• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಲಸೆಂಬ ಸತ್ವಭರಿತ ಜೀವಾಮೃತ

June 11, 2021 by Vishwanath Shetty Leave a Comment

ಹೊನ್ನಾವರ : ಗೊಬ್ಬರ, ಔಷಧ, ನೀರು, ಆರೈಕೆ ಯಾವುದನ್ನೂ ವಿಶೇಷವಾಗಿ ಬಯಸದೆ ತಾನು ನಿಂತ ಸ್ಥಳದಿಂದಲೇ ನೂರಾರು ವರ್ಷ ಶುದ್ಧ, ಸತ್ವಭರಿತ ರುಚಿಕರವಾದ ಸಾವಯವ ಹಣ್ಣು ನೀಡುವ ಹಲಸಿನ ಮರ ನೀಡುವ ಹಣ್ಣು, ಕಾಯಿ ಪೋಷಕಾಂಶಗಳು ತುಂಬಿದ ಜೀವಾಮೃತ ಎಂಬುದು ಇತ್ತೀಚಿನ ದಿನಗಳಲ್ಲಿ ವೈಜ್ಞಾನಿಕ ಸಂಶೋಧನೆಗಳಿಂದಲೂ ಖಚಿತವಾಗಿದ್ದು ಮಧುಮೇಹ ನಿಯಂತ್ರಿಸಲು ಸಹಕಾರಿಯಾಗುತ್ತದೆ ಎಂದು ಹೇಳಲಾಗುತ್ತದೆ.

10 6 2021 3
jackfruit


ಹಿರಿಯರು ತೋಟ, ಗದ್ದೆಯ ಸುತ್ತಲೂ ಕಟ್ಟಿಗೆಗಾಗಿ ನೆಟ್ಟ ಮರ ಕೊಳೆತು ಹಣ್ಣುದುರುತ್ತಿದ್ದರೂ ಮಂಗಗಳ ಹೊರತಾಗಿ ಬೇರಾರೂ ಮೂಸಿ ನೋಡದ ಫಲ ಇಂದು ಪ್ರತಿಷ್ಠಿತರ ಮನೆಯ ಭೋಜನ ಮಂಚವನ್ನೇರಿ ಕೂತಿದೆ. ಕೆಲವು ದೇಶ ಮತ್ತು ಕೇರಳ ರಾಜ್ಯ ಹಲಸಿಗೆ ರಾಜಮಾನ್ಯತೆ ನೀಡಿದ್ದು ತನ್ನ ಹೆಗ್ಗುರುತಾಗಿ ಪ್ರದರ್ಶಿಸಿದೆ. ಉತ್ತರಕನ್ನಡದಲ್ಲಿಯೂ ಸಾಕಷ್ಟು ವೈವಿಧ್ಯಮಯವಾದ ಹಲಸು ಬೆಳೆಯುತ್ತಿದ್ದು ಶೇ. 25ರಷ್ಟು ಬಳಕೆಯಾಗುತ್ತಿಲ್ಲ. ಹಲಸಿನಿಂದ ಸಂಪ್ರದಾಯದಂತೆ ಏನೆಲ್ಲಾ ಮಾಡಬಹುದು, ಇತ್ತೀಚಿನ ಹೊಸ ಶೋಧನೆಗಳೇನು ಎಂಬುದನ್ನು ಇಲ್ಲಿ ಪರಿಚಯಿಸಬೇಕಾಗಿದೆ. ಹಲಸಿನ ಎಲೆಯ ಕೊಟ್ಟೆಯಲ್ಲಿ ತುಂಬಿಸಿದ ಇಡ್ಲಿಗೆ ಅದರದ್ದೇ ಆದ ರುಚಿ ಇರುತ್ತದೆ. ಎಳೆ ಹಲಸು ತರಕಾರಿಯಾಗಿ ಪಲ್ಯಕ್ಕೆ ಬಳಸಲ್ಪಡುತ್ತಿದ್ದರೆ ಬೆಳೆದ ಹಲಸು ಹಪ್ಪಳವಾಗಿ, ಸಂಡಿಗೆಯಾಗಿ ಚಪ್ಸ್ ಆಗಿ ಬಳಸಲ್ಪಡುತ್ತಿದೆ. ಕಾಯಿ ಸೊಳೆಗಳನ್ನು ಬಿಡಿಸಿ, ಕುದಿಸಿ ತಣಿಸಿದ ಉಪ್ಪು ನೀರಿನಲ್ಲಿ ಮುಳುಗಿಸಿಟ್ಟರೆ ಮಳೆಗಾಲಕ್ಕೂ ತರಕಾರಿಯಾಗುತ್ತದೆ.

10 6 2021 1


ಹಣ್ಣಾದ ಹಲಸು ದೋಸೆಯಾಗಿ, ಇಡ್ಲಿಯಾಗಿ ಮತ್ತು ಬರಿದೆ ತಿನ್ನಲು, ಜ್ಯೂಸ್, ಪಾಯಸ, ಹಲ್ವಾ, ಚೊಕಲೇಟ್, ಜಾಮ್, ಕೇಸರಿಬಾತ್, ಸುಟ್ಟೇವು, ಮೊದಲಾದ ತಿಂಡಿಗಳ ರೂಪದಲ್ಲಿ ಈಗ ಸಿದ್ಧವಾಗುತ್ತಿದೆ. ಹಲಸಿನ ಬೀಜ ಸಹ ಸಾಂಬಾರಿಗೆ ಬಳಕೆಯಾಗುತ್ತದೆ. ಬೀಜ ಜಜ್ಜಿ ಬೇಯಿಸಿ ಬೆಲ್ಲ, ಕಾಯಿ ಹಾಕಿ ಕಾಯಿಸಿದರೆ ಇದನ್ನು ಚಿಕ್ಕಚಿಕ್ಕದಾಗಿ ಕಟ್ಲೆಟ್‍ನಂತೆ ಮಾಡಿ ದೋಸೆ ಬಂಡಿಯಲ್ಲಿ ಬಿಸಿಮಾಡಿದರೆ ಬುಡ್ಡಣ್ಣನಾಗುತ್ತದೆ. ಇತ್ತೀಚಿನ ಹಲಸಿನ ಹೊಸ ತಿಂಡಿಗಳ ಕುರಿತು ಹಲವರು ವಿವರ ಕೇಳಿದ್ದಾರೆ. ಗಟ್ಟಿ ಹಲಸಿನ ಹಣ್ಣಿನ ಸೊಳೆ ಬಿಡಿಸಿ ಮಿಕ್ಸ್‍ಚರ್‍ನಲ್ಲಿ ಗೇರುಬೀಜ, ಬಾದಾಮಿ ಜೊತೆ ಅರೆದು ದ್ರಾಕ್ಷಿ, ಬೆಲ್ಲ ಅಥವಾ ಸಕ್ಕರೆ ಸೇರಿಸಿ ತೆಳು ಮಾಡಿದರೆ ಜ್ಯೂಸ್ ಆಯಿತು. ನೀರು ಸೇರಿಸದೆ ಕುದಿಸಿದರೆ ಘಮಘಮ ಪಾಯಸವಾಯಿತು.

10 6 2021 4
10 6 2021 5
10 6 2021 2

ಹಲಸಿನ ಹಣ್ಣಿನ ರಸ ತೆಗೆದು ಅದನ್ನು ಸಕ್ಕರೆಯ ಜೊತೆ ಕಾಯಿಸಿದಾಗ ತೆಳುವಾದ ಜಾಮ್ ಆಗುತ್ತದೆ ದಪ್ಪವಾದರೆ ಚೊಕಲೇಟ್ ಆಗುತ್ತದೆ. ಸೊಳೆಗಳನ್ನು ಅರೆದುಕೊಂಡು ಕೊಬ್ಬರಿ, ಬೆಲ್ಲ, ಹುರಿದ ಕಡ್ಲೆ ಅಥವಾ ಗೋಧಿ ಹಿಟ್ಟು ಕಾಸಿ ಗಟ್ಟಿ ಮಾಡಿದರೆ ಹಲ್ವಾ ಆಯಿತು. ಹಣ್ಣು ಚಿಕ್ಕಚಿಕ್ಕ ಹೋಳು ಮಾಡಿ ಸಕ್ಕರೆ ಹೂಡಿಟ್ಟು ಅರಳಿದ ಅನ್ನದ ಜೊತೆ ಸೇರಿಸಿ ಕಾಯಿಸಿದರೆ ಕೇಸರಿಬಾತಾಯಿತು. ಸೊಳೆಗಳನ್ನು ಮೈದಾ ಹಿಟ್ಟು, ಬೆಲ್ಲ ಸೇರಿಸಿ ಕಲಸಿ ಎಣ್ಣೆಯಲ್ಲಿ ಕರಿದರೆ ಸುಟ್ಟೇವಾಯಿತು. ಹಲಸಿನ ಸೊಳೆಗಳನ್ನು ಮಿಕ್ಸ್‍ಚರ್‍ನಲ್ಲಿ ಬೀಸಿಕೊಡು ಗೋಧಿಹಿಟ್ಟಿನಲ್ಲಿ ಹದವಾಗಿ ಕಲಸಿ ಲಟ್ಟಿಸಿ ತುಪ್ಪದಲ್ಲಿ ಬೇಯಿಸಿದರೆ ಘಮಘಮ ಚಪಾತಿ ಸಿದ್ಧ.
ಗ್ರಾಮೀಣ ಗೃಹಿಣಿಯರು ಕೋವಿಡ್ ಬಿಡುವಿನಲ್ಲಿ ಪ್ರಯೋಗ ಮಾಡಿದರೆ ಇನ್ನಷ್ಟು ತಿಂಡಿಗಳನ್ನು ಮಾಡುವುದು ಸಾಧ್ಯವಿದೆ. ಅದಕ್ಕೆ ಬೋಳಗೆರೆ ಶ್ರೀಮತಿ ಪುಷ್ಪಾ ಜಿ. ಭಟ್ ಮತ್ತು ಗುಣವಂತೆಯ ಮರಿ ಭಟ್ ಇವರಿಂದ ಮಾಹಿತಿ ಪಡೆದು ನಿಮಗೆ ಹಂಚಿದ್ದೇನೆ, ಮಾಡಿ ನೋಡಿ.


—– G U Bhat

G U Bhat
G U Bhat

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News, ಕೃಷಿ, ತಿಂಡಿ-ಅಡುಗೆ-ಆಹಾರ Tagged With: delicious organic fruit, fruit, fruit tree, Nut, Removing the fruit juice, the chips as a recipe, the elders garden, the new snacks, the yummy fruit, tree planting around the chin, what can be done traditionally, ಕಾಯಿ ಪೋಷಕಾಂಶಗಳು ತುಂಬಿದ ಜೀವಾಮೃತ, ಗದ್ದೆಯ ಸುತ್ತಲೂ ಕಟ್ಟಿಗೆಗಾಗಿ ನೆಟ್ಟ ಮರ, ನೀಡುವ ಹಣ್ಣು, ರುಚಿಕರವಾದ ಸಾವಯವ ಹಣ್ಣು, ವೈಜ್ಞಾನಿಕ ಸಂಶೋಧನೆ, ಸಂಡಿಗೆಯಾಗಿ ಚಪ್ಸ್ ಆಗಿ ಬಳಸಲ್ಪಡುತ್ತಿದೆ, ಹಲಸಿನ ಮರ, ಹಲಸಿನ ಹಣ್ಣಿನ ರಸ ತೆಗೆದು, ಹಲಸಿನ ಹೊಸ ತಿಂಡಿಗಳ, ಹಲಸಿನಿಂದ ಸಂಪ್ರದಾಯದಂತೆ ಏನೆಲ್ಲಾ ಮಾಡಬಹುದು, ಹಲಸು ಹಪ್ಪಳವಾಗಿ, ಹಿರಿಯರು ತೋಟ

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...