ಹೊನ್ನಾವರ: ಪಟ್ಟಣ ವ್ಯಾಪ್ತಿಯ ಬಹುನಿರಿಕ್ಷೀತ ಶರಾವತಿ ಕುಡಿಯುವ ನೀರಿನ ಘಟಕ ಕಾಮಗಾರಿ ನಿರ್ಮಾಣದ ಡಿಜೈನ್ ಕೊಡಲು ವಿಳಂಭ ಹಿನ್ನಲೆಯಲ್ಲಿ ಶಾಸಕ ದಿನಕರ ಶೆಟ್ಟಿಯಿಂದ ಅಧಿಕಾರಿಗೆ ದೂರವಾಣೆಯ ಮೂಲಕವೇ ಕ್ಲಾಸ್ ತೆಗೆದುಕೊಂಡರು.

ಪಟ್ಟಣದ ನಿರ್ಮಣ ಕಾಮಗಾರಿಯ ಸ್ಥಳದಿಂದಲೇ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕರು 24 ಗಂಟೆಯಲ್ಲಿ ನೀಡದೇ ಹೊದಲ್ಲಿ ಪಟ್ಟಣ ಪಂಚಾಯತಿಯ ಜನಪ್ರತಿನಿಧಿಗಳನ್ನು ಕಛೇರಿಗೆ ಕರೆದುಕೊಂಡು ಬರುವುದಾಗಿ ಹೇಳಿದರು. ಈ ಬಗ್ಗೆ ಪರಿಶೀಲನೆ ನಡೆಸಿ ನಾಳೆ ಮಧ್ಯಾಹ್ನದೊಳಗೆ ಕಳುಹಿಸಿದಾಗಿ ಭರವಸೆ ನೀಡಿದರು.
ನಂತರ ಮಾಧ್ಯಮದರೊಂದಿಗೆ ಮಾತನಾಡಿ ಮಳೆಗಾಲ ಆರಂಭಗೊಳ್ಳುವ ಮುನ್ನ ಪಿಲ್ಲರ್ ನಿರ್ಮಾಣವಾಗದೇ ಹೊದಲ್ಲಿ ಮತ್ತೆ ಕೆಲಸ ವಿಳಂಭವಾಗಲಿದೆ. ಈಗಾಗಲೇ ಮರಳು ಜಲ್ಲಿ ಸಮಸ್ಯೆ ಬಗೆಹರಿಸಲಾಗಿದ್ದು, ಒಂದು ತಿಂಗಳೊಳಗೆ ಪಿಲ್ಲರ್ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು. ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷ ಶಿವರಾಜ ಮೇಸ್ತ ಉಪಾಧ್ಯಕ್ಷೆ ಮೇಧಾ ನಾಯ್ಕ, ಸದಸ್ಯರಾದ ವಿಜಯ ಕಾಮತ್, ನಾಗರಾಜ್ ಭಟ್, ಮಹೇಶ ಮೇಸ್ತಾ, ಮುಖಂಡರಾದ ಉಮೇಶ ನಾಯ್ಕ, ಎಮ್.ಎಸ್.ಹೆಗಡೆ, ರವಿ ನಾಯ್ಕ ಮತ್ತಿತರರು ಇದ್ದರು.
Leave a Comment