ಹೊನ್ನಾವರ: ಉತ್ತರಕನ್ನಡ ಸಾಹಿತ್ಯಿಕವಾಗಿ ಸಂಪದ್ಭರಿತವಾಗಿದೆ. ಇಲ್ಲಿ ಮಹತ್ತರವಾದ ಸಂಗತಿಗಳಿವೆ. ಇಲ್ಲಿನ ಕಾಡು ಮತ್ತು ಕಡಲು ಸಾಹಿತಿಗಳಿಗೆ ಬರೆಯಲು ಸ್ಪೂರ್ತಿ ನೀಡುತ್ತಿದೆ. ಆದರೆ ಇಲ್ಲಿ ಮಹತ್ವದ ಕೃತಿ ಮತ್ತು ಕೃತಿಕಾರರ ಕುರಿತು ಚರ್ಚೆಯೇ ಆಗುವುದಿಲ್ಲ.

ಇಲ್ಲಿನ ಸಾಹಿತ್ಯದ ಚಂಡೆ-ಮದ್ದಳೆ ರಾಜಧಾನಿಯನ್ನೂ ತಲುಪುವಂತಾಗಲಿ ಎಂದು ಅವನಿ’ಯ ಡಾ.ಪಿ.ಚಂದ್ರಿಕಾ ಅಭಿಪ್ರಾಯಪಟ್ಟರು. ಅವರು ಅವನಿ ಮತ್ತು ಉತ್ತರಕನ್ನಡ ಜಿಲ್ಲಾ ಕಸಾಪ ಸಹಯೋಗದಲ್ಲಿ ಪಟ್ಟಣದ ಎಸ್ಡಿಎಂ ಕಾಲೇಜಿನ ಆರ್.ಎಸ್.ಹೆಗಡೆ ಸಭಾಭವನದಲ್ಲಿ ರವಿವಾರ ನಡೆದ
ಕೆಸು’ ಪುರಾಣ ಮತ್ತು ವಾಸ್ತವ ಮತ್ತು ಮೃಗಶಿರ’ ಕಾದಂಬರಿ ಕುರಿತ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂವಾದಕ್ಕೆ ಚಾಲನೆ ನೀಡಿದ ಹಿರಿಯ ಜಾನಪದ ವಿದ್ವಾಂಸ ಡಾ.ಎನ್.ಆರ್.ನಾಯಕ ಮಾತನಾಡಿ, ಡಾ.ಶ್ರೀಧರ ಬಳಗಾರರು ಮಾಸ್ತಿಯವರ ಪ್ರಭಾವಶಾಲಿ ಕಥನ ತಂತ್ರಗಳನ್ನು ಇನ್ನೊಂದು ಆಯಾಮದಲ್ಲಿ ಬಳಸಿ ಅದರಲ್ಲಿ ಯಶಸ್ವಿಯಾಗಿದ್ದಾರೆ. ವರ್ತಮಾನ ಮತ್ತು ಚರಿತ್ರೆಯನ್ನು ನಮ್ಮ ಸಾಮಾಜಿಕ ಬದುಕು ಹೇಗೆ ಒಳಗೊಳ್ಳಬೇಕು ಎಂಬುದನ್ನು
ಮೃಗಶಿರ’ ಕಾದಂಬರಿಯಲ್ಲಿ ನಾವು ನೋಡಬಹುದು. ಅವರ ಕೃತಿಗೆ ಮಾಸ್ತಿ ಪ್ರಶಸ್ತಿ ಸಂದಿರುವುದು ಉತ್ತರಕನ್ನಡ ಜಿಲ್ಲೆಗೆ ಸಂದ ಗೌರವ ಎಂದರು.
ಪ್ರೊ.ನಾಗರಾಜ ಹೆಗಡೆ ಅಪಗಾಲ ಮತ್ತು ಪ್ರೊ.ಪ್ರಶಾಂತ ಹೆಗಡೆ ಮೃಗಶಿರ’ ಮತ್ತು
ಕೆಸು’ ಕೃತಿಯ ಓದಿನ ಅನುಭವಗಳನ್ನು ಹಂಚಿಕೊಂಡರು. ಉತ್ತರಕನ್ನಡ ಜಿಲ್ಲಾ ಕಸಾಪ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಡಾ.ಶ್ರೀಧರ ಬಳಗಾರ ಮತ್ತು ಶಾಂತಿ ನಾಯಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂತೋಷ ಮೆಣಸಗಿ ಸ್ವಾಗತಿಸಿದರು. ಶಶಿಧರ ದೇವಾಡಿಗ ವಂದಿಸಿದರು. ಶಂಕರ ಗೌಡ ಗುಣವಂತೆ ನಿರೂಪಿಸಿದರು.
Leave a Comment