ಹೊನ್ನಾವರ: ಹೊಸಪೇಟೆಯ ನ್ಯಾಯಾವಾದಿ ತಾರೆಹಳ್ಳಿ ವೆಂಕಟೇಶ ಇವರ ಅಮಾನುಷ ಕೊಲೆಯನ್ನು ಖಂಡಿಸಿ ಹೊನ್ನಾವರ ವಕೀಲರ ಸಂಘ ಬುಧವಾರ ರಾಜ್ಯಪಾಲರಿಗೆ ಮನವಿ ನೀಡಿತು.
ಮನವಿಯಲ್ಲಿ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡವರ ಮೇಲೆ ದೇಶದ, ರಾಜ್ಯದ, ವಿವಿಧ ಕಡೆಗಳಲ್ಲಿ ದಾಳಿ ನಡೆಯುತ್ತಿವೆ. ತೆಲಂಗಾಣದಲ್ಲಿ, ಕರ್ನಾಟಕದ ಮಂಡ್ಯದಲ್ಲಿ, ನಮ್ಮ ಜಿಲ್ಲೆಯ ದಾಂಡೇಲಿಯಲ್ಲಿ, ಸಹ ನ್ಯಾಯಾವಾದಿಯನ್ನು ಕೊಲೆ ಮಾಡಿದ್ದಾರೆ. ವಕೀಲ ವೃತ್ತಿಯ ಮೇಲೆ ನಡೆಯುತ್ತಿರುವ ದಾಳಿಗಳಿಂದ ವಕೀಲ ವೃತ್ತಿಯಲ್ಲಿ ತೊಡಗಿದವರಿಗೆ ಅವರ ಕುಟುಂಬಕ್ಕೆ ಜೀವ ಭಯ ಕಾಡುತ್ತಿದೆ. ಹಲ್ಲೆಗಳು ಪುನರಾವರ್ತನೆ ತಡೆಯಬೇಕಾಗಿದೆ. ಅದಕ್ಕಾಗಿ ಕೀಂದ್ರ ಸರ್ಕಾರವು ವಕೀಲರ ರಕ್ಷಣೆಗಾಗಿ ಸೂಕ್ತ ಕಾನೂನನ್ನು ಜಾರಿಗೋಳಿಸುವುದು ಅಗತ್ಯವಾಗಿದೆ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ಸ್ವೀಕರಿಸಿದ ತಹಶೀಲ್ದಾರ ವಿವೇಕ ಶೇಣ್ವಿ ಮನವಿಯನ್ನು ರಾಜ್ಯಪಾಳರಿಗೆ ರವಾನಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಕೆ.ವಿ ನಾಯ್ಕ, ಕಾರ್ಯದರ್ಶಿ ಸೂರಜ್ ನಾಯ್ಕ, ಜಿ.ವಿ ಭಟ್ಟ, ರವಿ ಹೆಗಡೆ, ಜಿ.ಜಿ ಭಟ್, ನಾಗರಾಜ ಕಾಮತ್, ಕೇಶವ ಭಟ್, ಕೆ. ಆರ್ ನಾಯ್ಕ, ಜಿ.ಪಿ ಹೆಗಡೆ, ಮನೋಜ್ ಜಾಲಿಸತ್ಗಿ, ಶ್ರೀಧರ್ ಹೆಗಡೆ, ಎಚ್, ಉದಯ್ ನಾಯ್ಕ, ಕೆ. ಎಸ್.ಭಟ್, ರಾಮು ನಾಯ್ಕ, ವಿ.ವಿ ನಾಯ್ಕ, ಶ್ರೀಪಾದ ನಾಯ್ಕ,ಉಮಾ ಡಿ ನಾಯ್ಕ, ವಿ.ಆರ್ ನಾಯ್ಕ, ಉದಯ ಚಿತ್ತಾರ, ಶ್ಯಾಮಲಾ ನಾಯ್ಕ, ಪದ್ಮ ಸಂಕೊಳ್ಳಿ, ರಾಘು ನಾಯ್ಕ ದಿನೇಶ ಹೆಗಡೆ ಹಾಗೂ ಇನ್ನೀತರರು ಉಪಸ್ಥಿತರಿದ್ದರು.
ಫೋಟೊ:ಹೆಚ್-10-ಹೆಚ್ಎನ್ಆರ್-02: ಹೊಸಪೇಟೆಯ ನ್ಯಾಯಾವಾದಿ ತಾರೆಹಳ್ಳಿ ವೆಂಕಟೇಶ ಇವರ ಅಮಾನುಷ ಕೊಲೆಯನ್ನು ಖಂಡಿಸಿ ಹೊನ್ನಾವರ ವಕೀಲರ ಸಂಘ ಬುಧವಾರ ರಾಜ್ಯಪಾಲರಿಗೆ ಮನವಿ ನೀಡಿತು.
Leave a Comment