ಹೊನ್ನಾವರ: ಸಂಸದರ ಅನಾರೊಗ್ಯದ ಬಗ್ಗೆ ಕೀಳು ಹೇಳಿಕೆಯೇ ಇವರ ಸಂಸ್ಕøತಿ ತೋರಿಸುತ್ತದೆ. ಇಂತಹ ಅವಿವೇಕತನದ ಪರಮಾವಧಿ ಹೇಳಿಕೆ ನೀಡಿರುವುದಕ್ಕೆ ಬಹಿರಂಗವಾಗಿ ಮಾಜಿ ಸಚೀವ ಆನಂದ ಅಸ್ನೋಟಿಕರ್ ಕ್ಷಮೆ ಯಾಚಿಸಲಿ ಇಂತಹ ಹೇಳಿಕೆಯನ್ನು ತಿವ್ರವಾಗಿ ಖಂಡಿಸುದಾಗಿ ಬಿಜೆಪಿ ಹೊನ್ನಾವರ ಮಂಡಲ ಅಧ್ಯಕ್ಷ ರಾಜೇಶ ಭಂಡಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತಿಚೀಗೆ ಜಿಲ್ಲೆಯ ಸಂಸದರಾದ ಅನಂತಕುಮಾರ್ ಹೆಗಡೆ ವಿರುದ್ದ ಕಟುವಾಗಿ ಮಾತನಾಡಿದ ಮಾಜಿ ಸಚೀವ ಆನಂದ ಅಸ್ನೋಟಿಕರ್ ಕೂಡಲೇ ಕ್ಷಮೆ ಕೋರಬೇಕು. ರಾಜಕೀಯದಲ್ಲಿ ಚಲಾವಣೆ ಇಲ್ಲದ ನಾಣ್ಯವಾಗಿದ್ದ ಇವರು, ಸಂಸದರ ಬಗ್ಗೆ ಹೇಳಿಕೆ ನೀಡಿ ಪ್ರಚಾರ ಪಡೆದು ತಮ್ಮ ರಾಜಕೀಯದ ಬೇಳೆ ಬೆಯಿಸಿಕೊಳ್ಳಲು ಬಂದಂತೆ ಕಾಣಿಸುತ್ತದೆ. ರಾಜಕೀಯದ ಮುಳುಗಲಿದ್ದೇನೆ ಎನ್ನುವ ಭಯದಿಂದ ಆನಂದ ಅಸ್ನೋಟಿಕರ್ ಕೆಳಮಟ್ಟದ ಬುದ್ದಿಗೇಡಿತನದಲ್ಲಿ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಯಾವುದೇ ಪಕ್ಷದ ನಾಯಕರು ಅನಾರೊಗ್ಯಗೊಂಡಾಗ ಇಂತಹ ಹೇಳಿಕೆ ನೀಡುವುದು ಸಮಜಂಸವಲ್ಲ. ಇದು ತೆವಲು ತೀರಿಸಿಕೊಳ್ಳಲು ನೀಡುವ ಹೇಳಿಕೆಯಾಗಿದೆ. ಪಕ್ಷದಿಂದ ಪಕ್ಷಕ್ಕೆ ಅಧಿಕಾರದ ತೆವಲುತನ ತೋರುವ ಇವರಿಗೆ ಏನೆಂದು ಕರೆಯಬೇಕು. ಸಚೀವರಾಗಿ ಜಿಲ್ಲೆಗೆ ನೀಡಿದ ಕೊಡುಗೆ ಏನು? ಇವರ ವಿಧಾನಸಬಾ ಕ್ಷೇತ್ರ ಹೊರತುಪಡಿಸಿ ಉಳಿದಡೆ ಇವರು ಸಚೀವರಾಗಿದ್ದಾಗ ಬಂದಿದ್ದಾರ? ಅದಲ್ಲದೆ ಇವರು ಸಚೀವರಾಗಿದ್ದರು ಏನ್ನುವುದೆ ಜನ ಮರೆತಿದ್ದಾರೆ ಅಂತಹ ಆಡಳಿತ ಇವರು ನೀಡಿದ್ದಾರೆ. ಅಧಿಕಾರವಧಿಯಲ್ಲಿ ಶೂನ್ಯ ಸಾಧನೆ ಮಾಡಿ ಮತ್ತೊಬ್ಬರನ್ನು ಬೆರಳು ಮಾಡಿ ತೋರಿಸುವ ಇಂತಹವರಿಂದ ನಮ್ಮ ಸಂಸದರಿಗೆ ಪಾಠ ಬೇಕಿಲ್ಲ.
ಇತ್ತಿಚಿಗೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಇವರ ಕಾರ್ಯಕರ್ತರನ್ನು ಎಷ್ಟು ಜನ ಆಯ್ಕೆಯಾದರು ಅದನ್ನು ನೋಡಿದರೆ ಗೊತ್ತಾಗಲಿದೆ ಇವರ ಸಾಮರ್ಥ ಅರಿವಾಗಲಿದೆ. ನಮ್ಮ ಪಕ್ಷದ ಶಾಸಕರು ಸಂಸದರ ಅಭಿವೃದ್ದಿ ಕಾರ್ಯದಿಂದ ಕಂಗೆಟ್ಟು ಇಂತಹ ಹೇಳಿಕೆ ನೀಡಿರಬಹುದು. ಆದರೆ ಈ ಹೇಳಿಕೆ ವಾಪಸ್ಸು ಪಡೆಯದೇ ಹೋದಲ್ಲಿ ಮುಂದೆ ಹೊನ್ನಾವರಕ್ಕೆ ಬಂದಲ್ಲಿ ಘೇರಾವ್ ಹಾಕಲಾಗುವುದು. ಜಿಲ್ಲೆಯ ಅನೇಕ ರಾಜಕಾರಣಿಗಳ ಆಡಳಿತ ಮಾಡಿದರೂ, ಇಂತಹ ಹೇಳಿಕೆ ಇದುವರೆಗೆ ಯಾರು ನೀಡಿರಲಿಲ್ಲ. ಕೂಡಲೇ ಕ್ಷಮೆ ಯಾಚಿಸುವಂತೆ ಆಗ್ರಹಿಸಿದರು.
Leave a Comment