• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಅಂಬ್ಯುಲೆನ್ಸ್ ಡ್ರೈವರ್‍ಗಳ ಡೀಲಿಂಗ್ ಸುಳ್ಳು ವಧಂತಿ ದೃಢ;ಸಾಗರದ ಖಾಸಗಿ ಆಸ್ಪತ್ರೆಯವರಿಂದ ಭಟ್ಕಳ ಸರಕಾರಿ ಆಸ್ಪತ್ರೆಯ ಮೇಲೆ ವಕ್ರದೃಷ್ಟಿ

June 4, 2021 by bkl news Leave a Comment

ಭಟ್ಕಳ: ಕೋವಿಡ್ ಹಿನ್ನೆಲೆ ಭಟ್ಕಳ ಸರಕಾರಿ ಆಸ್ಪತ್ರೆಗೆ ಅಕ್ಕಪಕ್ಕದ ಜಿಲ್ಲೆಗಳಾದ ಶಿವಮೊಗ್ಗ ಹಾವೇರಿಗಳಿಂದ ರೋಗಿಗಳು ದಾಖಲಾಗಿ ಉತ್ತಮ ಚಿಕಿತ್ಸೆ ಪಡೆದು ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದ್ದು ಅತ್ತ ಭಟ್ಕಳ ಆಸ್ಪತ್ರೆಯ ಹೆಸರು ಕೇಡಿಸುವ ಸಾಗರದ ಖಾಸಗಿ ಆಸ್ಪತ್ರೆಯವರ ಹುನ್ನಾರದ ಮಧ್ಯೆ ಓರ್ವ ಸಾಗರದ ಮೂಲದ ಕೋವಿಡ್ ದೃಢಪಟ್ಟ ವೃದ್ಧ ಮಹಿಳೆಯೂ ಮಂಗಳವಾರದಂದು 15 ದಿನಗಳ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳಿದ್ದು ಅವರನ್ನು ಸರಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ ಅವರು ಹೂಗುಚ್ಛ ನೀಡಿ ಬೀಳ್ಕೋಟ್ಟರು.


ಮೇ 18ರಂದು ಸಾಗರದಲ್ಲಿ 66 ವರ್ಷದ ವೃದ್ದ ಮಹಿಳೆಗೆ ಕೋವಿಡ್ ದೃಢಪಟ್ಟು ಆಕೆಗೆ ತೀವ್ರ ಕೆಮ್ಮು, ಬಿ.ಪಿ. ಶುಗರ್ ಇದ್ದ ಹಿನ್ನೆಲೆ ಅಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್ ಪಡೆದು ಆಕ್ಸಿಜನ್ ನೀಡಿದರು ಸಹ ಸ್ಯಾಚುರೇಶನ್ ಹಂತ ಇಳಿಮುಖವಾಗುತಿದ್ದ ಭಯ ಭೀತರಾಗಿದ್ದರು.

ಇದೇ ವೇಳೆ ಸಾಗರದಲ್ಲಿ ಅವರ ಗೆಳೆಯ ಬಳಗದ ಸೋಶಿಯಲ್ ವೇಲ್ಪೇರ್ ಎಂಬ ವಾಟ್ಸಾಪ್ ಗ್ರೂಪ್ ಮೂಲಕ ಭಟ್ಕಳ ಸರಕಾರಿ ಆಸ್ಪತ್ರೆಯ ಬಗ್ಗೆ ಮಾಹಿತಿ ತಿಳಿದು ಬಂದಿದ್ದು, ಈ ಬಗ್ಗೆ ಸ್ನೇಹಿತರೋರ್ವರಿಂದ ಮಾಹಿತಿ ಕಲೆ ಹಾಕಿದ ವೃದ್ಧ ಮಹಿಳೆಯ ಪುತ್ರ ಫ್ರಾಕ್ಲೀನ್ ಎಂಬುವವರು ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್ ಸಹಿತ ಉತ್ತಮ ವ್ಯವಸ್ಥೆಯಿದ್ದು ಯಾವುದೇ ಊರಿನ ರೋಗಿಗಳು ತೆರಳಿದ್ದರು ಸಹ ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಾರೆ ಹಾಗೂ ತೆರಳಿದ ಎಲ್ಲಾ ರೋಗಿಗಳು ಆರೋಗ್ಯವಾಗಿ ಮನೆಗೆ ಬಂದಿರುವ ಬಗ್ಗೆ ದೃಢಪಟ್ಟಿತ್ತು.


ಕೋವಿಡ್ ದೃಢಪಟ್ಟ ವೃದ್ಧ ಮಹಿಳೆಗೆ ಶಿವಮೊಗ್ಗ 70 ಕಿ.ಮೀ. ಆಗಲಿದ್ದು ಭಟ್ಕಳ 120 ಕಿ.ಮೀ. ಆಗುತ್ತಿದ್ದರು ಸಹ ಭಟ್ಕಳ ಸರಕಾರಿ ಆಸ್ಪತ್ರೆಯ ಉತ್ತಮ ಸೇವೆಯ ಮಾಹಿತಿಯ ಹಿನ್ನೆಲೆ ವೃದ್ಧ ಮಹಿಳೆಯ ಪುತ್ರ ಫ್ರಾಕ್ಲೀನ್ ಅವರು ತಕ್ಷಣಕ್ಕೆ ಖಾಸಗಿ ಅಂಬ್ಯುಲೆನ್ಸ ಮಾಡಿಕೊಂಡು ನೇರವಾಗಿ ಮಾವಿನಗುಂಡಿ, ಹೊನ್ನಾವರ ಮಾರ್ಗವಾಗಿ ಭಟ್ಕಳ ಸರಕಾರಿ ಆಸ್ಪತ್ರೆಗೆ ಬಂದಿದ್ದರು. ಆಸ್ಪತ್ರೆಗೆ ಬಂದ ಕೋವಿಡ್ ದೃಢಪಟ್ಟ ಮಹಿಳೆಯನ್ನು ನೇರವಾಗಿ ದಾಖಲಿಸಿ ಚಿಕಿತ್ಸೆ ನೀಡಲು ಆರಂಭಿಸಿದ್ದ ಸರಕಾರಿ ಆಸ್ಪತ್ರೆಯ ವೈದ್ಯರು ತೀರಾ ಹದಗೆಟ್ಟ ಪರಿಸ್ಥಿತಿಯಲ್ಲಿ ಬಂದಿರುವವರನ್ನು ದಿನದಿಂದ ದಿನಕ್ಕೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುವಂತೆ ಚಿಕಿತ್ಸೆ ಮುಂದುವರೆಸಿದರು.ಈ ಮಧ್ಯೆ ದಾಖಲಾದ ವೃದ್ಧ ಮಹಿಳೆಗೆ ಊಟ ತಿಂಡಿ ಸಹಿತ ಔಷಧೋಪಚಾರಕ್ಕೆ ಕೊರತೆ ಆಗದಂತೆ ನೋಡಿಕೊಂಡಿದ್ದು ತಾಯಿಯ ಆರೋಗ್ಯದ ಹದಗೆಟ್ಟ ಪರಿಸ್ಥಿತಿಯಿಂದ ಕಂಗಾಲಾಗಿದ್ದ ವೃದ್ಧ ಮಹಿಳೆಯ ಪುತ್ರ ಫ್ರಾಕ್ಲೀನ್ ಅವರಿಗೂ ಸಹ ಊಟ ತಿಂಡಿ ನೀಡಿದ್ದು ಪರ ಊರಿನವರನ್ನು ಸಮರ್ಪಕವಾಗಿ ಉಪಚರಿಸಿದ್ದಾರೆ. ಕೊನೆಯ ಹಂತದ ತಲುಪಿದ್ದ ಸಾಗರ ಮೂಲದ 66 ವರ್ಷದ ವೃದ್ಧ ಮಹಿಳೆಯೂ ಸಂಪೂರ್ಣ ಆರೋಗ್ಯವಾಗಿ ಚೇತರಿಕೆ ಹೊಂದುವಂತೆ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ ಹಾಗೂ ಅವರ ವೈದ್ಯರ, ನರ್ಸಗಳ ತಂಡ ಕೆಲಸ ಮಾಡಿದ್ದು ವೃದ್ಧ ಮಹಿಳೆಯ ಪುತ್ರ ಫ್ರಾಕ್ಲೀನ್ ಅವರು ಅವರಿಗೆ ಧನ್ಯವಾದವನ್ನು ತಿಳಿಸಿದ್ದಾರೆ.


{ಕೋಟ್ : ಫ್ರಾಕ್ಲೀನ್- ವೃದ್ಧ ಮಹಿಳೆಯ ಪುತ್ರ.‘ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ವ್ಯವಸ್ಥೆಗಳಿವೆ. ಸ್ವಂತ ಊರಿನವರಂತೆ ಪರ ಊರು, ತಾಲೂಕಿನಿಂದ ಬರುವ ರೋಗಿಗಳನ್ನು ಉಪಚರಿಸಿ ಅವರಿಗೆ ಧೈರ್ಯ ತುಂಬಿ ಕೋವಿಡ್ ಹೋಗಲಾಡಿಸುವಂತಹ ಕೆಲಸ ಮಾಡುತ್ತಿದ್ದಾರೆ. ಸಾಗರ ತಾಲೂಕಿನಲ್ಲಿ ಕೋವಿಡ ರೋಗಿಗಳಿಗೆ ಯಾವುದೇ ಸಮರ್ಪಕ ಚಿಕಿತ್ಸೆ ಸಿಗುತ್ತಿಲ್ಲವಾಗಿದ್ದು, ನಮಗೆ ಶಿವಮೊಗ್ಗ ಹೋಗಬೇಕಾದ ಸ್ಥಿತಿ ಇದ್ದರು ಸಹ ಅಲ್ಲಿನ ಆಸ್ಪತ್ರೆಯ ಮೇಲೆ ನಂಬಿಕೆಯಿಲ್ಲವಾಗಿತ್ತು. ನೇರವಾಗಿ ಭಟ್ಕಳಕ್ಕೆ ಬಂದಿದ್ದರ ಹಿನ್ನೆಲೆ 3 ದಿನಗಳ ಕಾಲ ಆಕ್ಸಿಜನ ರಹಿತವಾಗಿ ಚೇತರಿಕೆಯಿಂದ ತಾಯಿ ಇದ್ದ ಹಿನ್ನೆಲೆ ಆಸ್ಪತ್ರೆಯ ಮೇಲೆ ನಂಬಿಕೆ ಹೆಚ್ಚಾಗಿದೆ. ನನ್ನ ತಾಯಿ ಬದುಕಿ ಬರಲು ಕಾರಣ ಭಟ್ಕಳ ಸರಕಾರಿ ಆಸ್ಪತ್ರೆಯಾಗಿದೆ.’}


{ಕೋಟ್: ಡಾ. ಸವಿತಾ ಕಾಮತ- ಸರಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ, ಭಟ್ಕಳ.‘ಹೊರ ಜಿಲ್ಲೆಯಿಂದ ಭಟ್ಕಳ ಸರಕಾರಿ ಆಸ್ಪತ್ರೆಗೆ ಬರುವ ಕೋವಿಡ್ ರೋಗಿಗಳ ಅಥವಾ ಇನ್ಯಾವುದೇ ಕೋವಿಡ್ ರಹಿತ ರೋಗಿಗಳ ದಾಖಲಾತಿ ಹೆಚ್ಚಿವೆ. ಬರುವಂತಹ ರೋಗಿಗಳನ್ನು ವಾಪಸ್ಸು ಕಳುಹಿಸದೇ ಅವರಿಗೆ ಚಿಕಿತ್ಸೆ ನೀಡುವ ಕೆಲಸ ನಮ್ಮದಾಗಿದ್ದು ಅದರಂತೆ ಸಾಗರದ 66 ವರ್ಷದ ವೃದ್ಧ ಮಹಿಳೆಯನ್ನು ದಾಖಲಿಸಿ ಚಿಕಿತ್ಸೆ ನೀಡಿದ್ದೇವೆ. ಸಂಪೂರ್ಣ ಕೊನೆಯ ಹಂತಕ್ಕೆ ತಲುಪಿದ್ದ ವೃದ್ಧ ಮಹಿಳೆಯೂ ಈಗ ಚೇತರಿಕೆಗೊಂಡು ಮನೆಗೆ ತೆರಳುತ್ತಿರುವುದು ಸಂತಸವಾಗಿದೆ.}

ಅಂಬ್ಯುಲೆನ್ಸ್ ಡ್ರೈವರ್‍ಗಳ ಡೀಲಿಂಗ್ ಸುಳ್ಳು ವಧಂತಿಕೋವಿಡ್ ಎರಡನೇ ಅಲೆ ಆರಂಭದಲ್ಲಿಯೇ ಭಟ್ಕಳ ಸರಕಾರಿ ಆಸ್ಪತ್ರೆಗೆ ಅತೀ ಹೆಚ್ಚಾಗಿ ಶಿವಮೊಗ್ಗ, ಸಾಗರ, ಸೊರಬದಿಂದ ರೋಗಿಗಳು ಚಿಕಿತ್ಸೆಗಾಗಿ ಬರುತ್ತಿದ್ದರು. ಆದರೆ ಈ ನಡುವೆ ಕಳೆದ ಕೆಲ ದಿನಗಳ ಹಿಂದೆ ಅಂಬ್ಯುಲೆನ್ಸ್ ಡ್ರೈವರ್‍ಗಳು ಭಟ್ಕಳಕ್ಕೆ ಕರೆ ತರಲು ಹೆಚ್ಚಿನ ಹಣ ಪಡೆದು ರೋಗಿಗಳಿಂದ ಡೀಲಿಂಗ್ ಮಾಡಿಕೊಳ್ಳುತ್ತಿದ್ದ ಬಗ್ಗೆ ವಧಂತಿಗಳು ಹಬ್ಬಿತ್ತು.

ಇದರಿಂದ ಸರಕಾರಿ ಆಸ್ಪತ್ರೆಯ ಹೆಸರು ಹಾಳಾಗುತ್ತಿದ್ದ ಹಿನ್ನೆಲೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಅವರು ಹೊರ ಜಿಲ್ಲೆ ರೋಗಿಗಳ ದಾಖಲೆಯನ್ನು ನಿಲ್ಲಿಸಿದ್ದರು. ಕಾರಣ ಹೊರ ಜಿಲ್ಲೆಯ ರೋಗಿಗಳನ್ನು ಭಟ್ಕಳದಲ್ಲಿ ದಾಖಲಿಸಿ ಚಿಕಿತ್ಸೆ ನೀಡುವಂತೆ ಜಿಲ್ಲಾಢಳಿತ, ತಾಲೂಕಾಢಳಿತ ಸೂಚಿಸಿಲ್ಲದರ ಮಧ್ಯೆಯೂ ಸಹ ಆಸ್ಪತ್ರೆಯ ಹೆಸರು ಹಾಳಾಗಬಾರದು ಎಂಬ ಹಿನ್ನೆಲೆಯಲ್ಲಿ ನಿಲ್ಲಿಸಲಾಗಿತ್ತು.ಇವೆಲ್ಲದರ ಮಧ್ಯೆ ಸಾಗರ ಶಿವಮೊಗ್ಗದಿಂದ ಸಾಕಷ್ಟು ದೂರವಾಣಿ ಕರೆಗಳು ಬರುತ್ತಿದ್ದು, ಇದಕ್ಕೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಅವರು ಕರೆ ಮಾಡಿದವರಿಗೆ ನಡೆದ ಘಟನೆಯ ಬಗ್ಗೆ ವಿವರಿಸಿ ಭಟ್ಕಳ ತಾಲೂಕಾಸ್ಪತ್ರೆಯ ಬಗ್ಗೆ ಕೆಟ್ಟ ಹೆಸರು ಕೇಳಿ ಬರುತ್ತಿದ್ದು ಈ ಬಗ್ಗೆ ನಿಮ್ಮ ಜಿಲ್ಲೆಯಿಂದ ಸರಿಯಾದ ನೈಜ ಸಂಗತಿ ತನಿಖೆ ಮಾಡಿದ ಬಳಿಕವಷ್ಟೇ ದಾಖಲೆ ಮಾಡಿಕೊಳ್ಳಲಿದ್ದೇನೆಂದು ತಿಳಿಸಿದರು. ಇದಾಗ ಕೆಲ ದಿನದ ಬಳಿಕ ಓರ್ವ ಅಲ್ಲಿನ ಪತ್ರಕರ್ತರು ಈ ಬಗ್ಗೆ ಸಮರ್ಪಕ ಮಾಹಿತಿ ಕಲೆ ಹಾಕಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಅವರಿಗೆ ಶಿವಮೊಗ್ಗ, ಸಾಗರದ ಸ್ಥಳಿಯ ಖಾಸಗಿ ಆಸ್ಪತ್ರೆಯಿಂದ ಈ ರೀತಿಯ ಸುಳಳು ವಧಂತಿ ಸೃಷ್ಠಿಯಾಗಿದ್ದು ಇದರಲ್ಲಿ ಯಾವುದೇ ಅಂಬ್ಯುಲೆನ್ಸ ಚಾಲಕರ ತಪ್ಪಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.

ಆಸ್ಪತ್ರೆಯಮೇಲೆ ವಕ್ರದೃಷ್ಟಿ:ಸಾಕಷ್ಟು ದಿನಗಳ ಕಾಲ ಶಿವಮೊಗ್ಗ, ಸಾಗರ ತಾಲೂಕಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸಾವಿರಕ್ಕೂ ಅಧಿಕ ಹಣ ವ್ಯಯ ಮಾಡಿದರು ಸಹ ರೋಗಿಗಳು ಗುಣಮುಖರಾಗದ ಹಿನ್ನೆಲೆ ರೋಗಿಗಳ ಕುಟುಂಬಸ್ಥರಲ್ಲಿ ನೇರವಾಗಿ ಭಟ್ಕಳ ಸರಕಾರಿ ಆಸ್ಪತ್ರೆಯ ಉತ್ತಮ ಸೇವೆಯನ್ನು ತಿಳಿದು ಅಲ್ಲಿಂದ ಡಿಸ್ ಚಾರ್ಜ ಮಾಡಿಸಿ ಭಟ್ಕಳಕ್ಕೆ ಬರುತ್ತಿದ್ದನ್ನು ಗಮನಿಸಿದ ಕೆಲ ಖಾಸಗಿ ಆಸ್ಪತ್ರೆಯವರು ಭಟ್ಕಳ ಸರಕಾರಿ ಆಸ್ಪತ್ರೆಯ ಮೇಲೆ ವಕ್ರದೃಷ್ಟಿ ಬೀರುವಂತೆ ದುಸ್ಸಾಹಸಕ್ಕೆ ಕೈಹಾಕಿರುವದು ಜಗಜ್ಜಾಹಿರಾಗಿದೆ. ಇವೆಲ್ಲವೂ ಖಾಸಗಿ ಆಸ್ಪತ್ರೆಯ ಲಾಬಿಯಾಗಿದ್ದು, ಈ ಬಗ್ಗೆ ಬಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾದ ಎಲ್ಲಾ ಶಿವಮೊಗ್ಗ, ಸಾಗರ ಭಾಗದ ರೋಗಿಗಳಿಗೆ ಅಂಬ್ಯುಲೆನ್ಸ ಚಾಲಕರು ಪಡೆದುಕೊಳ್ಳುವ ಹಣದ ಬಗ್ಗೆ ಬಟ್ಕಳ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಅವರು ಮಾಹಿತಿ ಪಡೆದುಕೊಂಡಿದ್ದು ಅವರಿಂದಲೂ ಅಂಬ್ಯುಲೆನ್ಸ ಚಾಲಕರು ಯಾವುದೇ ಹೆಚ್ಚಿನ ಹಣ ಪಡೆದುಕೊಳ್ಳುತ್ತಿಲ್ಲ ಎಂಬುದು ಸಾಬೀತಾದ ಬಳಿಕ ಈಗ ಮತ್ತೆ ಹೊರ ಜಿಲ್ಲೆಯ ರೋಗಿಗಳ ದಾಖಲಾತಿ ಆರಂಬಿಸಿದ್ದಾರೆ..

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Bhatkal News, Canara News Tagged With: 66-year-old elderly woman of the ocean, Ambulance Drivers, bad name, Bhatkal Government Hospital, Bhatkal Taluk, Escape from Kovid, from the outer district, Hospital Lobby, Marine Patients, Overdose Hospital treatment, Shimoga, ಅಧಿಕ ಹಣ ವ್ಯಯ, ಅಂಬ್ಯುಲೆನ್ಸ ಚಾಲಕರು ಪಡೆದುಕೊಳ್ಳುವ ಹಣ, ಆಸ್ಪತ್ರೆಯ ಲಾಬಿ, ಆಸ್ಪತ್ರೆಯಮೇಲೆ ವಕ್ರದೃಷ್ಟಿ, ಉತ್ತಮ ಚಿಕಿತ್ಸೆ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ, ಭಟ್ಕಳ ತಾಲೂಕಾಸ್ಪತ್ರೆಯ ಬಗ್ಗೆ ಕೆಟ್ಟ ಹೆಸರು, ಭಟ್ಕಳ ಸರಕಾರಿ ಆಸ್ಪತ್ರೆ, ಶಿವಮೊಗ್ಗ, ಶಿವಮೊಗ್ಗ ಹಾವೇರಿಗಳಿಂದ ರೋಗಿಗಳು, ಸಾಗರ ಭಾಗದ ರೋಗಿಗಳಿಗೆ, ಸಾಗರದ 66 ವರ್ಷದ ವೃದ್ಧ ಮಹಿಳೆಯನ್ನು ಕೋವಿಡ್‍ನಿಂದ ಪಾರು, ಹೊರ ಜಿಲ್ಲೆಯಿಂದ

Explore More:

About bkl news

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,059 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar