ಹೊನ್ನಾವರ: ಪಟ್ಟಣ ಪಂಚಾಯತಿ ವತಿಯಿಂದ ಘನ ತ್ಯಾಜ್ಯ ವಿಲೇವಾರಿ ಘಟಕದ ಆವರಣದಲ್ಲಿ ೮೦ಕ್ಕೂ ಅಧಿಕ ಹಣ್ಣಿನ ಗಿಡ ನೆಡುವ ಕಾರ್ಯಕ್ಕೆ ಪ.ಪಂ. ಅಧ್ಯಕ್ಷ ಶಿವರಾಜ ಮೇಸ್ತ ಚಾಲನೆ ನೀಡಿದರು.ಹತ್ತಾರು ಎಕರೆ ಪ್ರದೇಶದಲ್ಲಿ ಘನತ್ಯಾಜ್ಯ ಪ್ರದೇಶದ ಖಾಲಿ ಇರುವ ಜಾಗದಲ್ಲಿ ಇದೇ ಪ್ರಥಮ ಬಾರಿಗೆ ಗಿಡ ಬೆಳೆಸುವ ಯೋಜನೆ ರೂಪಿಸಿದ ಅಧ್ಯಕ್ಷ ಶಿವರಾಜ ಮೇಸ್ತ ಪರಿಸರ ಕಾಳಜಿ ವಹಿಸಲು ಸನ್ನದ್ದರಾಗಿದ್ದಾರೆ.

ಜೆ.ಸಿ.ಬಿ ಯಂತ್ರ ಬಳಸಿ ೮೦ಕ್ಕೂ ಅಧಿಕ ಗುಂಡಿ ತೆಗೆದು ಪೂರ್ವ ಸಿದ್ದಪಡಿಸಿಕೊಂಡು ಗುರುವಾರ ಮಾವು, ಹಲಸು, ಜಂಬೆ, ನೇರಳೆ ಸೇರಿದಂತೆ ವಿವಿಧ ಹಣ್ಣಿನ ಗಿಡಗಳನ್ನು ನೆಡಲಾಯಿತು.ನಂತರ ಮಾಧ್ಯಮದವರೊಂದಿಗೆ ಪ.ಪಂ.ಅಧ್ಯಕ್ಷ ಶಿವರಾಜ ಮೇಸ್ತ ಮಾತನಾಡಿ ರಸ್ತೆ ಅಭಿವೃದ್ದಿ ಎಂದು ನಾವು ಇತ್ತಿಚೀನ ದಿನದಲ್ಲಿ ಮರಗಳನ್ನು ಕಡಿಯುತ್ತೇವೆ. ಪರಿಸರ ಸಮತೋಲನ ಕಾಯ್ದುಕೊಳ್ಳಲು ಗಿಡ ನೆಡುವುದು ಅತಿ ಅಗತ್ಯವಾಗಿದ್ದು, ಇಂದು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ೮೦ಕ್ಕೂ ಅಧಿಕ ಹಣ್ಣಿನ ಗಿಡ ನೆಡಲಾಗಿದ್ದು ಇದೊಂದು ಸಂತಸದ ಕ್ಷಣ ಎಂದರು.

ತಹಶೀಲ್ದಾರ ವಿವೇಕ ಶೇಣ್ವಿ ಮಾತನಾಡಿ ಪರಿಸರ ಉಳಿಸಿ ಬೆಳೆಸಬೇಕಾಗಿರುವುದು ತೀರಾ ಅಗತ್ಯವಾಗಿದೆ. ಕೊರೋನಾ ಸಮಯದಲ್ಲಿ ಆಕ್ಸಿಜನ್ ಪಡೆಯಲು ಹರಸಾಹಸ ಪಡುತ್ತಿದ್ದೇವೆ. ಅಭಿವೃದ್ಧಿ ದೃಷ್ಟಿಯಿಂದ ಪರಿಸರ ನಾಶವಾಗುವುದು ನಮ್ಮ ಕೈಮೀರಿ ಆಗುತ್ತಿದ್ದೆ. ನಮ್ಮ ಜನ್ಮದಿನದಂದು ಗಿಡ ನೆಡುವ ಹವ್ಯಾಸ ರೂಡಿಸಿಕೊಂಡು ನಾವೆಲ್ಲರೂ ಪರಿಸರದ ಬಗ್ಗೆ ಕಾಳಜಿಯ ಸಂಕಲ್ಪ ಮಾಡೋಣ ಎಂದು ಸಲಹೆ ನೀಡಿದರು.ವಲಯ ಅರಣ್ಯಾಧಿಕಾರಿ ಶರತ್ ಶೆಟ್ಟಿ ಸಾರ್ವಜನಿಕರಿಗೆ ಹಾಗೂ ಸಂಘ ಸಂಸ್ಥೆಗಳು ಗಿಡದ ಬೇಡಿಕೆ ಸಲ್ಲಿಸಿದಲ್ಲಿ ನೀಡಲು ಸಿದ್ದ ಎಂದರು.ಈ ಸಂದರ್ಭದಲ್ಲಿ ಪ.ಪಂ.ಮುಖ್ಯಾದಿಕಾರಿ ಪ್ರವೀಣಕುಮಾರ್, ಸದಸ್ಯರಾದ ನಾಗರಾಜ ಭಟ್, ವಿಜಯ ಕಾಮತ್, ಸುಭಾಷ್, ಇಂಜನಿಯರ್ ಸದಾನಂದ, ಸುನೀಲ,ಸೇರಿದಂತೆ ಪೌರ ಕಾರ್ಮಿಕರು ಹಾಜರಿದ್ದರು.
Leave a Comment