ಹೊನ್ನಾವರ: ಪಟ್ಟಣದ ನ್ಯೂ ಇಂಗ್ಲೀಷ್ ಶಾಲಾ ಸಭಾಭವನದಲ್ಲಿ ಕರವೇ ತಾಲೂಕಾ ಘಟಕದ ಕಾರ್ಯಕರ್ತರ ಸಭೆ ನಡೆಯಿತು.
ಸಭೆ ಉದ್ದೇಶಿಸಿ ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಮಾತನಾಡಿ ಕನ್ನಡಕ್ಕಾಗಿ ಅದೆಷ್ಟು ಮೊಕದ್ದಮೆ ಎದುರಿಸಿದ್ದೇವೆ.ನೆಲ,ಜಲ,ಭಾಷೆ ವಿಚಾರ ಬಂದಾಗ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಕೇಂದ್ರ ಸರ್ಕಾರ ಅನೇಕ ರೀತಿಯಲ್ಲಿ ಕನ್ನಡದ ಮೇಲೆ ಹಿಂದಿ ಹೇರಿಕೆ ನಡೆಸುತ್ತಿದ್ದರು ರಾಜಕಾರಣಿಗಳು ತಮ್ಮ ಕುರ್ಚಿ ಉಳಿಸಿಕೊಳ್ಳಲು ಸುಮ್ಮನೆ ಕುಳಿತಿರುತ್ತಾರೆ.ಕನ್ನಡದ ಹೆಸರಲ್ಲಿ ರಾಜಕೀಯ ಮಾಡೋಣ, ಕನ್ನಡದ ರಾಜಕಾರಣಿಯಾದರೆ ಮಾತ್ರ ಕನ್ನಡ ಉದ್ದಾರವಾಗಲು ಸಾಧ್ಯ ಎಂದರು.

ಸಂಘಟನೆಯನ್ನು ತಳಮಟ್ಟದಲ್ಲಿ ಬಲಪಡಿಸುವ ಕಾರ್ಯ ನಡೆಯುತ್ತಿದೆ. ಎಲ್ಲರು ಸಂಘಟಿತರಾಗಿ ಕನ್ನಡ ಗೆಲ್ಲಿಸೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು
ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಪ್ರವೀಣ್ ಕುಮಾರ್ ನಾಯಕ್ ಅವರನ್ನು ಕರವೇ ಸಂಘಟನೆ ವತಿಯಿಂದ ಸನ್ಮಾನಿಸಿ ಗೌರವಿಸಿದರು.
ಅಂಕೋಲಾ ತಾಲೂಕಾ ಪಂಚಾಯತ ಅಧ್ಯಕ್ಷೆ ಸುಜಾತ ಗಾಂವ್ಕರ್ ಮಾತನಾಡಿ ಕನ್ನಡದ ಕಿಚ್ಚು ಹಚ್ಚುವ ಕೆಲಸ ಕನ್ನಡಿಗರಿಂದಲೇ ನಡೆಯಬೇಕಿದೆ. ಕೇವಲ ವೇದಿಕೆಗಳಲ್ಲಿ ಕನ್ನಡ ಉಳಿಸಿ ಬೆಳೆಸಿ ಎಂದು ಭಾಷಣ ಮಾಡುತ್ತೇವೆ. ಕನ್ನಡಕ್ಕೆ ಅಪಚಾರ ಅವಮಾನವಾದಾಗ ಒಗ್ಗಟ್ಟನ್ನು ತೋರಿಸುತ್ತಿಲ್ಲ. ಕನ್ನಡವನ್ನು ಉಳಿಸುವ ಚಿಂತನೆ ಕಾಡುತ್ತಿದೆ. ಕನ್ನಡ ಪ್ರೇಮ ಎನ್ನುವುದು ಕೇವಲ ನವಂಬರ್ ಒಂದಕ್ಕೆ ಸೀಮಿತಗೊಳ್ಳುತ್ತಿದೆ. ಕನ್ನಡ ಪ್ರೇಮ ನಿತ್ಯನಿರಂತರವಾಗಿರಬೇಕು.ಆಗ ಮಾತ್ರ ಕನ್ನಡದ ಕಂಪು ಪಸರಿಸಲು ಸಾಧ್ಯ ಎಂದರು.
ಕರವೇ ರಾಜ್ಯುಪಾಧ್ಯಕ್ಷ ಶಿವರಾಜ್ ಗೌಡ ಮಾತನಾಡಿ ನೆಲ,ಜಲ,ಭಾಷೆಗೆ ಧಕ್ಕೆ ಬಂದಾಗ ಹೋರಾಟ ಮಾಡುವುದು ಕರವೇ ಸಂಘಟನೆ. ಇಂದು ಹಳದಿ,ಕೆಂಪು ಶಾಲು ಹಾಕಿಕೊಂಡು ಅನೇಕ ರೊಲ್ ಕಾಲ್ ಸಂಘಟನೆ ಹುಟ್ಟಿಕೊಂಡಿದೆ. ರಾಜಕಾರಣಿಗಳೇ ಕೆಲವು ಸಂಘಟನೆಗಳನ್ನು ಹುಟ್ಟು ಹಾಕಿ ನಮ್ಮ ವಿರುದ್ಧ ಎತ್ತುಕಟ್ಟುತ್ತಿದ್ದಾರೆ. ಕೈಲಾಗದವರಿಗೆ 2 ಕೆಜಿ ಅಕ್ಕಿ ಕೊಡುವುದೇ ದೊಡ್ಡ ಸಾಧನೆ ಎಂದುಕೊಂಡಿದ್ದಾರೆ.ಜನರಿಗೆ ಉದ್ಯೋಗವಕಾಶ ಮೂಲಭೂತ ಸೌಕರ್ಯ ಕಲ್ಪಿಸಿಕೊಡುವ ಕೆಲಸ ಮಾಡಬೇಕು ಎಂದು ಜನಪ್ರತಿನಿಧಿಗಳ ವಿರುದ್ದ ಹರಿ ಹಾಯ್ದರು.
ವೇದಿಕೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮಹಮದ್ ಹನಿಫ್ , ಮಂಜೇಶ್ , ಎಂ.ಲೋಕೇಶ್ ,ಕರವೇ ತಾಲೂಕಾ ಘಟಕದ ಗೌರಾವಾದ್ಯಕ್ಷ ಜಗದೀಶ್ ಭಾವೆ, ಅಧ್ಯಕ್ಷ ಉದಯರಾಜ್ ಮೇಸ್ತ,ಕೃಷ್ಣ ಹರಿಜನ ಮತ್ತಿತರರು ಉಪಸ್ಥಿತರಿದ್ದರು.
Leave a Comment