ಹೊನ್ನಾವರ: ತಾಲೂಕಿನ ಕವಲಕ್ಕಿಯ ಕುಮಾರಿ ಲತಾ ಭಟ್ ಅವರು ಹಿಮಾಚಲ ಪ್ರದೇಶದ ಸುಂದರನಗರದಲ್ಲಿರುವ ರೇಂಜರ್ಸ್ಕಾಲೇಜಿನಲ್ಲಿ ವಲಯ ಅರಣ್ಯಾಧಿಕಾರಿ ತರಬೇತಿಯನ್ನುಮುಗಿಸಿದ್ದು ಅರಣ್ಯ ಶಾಸ್ತ್ರದಲ್ಲಿ ಮತ್ತು ವಲಯ ಆಡಳಿತದಲ್ಲಿರಜತ ಪದಕ ಮತ್ತು ಎಲ್ಲ ವಿಷಯಗಳಲ್ಲಿಸಂಯುಕ್ತವಾಗಿ ಸ್ವರ್ಣ ಪದಕ ಪಡೆದಿದ್ದಾರೆ.

ಬಾಲ್ಯದಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡುಮಾವ ಎಸ್.ಆರ್.ಎಲ್. ಸಮೊಹ ಸಂಸ್ಥೆ ಯ ಮಾಲಕ ವೆಂಕಟ್ರಮಣ ಹೆಗಡೆ ಮತ್ತು ಅತ್ತೆ ಗೀತಾಇವರ ಮಾರ್ಗದರ್ಶನದಲ್ಲಿ ಬೆಳೆದು ಓದಿನಲ್ಲಿ ಸದಾ ಮುಂದಿದ್ದುವಿದ್ಯಾರ್ಥಿವೇತನದಿಂದಲೇ ಶಿರ್ಸಿ ಅರಣ್ಯ ಕಾಲೇಜಿನಲ್ಲಿ ಬಿಎಸ್ಸಿಅರಣ್ಯಶಾಸ್ತ್ರ ಪದವಿ ಪಡೆದಿದ್ದಾರೆ. ಬಾಲ್ಯದಲ್ಲಿ ಆಶ್ರಯ ನೀಡಿದ ಹಾಗೂ ಮಗಳಂತೆ ಪೋಷಿಸಿದ ಅತ್ತೆ,ಮಾವ, ಅವಳನ್ನುಸರ್ಕಾರಿ ಅಧಿಕಾರಿಯಾಗು ಎಂದ ಅಜ್ಜನ ಆಶೀರ್ವಾದವನ್ನುನೆನೆಸಿಕೊಳ್ಳುವ ಲತಾ ಗುರಿ ದೊಡ್ಡದಾಗಿದ್ದರೆ ಜೀವನದಲ್ಲಿಬರುವ ಸಮಸ್ಯೆಗಳೆಲ್ಲಾ ಗೌಣ ಎಂಬುದನ್ನುಸಾಬೀತುಪಡಿಸಿದ್ದಾರೆ.
Leave a Comment