ಹೊನ್ನಾವರ :ಪಟ್ಟಣದ ಬಂದರು ಪ್ರದೇಶದ ಮೀನುವ್ಯಾಪಾರ ಮಾಡುವ ಮಹಿಳೆಯ ಹಾಗೂ ಪುರುಷರನ್ನೊಳಗೊಂಡ ಜಲದೇವತಾ ಸಂಘದವರು ಬಡ ಅಸಾಯಕ ಮೀನುಗಾರರ ಬಂಧುಗಳಿಗೆ ಆಹಾರ ಧಾನ್ಯ ಕಿಟ್ ವಿತರಣೆ ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಕರೋನಾ ಮಹಾಮಾರಿಯ ಹಿನ್ನಲೆಯಲ್ಲಿ ಸಾಕಷ್ಟು ಮೀನುಗಾರರ ಬಂಧುಗಳು ಅದಾಯವಿಲ್ಲದೇ ಸಂಕಷ್ಟದಲ್ಲಿರುವಾಗ ತಮ್ಮಲ್ಲಿಯೇ ಹಣ ಸಂಗ್ರಹಿಸಿ ಹೊನ್ನಾವರದ ಸುಮಾರು 200 ಕುಟುಂಬಗಳಿಗೆ ಒಂದುಸಾವಿರ ರೂಪಾಯಿ ಮೌಲ್ಯದ ಆಹಾರ ಧಾನ್ಯಗಳ ಕಿಟ್ ವಿತರಿಸಿದ್ದಾರೆ. ಹೊನ್ನಾವರ ಬಂದರ ಮೀನುಮಾರುಕಟ್ಟೆಯ ಅವಾರದಲ್ಲಿ ಆಹಾರ ಕಿಟ್ ವಿತರಣೆ ಸಂದರ್ಭದಲ್ಲಿ ಮಾತನಾಡಿದ ಜಲದೇವತಾ ಸಂಘದ ಅಧ್ಯಕ್ಷೆ ಶ್ರೀಮತಿ ಗಂಗಾ ಬಾಬು ಮೇಸ್ತರವರು ಕರೋನಾ ಮಹಾಮಾರಿಯ ಸಂದರ್ಭದಲ್ಲಿ ಮೀನುಗಾರರು ತುಂಬಾ ತೊಂದರೆಯಲ್ಲಿದ್ದರೂ ಯಾರು ನಮ್ಮ ಸಹಾಯಕ್ಕೆ ಬಂದಿಲ್ಲ.
ಆದ್ದರಿಂದ ನಮ್ಮ ಮೀನುಗಾರರ ಬಂಧುಗಳಲ್ಲಿರುವ ತೀವ್ರ ನಿರ್ಗತಿಕರಿಗೆ,ವಿಧವೆಯರಿಗೆ ಹಾಗೂ ಅಂಗವಿಕಲರಿಗೆ ಕಡುಬಡವರಿಗೆ ಗುರಿತಿಸಿ ಪಟ್ಟಣದ ತುಳಸೀನಗರ,ಕೆಳಗಿನ ಪಾಳ್ಯ, ಉದ್ಯಮನಗರ, ಬಾಂದೇಹಳ್ಳ ಹಾಗೂ ಹಲವೆಡೆಗಳಲ್ಲಿ ಆಹಾರ ಸಾಮಾಗ್ರಿಗಳನ್ನು ನೀಡಿ ನಮ್ಮ ಕೈಲಾದ ಸೇವೆ ಮಾಡಿದ್ದೇವೆ ಎಂದರು. ಇ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ತುಕಾರಮ ಶೇಷಗಿರಿ ಮೇಸ್ತ ತುಳಸೀನಗರ,ಸದಸ್ಯರುಗಳಾದ ಸಂತೋಷ ಮೋನಪ್ಪ ಮೇಸ್ತ, ರಾಘವೇಂದ್ರ ವೆಂಕಟೇಶ ಮೇಸ್ತ, ಕಂಬ್ಲಾ ರುಕ್ಮಯ್ಯ ಮೇಸ್ತ, ನೀಲಾ ಗಣೇಶ ಮೇಸ್ತ ದಾಮೊದರ ಮೇಸ್ತ, ಗಂಗಾ ಬಾಬು ಮೇಸ್ತ , ಪುಂಡಲಿಕ್ ಕ್ರಷ್ಣ ಮೇಸ್ತ, ಗಣೇಶ ಲಕ್ಷ್ಮಣ ಮೇಸ್ತ ,ಗಣೇಶ ಮೇಸ್ತ ಸದಸ್ಯರು ಉಪಸ್ಥಿತರಿದ್ದರು.
Leave a Comment