ಹೊನ್ನಾವರ ;
ಪಟ್ಟಣದ ಬಂದರ್ ಸಮೀಪದ ಕೇಂದ್ರೀಯ ಅಬಕಾರಿ ಮತ್ತು ಜಿ ಎಸ್ ಟಿ ಅಧಿ ೕಕ್ಷಕ ಕಛೆ ೕ ರಿಯ ಅಧಿಕಾರಿ ಜಿತೇಂದ್ರ ಧಾಗೂರು ಮೇಲೆ ಸಿಬಿಐನ ಎಸಿಬಿ ವಿಭಾಗದ ಅಧಿಕಾರಿಗಳು ಶನಿವಾರ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.

ತಾಲೂಕಿನ ಜಗದೀಶ್ ಭಾವೆ ಎನ್ನುವವರು 2015-16 ನೇ ಸಾಲಿನ ತಮ್ಮ 10 ಲಕ್ಷ ಆದಾಯಕ್ಕಿಂತ ಹೆಚ್ಚಿನ ಹಣವಾದ 37, 840 ರೂ.ಗೆ ಸರ್ವಿಸ್ ಟ್ಯಾಕ್ಸ್ ಕಟ್ಟುವುದು ಬಾಕಿ ಇತ್ತು. ಅದನ್ನು ತಪ್ಪಿಸಲು ಜಿ ಎಸ್ ಟಿ ಅಧಿಕಾರಿ ಜಿತೇಂದ್ರ ಧಾಗೂರು ಅವರು ಜಗದೀಶ್ ಭಾವೆ ಅವರಲ್ಲಿ 50 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಜಗದೀಶ ಭಾವೆ ಸಿಬಿಐ (ಎಸಿಬಿ) ಗೆ ದೂರು ನೀಡಿದ್ದರು. ಅದರಂತೆ ಜೀತೇಂದ್ರ ಧಾಗೂರು ಕಛೇರಿಯಲ್ಲಿ ಜಗದೀಶ್ ಭಾವೆ ಅವರಿಂದ 25 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ 6 ಮಂದಿಯ ಅಧಿಕಾರಿಗಳ ತಂಡ ದಾಳಿ ಮಾಡಿ ಲಂಚದ ಹಣದ ಸಮೇತ ಜೀತೇಂದ್ರ ಧಾಗೂರು ಅವರನ್ನು ವಶಕ್ಕೆ ಪಡೆದು ದಸ್ತಗಿರಿ ಮಾಡಿ ತನಿಖೆ ಮುಂದುವರಿಸಿದೆ.
Leave a Comment