ಹೊನ್ನಾವರ; ರಾಜ್ಯ ಸರ್ಕಾರ ಜಾರಿಗೊಳಿಸಿದ ಲಾಕ್ ಡೌನ್ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಅನಾವಶ್ಯಕ ಸಂಚಾರಕ್ಕೆ ಪ್ರಥಮ ದಿನ ಪೋಲಿಸ್ ಇಲಾಖೆ ಬ್ರೇಕ್ ಆಗಿದೆ.
ಪಟ್ಟಣದ ಗೇರುಸೊಪ್ಪಾ ವೃತ್ತ, ಶರಾವತಿ ವೃತ್ತ, ಬಜಾರ ರಸ್ತೆಗೆ ಸೇರುವ ಪ್ರದೇಶದಲ್ಲಿ ಬ್ಯಾರಿಕೇಡ್ ಅಳವಡಿಸಿ ಪೋಲಿಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಪಟ್ಟಣದಲ್ಲಿ ಮೆಡಿಕಲ್ ಹೊರತುಪಡಿಸಿ ಉಳಿದೆಲ್ಲ ಅಂಗಡಿಗಳನ್ನು ಮುಚ್ಚಲಾಗಿದೆ. ಪಟ್ಟಣದಲ್ಲಿ ಪ್ರತಿ ಮನೆ ಬಾಗಿಲಿಗೆ ದಿನಸಿ ,ತರಕಾರಿ, ಹಣ್ಣು ವಿತರಣೆಗೆ ವ್ಯವಸ್ಥೆ ಕಲ್ಪಿಸಿದ್ದು, ಅಂಗಡಿ ಮಾಲೀಕರ ದೂರವಾಣಿ ಸಂಖ್ಯೆಯನ್ನು ನೀಡಲಾಗಿದೆ. ಪ್ರತಿ ವಾರ್ಡವಾರು ವಿಂಗಡನೆ ಮಾಡಿದ್ದು ಅಗತ್ಯವಸ್ತುಗಳ ವಿತರಣೆಯಲ್ಲಿ ಸಮಸ್ಯೆ ಆಗದಂತೆ ಸಹಾಯವಾಣಿ ಆರಂಭಿಸಲಾಗಿದೆ. ಮೆಡಿಕಲ್ ಹಾಗೂ ವೈದ್ಯಕೀಯ ಸೇವೆಗೆ ಆಗಮಿಸುವ ಪ್ರತಿಯೊರ್ವರನ್ನು ವಿಚಾರಿಸಿಯೇ ಕಳುಹಿಸಲಾಗಿತ್ತಿದೆ. ತಾಲೂಕಿನ ಎಲ್ಲಾ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೂ ತಮ್ಮ ಕಛೇರಿಯಲ್ಲಿ ಸಾಮಾಜಿಕ ಅಂತರ ಹಾಗೂ ಮಾಸ್ಕ ಕಡ್ಡಾಯ ನಿಯಮ ಜಾರಿಗೊಳಿಸಿದ್ದು, ಕೊವಿಡ್ ನಿಯಂತ್ರಣಕ್ಕೆ ಹಲವು ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ತಹಶೀಲ್ದಾರರು, ಸಿಪಿಐ, ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳು ತಮ್ಮ ಇಲಾಖೆಯ ಸಿಬ್ಬಂದಿಯಿಂದ ಪ್ರತಿ ಗಂಟೆಗೂ ಮಾಹಿತಿ ಪಡೆಯುತ್ತಿದ್ದು ಹಲವು ಸಲಹೆ ಸೂಚನೆ ನೀಡುತ್ತಿದ್ದಾರೆ. ಬಡ ಹಾಗೂ ಮಧ್ಯಮ ವರ್ಗದ ಸಾರ್ವಜನಿಕರು ದಿನಸಿ ತರಕಾರಿ ಪಡೆಯಲು ಕೆಲವು ಸಮಸ್ಯೆಗಳು ಎದುರಾಗಿದ್ದು, ನೆರೆಹೊರೆಯವರು ಸಹಾಯ ಮಾಡುತ್ತಿರುವುದು ಕಂಡು ಬಂದಿದೆ
Leave a Comment