ಹೊನ್ನಾವರ : ತಾಲೂಕಿನ ಅಪ್ಸರಕೊಂಡ ಕಡಲ ತೀರದಲ್ಲಿ ಕಡಲಾಮೆ ಮರಿಗಳು ಪತ್ತೆಯಾಗಿದ್ದು ಸ್ಥಳೀಯರು ಸುರಕ್ಷಿತವಾಗಿ ಕಡಲಿಗೆ ಬಿಟ್ಟಿದ್ದಾರೆ.

ಅಪ್ಸರಕೊಂಡ ಕಡಲತೀರ ಕಡÀಲಾಮೆಗಳು ಅತೀ ಹೆಚ್ಚು ಮೊಟ್ಟೆ ಇಡುವ ಪ್ರದೇಶವಾಗಿದೆ. ಕಡಲಾಮೆಗಳು ಮೊಟ್ಟೆ ಇಟ್ಟ ಕುರುಹುಗಳು ಸಿಕ್ಕಲ್ಲಿ ಸ್ಥಳೀಯ ಮೀನುಗಾರರು ಅರಣ್ಯ ಇಲಾಖೆಗೆ ಮಾಹಿತಿ ನೀಡುತ್ತಿದ್ದರು. ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಮೊಟ್ಟೆಗಳನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲು ಮೊಟ್ಟೆ ಇಟ್ಟ ಸ್ಥಳಗಳಲ್ಲಿ ಪಂಜರವಿಟ್ಟು ಮರಿ ಹೊರ ಬಂದಮೇಲೆ ಅವುಗಳನ್ನು ಸಮುದ್ರಕ್ಕೆ ಬಿಡುತ್ತಿದ್ದರು.

ಇತ್ತೀಚೆಗೆ ಕಡಲಾಮೆ ಮೊಟ್ಟೆ ಇಟ್ಟಿರುವ ಬಗ್ಗೆ ಸ್ಥಳೀಯರಿಗೆ ತಿಳಿಯದಿರುವುದರಿಂದ ಅರಣ್ಯ ಇಲಾಖೆಗೆ ಮಾಹಿತಿ ತಲುಪಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬೆಳಗಿನ ಜಾವ ಮೀನುಗಾರರು ಮೀನುಗಾರಿಕೆಗೆ ತೆರಳುವ ಸಂಧರ್ಬದಲ್ಲಿ ಕಡಲಾಮೆ ಮರಿಗಳು ಹರಿದಾಡುತ್ತಿರುವುದನ್ನು ಗಮನಿಸಿದ್ದಾರೆ. ಅದರಲ್ಲಿ ಹಲವು ಮರಿಗಳು ಸಮುದ್ರದೆಡೆ ಹೋಗಿರುವ ಹೆಜ್ಜೆ ಗುರುತುಗಳು ಬಿದ್ದಿದ್ದು ಕೆಲವು ಮರಿಗಳಷ್ಟೇ ಅಲ್ಲಲ್ಲಿ ಹರಿದಾಡುತ್ತಿದ್ದರಿಂದ ಅವುಗಳನ್ನು ರಕ್ಷಣೆ ಮಾಡಿ ಸಮುದ್ರಕ್ಕೆ ಬಿಟ್ಟಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
Leave a Comment