 19 ವರ್ಷಗಳ ಕಾಲ ಪಟ್ಟಣ ಪಂಚಾಯತಿಯಲ್ಲಿಯೇ ಕಾರ್ಯನಿರ್ವಹಿಸಿ, ಅಂಕೋಲಾಕ್ಕೆ ವರ್ಗಾವಣೆಯಾಗಿದ್ದರು. ಇದೀಗ ಪದೊನ್ನತಿಯೊಂದು ಮುಖ್ಯಾಧಿಕಾರಿಯಾಗಿ ನೇಮಕವಾಗಿದ್ದು ಅಧಿಕಾರ ಸ್ವೀಕರಿಸಿದರು. ಎನ್.ಎಮ್.ಮೇಸ್ತ ಇವರನ್ನು ಪಟ್ಟಣ ಪಂಚಾಯತಿ ಅಧ್ಯಕ್ಷರು ಸದಸ್ಯರು ಸಿಬ್ಬಂದಿಗಳು ಆತ್ಮೀಯವಾಗಿ ಬಿಳ್ಕೊಟ್ಟರು.
Leave a Comment