ಹೊನ್ನಾವರ: ಪಾಕಿಸ್ಥಾನದಿಂದ ಭಾರತಕ್ಕೆ ಅಕ್ರಮವಾಗಿ ಆಗಮಿಸಿ ಭಟ್ಕಳದಲ್ಲಿ ನೆಲೆಸಿರುದಲ್ಲದೇ ಪಾಕಿಸ್ಥಾನ ಪೌರತ್ವ ಹೊಂದಿರುದನ್ನು ಪತ್ತೆ ಹಚ್ಚಿ ಬಂಧಿಸಿರುವುದು ಸ್ವಾಗತರ್ಹ ಎಂದು ಬಿಜೆಪಿ ಮಂಡಲ ಅಧ್ಯಕ್ಷ ರಾಜೇಶ ಭಂಡಾರಿ ಪೋಲಿಸರ ಕಾರ್ಯಕ್ಕೆ ಅಭಿನಂದಿಸಿದ್ದಾರೆ. ನಮ್ಮ ದೇಶದ ಕಾನೂನಿಗೆ ವಿರುದ್ದವಾಗಿ ಅಕ್ರಮವಾಗಿ ಪ್ರವೇಶಿಸುವ ಜೊತೆ ನಕಲಿ ದಾಖಲೆ ಸೃಷ್ಟಿಸಿಕೊಂಡಿರುವುದು ಆತಂಕಕಾರಿಯಾಗಿದೆ.

ನಕಲಿ ದಾಖಲೆ ಸೃಷ್ಟಿಸಲು ಸಹಕರಿಸಿದವರನ್ನು ಪೋಲಿಸ್ ಇಲಾಖೆ ತನಿಖೆ ತಿವ್ರಗೊಳಿಸಿ ಪತ್ತೆಹಚ್ಚಬೇಕಿದೆ. ಹಾಗೆಯೇ ಜಿಲ್ಲೆಯ ವಿವಿಧಡೆ ಇಂತಹ ಅಕ್ರಮವಾಗಿ ವಾಸವಾಗಿದ್ದವರು ಇದ್ದರೆ ಪತ್ತೆ ಹಚ್ಚುವಂತೆ ಆಗ್ರಹಿಸಿದ್ದಾರೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಬಿಜೆಪಿಮಂಡಲಧ್ಯಕ್ಷ ರಾಜೇಶ ಭಂಡಾರಿ ಆಗ್ರಹಿಸಿದ್ದಾರೆ.
Leave a Comment