ಹೊನ್ನಾವರ; ಕೊರೋನಾ ಮಹಾಮಾರಿಗೆ ಹಲವು ವರ್ಗದವರು ಸಂಕಷ್ಟದಲ್ಲಿದ್ದಾಗ ರಾಜ್ಯ ಸರ್ಕಾರ ವಿವಿದ ವರ್ಗಕ್ಕೆ ಪರಿಹಾರ ಪ್ಯಾಕೆಜ್ ಘೋಷಣೆ ಮಾಡಿತ್ತು. ಮತ್ಸಕ್ಷಾಮದ ಜೊತೆ ಮೀನು ಮಾರಾಟವಿಲ್ಲದೇ ಮೀನುಗಾರರು ಸಂಕಷ್ಟಕ್ಕೆ ಒಳಗಾಗಿದ್ದರು. ಜಿಲ್ಲೆಯ ಶಾಸಕರು ಜಿಲ್ಲಾ ಉಸ್ತುವಾರಿ ಸಚೀವರ ಮೂಲಕ ಮುಖ್ಯಮಂತ್ರಿಗಳಿಗೆ ಪರಿಹಾರ ಒದಗಿಸುವಂತೆ ಒತ್ತಾಯಿಸಿದ್ದರು.
ಎರಡನೇ ಹಂತದಲ್ಲಿ ಬಿಡುಗಡೆಯಾದ ಕೋವಿಡ್ ಪ್ಯಾಕೇಜನಲ್ಲಿ ಪ್ರತಿ ಮೀನುಗಾರರಿಗೆ ೩ ಸಾವಿರ ನಿಗಧಿ ಮಾಡುವ ಮೂಲಕ ರಾಜ್ಯ ಸರ್ಕಾರ ಮೀನುಗಾರರಿಗೆ ನೆರವಾಗಿದೆ. ಸಮಸ್ತ ಮೀನುಗಾರರ ಪರವಾಗಿ ಮುಖ್ಯಮಂತ್ರಿಗಳಿಗೆ, ಸರ್ಕಾರಕ್ಕೆ ,ಹಾಗೂ ಜಿಲ್ಲಾ ಉಸ್ತುವಾರಿ ಸಚೀವರು ಹಾಗೂ ಶಾಸಕರಿಗೆ ಪ.ಪಂ. ಅಧ್ಯಕ್ಷ ಮೀನುಗಾರ ಮುಖಂಡ ಶಿವರಾಜ ಮೇಸ್ತ ಅಭಿನಂದಿಸಿದ್ದಾರೆ.
Leave a Comment