ಭಟ್ಕಳ: ತಾಲೂಕಿನ ಬಸ್ ನಿಲ್ದಾಣದ ಎದುರಿನ ಅಂಗಡಿ ಮುಂಬಾಗದಲ್ಲಿ ಕೆಲ ದಿನಗಳಿಂದ ವಾಸವಿದ್ದ ಭಿಕ್ಷುಕನೊರ್ವ ಮಲಗಿರುವ ಸ್ಥಿತಿಯಲ್ಲಿ ರವಿವಾರ ಸಾವನ್ನಪ್ಪಿರುವ ಘಟನೆ ನಡೆದಿದೆ.

ಲಾಕ್ ಡೌನ್ ಹಿನ್ನೆಲೆ ಕೆಲ ದಿನಗಳಿಂದ ಅಂಗಡಿ ಮಳಿಗೆಗಳು ಬಂದ ಇರುವುದರಿಂದ ತಾಲ್ಲೂಕಿನ ಕೆಲ ಅಂಗಡಿಗಳ ಎದುರು ಭಿಕ್ಷುಕರು ವಾಸವಾಗಿದ್ದರು .ಇವರಿಗೆ ದಿನ ನಿತ್ಯ ಇಲ್ಲಿನ ಮುಂಡಳ್ಳಿ ಸತ್ಯನಾರಾಯಣ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಊಟದ ವ್ಯವಸ್ಥೆ ಕೂಡ ಮಾಡಲಾಗುತ್ತಿತ್ತು .ಆದರೆ ತಾಲ್ಲೂಕಿನ ಬಸ್ ನಿಲ್ದಾಣದ ಎದುರು ಇರುವ ಚಹಾದ ಅಂಗಡಿ ಎದುರು ವಾಸವಾಗಿದ್ದ ಓರ್ವ ಭಿಕ್ಷುಕ ರಾತ್ರಿ ಮಲಗಿರುವ ಸ್ಥಿತಿಯಲ್ಲಿ ಇಂದು ಸಾವನ್ನಪ್ಪಿದ್ದಾನೆ .

ಇದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲಿಸಿ.ಮೃತ ದೇಹವನ್ನು ಪುರಸಭೆಗೆ ಹಸ್ತಾಂತರಿಸಿದ್ದು ಪುರ ಸಭೆ ಪೌರ ಕಾರ್ಮಿಕರು ಮೃತ ದೇಹದವನ್ನು ಇಲ್ಲಿನ ಕಾರ್ಗದ್ದೆಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.
Leave a Comment