ಹೊನ್ನಾವರ: ತೌಕ್ತೆ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸ್ಥಳೀಯ ಹಿರಿಯ ಸಿವಿಲ್ ನ್ಯಾಯಾಧೀಶ ಚೆನ್ನಕೇಶವ ರೆಡ್ಡಿ ಹಾಗೂ ಜೆ. ಎಮ್.ಎಫ್.ಸಿ ನಾಯ್ಯಾಧೀಶೆ ಸನ್ಮತಿ ಎಸ್.ಆರ್ ಭೇಟಿ ನೀಡಿ ಹಾನಿಯ ಮಾಹಿತಿ ಪಡೆದರು.

ಕರ್ಕಿ ಗ್ರಾಮದ ಪಾವಿನಕುರ್ವೆಯ ಮಾದೇವಿ ಮಾಸ್ತಿ ಮುಕ್ರಿ ಮನೆಯ ಮೇಲೆ ಮರಗಳು ಉರುಳಿ ಹಾನಿಗೊಳಗಾದ್ದನ್ನು ಪರಿಶೀಲಿಸಿದ ನ್ಯಾಯಾಧೀಶರು ಕಂದಾಯ ಇಲಾಖೆಯ ಮಾಹಿತಿಯನ್ನು ಪಡೆದು ವಿವರವನ್ನು ಸಂಗ್ರಹಿಸಿದರು.

ಜಿಲ್ಲಾ ನ್ಯಾಯಾಲಯದ ಆದೇಶದ ಹಿನ್ನಲೆಯಲ್ಲಿ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಿಗೆ ನ್ಯಾಯಾಧೀಶರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.
ಈ ಸಂದರ್ಭದಲ್ಲಿ ಕಂದಾಯ ನೀರಿಕ್ಷಕ ಕುಮಾರ್ ಯಲ್ಲಪ್ಪ ಪಾಟೀಲ್, ವಿನೋದ ಪಂಡಿತ ಹಾಗೂ ಇನ್ನೀತರ ಅಧಿಕಾರಿಗಳು ಉಪಸ್ಥಿತರಿದ್ದರು.
Leave a Comment