ಹೊನ್ನಾವರ: ನಾಟಕ ಕೇವಲ ಮನೋರಂಜನೆಗಷ್ಟೆ ಸಿಮೀತವಾಗಿರದೇ ಸಮಾಜದ ಅಂಕುಡೊ0ಕು ತಿದ್ದುವ ಕೆಲಸ ಮಾಡುತ್ತಿದೆ ಎಂದು ಜಿಲ್ಲಾ ಪಂಚಾಯತ ಸದಸ್ಯ ಪ್ರದೀಪ ನಾಯಕ ದೇವರಬಾವಿ ಹೇಳಿದರು. ಅವರು ತಾಲೂಕಿನ ಅರೇಅಂಗಡಿ ಎಸ್.ಕೆ.ಪಿ ಕ್ರೀಡಾಂಗಣದಲ್ಲಿ ಕಲಾಸಿರಿ ರಂಗಭೂಮಿ ಸಾಂಸ್ಕೃತಿಕ ಕ್ರೀಡಾ ವೇದಿಕೆ ೨ ವರ್ಷದ ವಾರ್ಷಿಕೊತ್ಸವ ಹಾಗೂ ಸಾಮಾಜಿಕ ಸ್ಪರ್ಧಾ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ನಾಟಕಕ್ಕೆ ೨೦೦೦ಕ್ಕಿಂತ ಹೆಚ್ಚಿನ ವರ್ಷದ ಇತಿಹಾಸವಿದೆ. ಸಾಮಾಜಿಕ ನ್ಯಾಯ ನೀಡುವ ಮಾಧ್ಯಮವಾಗಿದೆ. ಆದರೆ ಇಂದು ವೈಭವ ಕಳೆದುಕೊಂಡು, ಅವನತಿಯ ಹಂತ ತಲುಪಿದೆ. ಅದನ್ನು ಉಳಿಸಿ ಬೆಳೆಸಿ ಮುಂದಿನ ತಲೆಮಾರಿಗೆ ತಲುಪಿಸುವ ಕಾರ್ಯ ನಮ್ಮೆಲ್ಲರಿಂದ ಆಗಬೇಕಿದೆ ಎಂದರು.

ನಾಟಕ ಅಕಾಡೆಮಿ ಪ್ರಶಸ್ತಿç ಪುರಸ್ಕೃತ ಕಲಾವಿದರಾದ ಜಿ.ಡಿ.ಭಟ್ ಕೆಕ್ಕಾರ್ ಮಾತನಾಡಿ ಹಲವು ಮನೊರಂಜನೆಯ ಮಾಧ್ಯಮದ ಪೈಪೋಟಿಯಲ್ಲಿ ತನ್ನ ಜನಪ್ರೀಯತೆಯನ್ನು ಇಂದಿಗೂ ಉಳಿಸಿಕೊಂಡಿದ್ದರೂ ಸಂಘಟಿಕರಿಗೆ ಪೋತ್ಸಾಹಿಸುವ ಕಾರ್ಯವಾಗಬೇಕಿದೆ. ಸಾರ್ವಜನಿಕರು ಸಂಘಟಕರಿಗೆ ಪೋತ್ಸಾಹ ನೀಡಿದರೆ, ಕಲಾವಿದರು ಕಲೆ ಶಾಶ್ವತವಾಗಿ ಇರಲಿದೆ. ನಾವೆಲ್ಲರೂ ಸೇರಿ ಕಲೆ ಹಾಗೂ ಕಲಾವಿದರನ್ನು ಉಳಿಸಿ ಬೆಳೆಸೋಣ ಎಂದು ಸಲಹೆ ನೀಡಿದರು.
ಸಾಲ್ಕೋಡ್ ಗ್ರಾ.ಪಂ ಉಪಾಧ್ಯಕ್ಷ ಸಚೀನ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಡ್ಲೆ ಗ್ರಾ.ಪಂ. ಅಧ್ಯಕ್ಷ ಗೋವಿಂದ ಗೌಡ, ಸಂಘಟನೆಯ ಅಧ್ಯಕ್ಷ ಎಂ.ಎನ್.ನಾಯ್ಕ, ಪೋಲಿಸ್ ಇಲಾಖೆಯ ಗೀರೀಶ ಶೆಟ್ಟಿ, ರಾಜೇಶ ಗುಣಗಾ ಉಪಸ್ಥಿತರಿದ್ದರು. ಪ್ರಕಾಶ ಭಂಡಾರಿ ಸ್ವಾಗತಿಸಿ, ಎನ್.ಎಚ್ ಅಂಬಿಗ ವಂದಿಸಿದರು. ಸುಧೀಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ಬಳಿಕ ತಾಲೂಕಿನ ಸಹ್ಯಾದ್ರಿ, ಅರಭಿ, ಶರಾವತಿ ತಂಡದಿoದ ಸಾಮಾಜಿಕ ಸ್ಪರ್ಧಾ ಕಾರ್ಯಕ್ರಮ ಜರುಗಿತು.
Leave a Comment