ಯಲ್ಲಾಪುರ:ತಾಲೂಕಿನ ದೇಹಳ್ಳಿ ಗ್ರಾ.ಪಂ ವ್ಯಾಪ್ತಿಯ ಕುಂಬ್ರಾಳದಲ್ಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ನಿರ್ಮಾಣ ಮಾಡಿರುವ ರಸ್ತೆ ಕಾಮಗಾರಿಯ ವಿವಾದ ಈಗ ಇನ್ನೊಂದು ತಿರುವು ಪಡೆದುಕೊಂಡಿದ್ದು, ಅರಣ್ಯ ಇಲಾಖೆಯು ಈಗ ಗ್ರಾ.ಪಂ ಅಧ್ಯಕ್ಷ ದೇಹಳ್ಳಿ ಗ್ರಾ.ಪಂ ಅಧ್ಯಕ್ಷ ಶ್ರೀಪತಿ ರಾಮಚಂದ್ರ ಮುದ್ದೇಪಾಲ್ ಅವರ ಮೇಲೆ ಅರಣ್ಯ ಕಾಯ್ದೆ ಉಲ್ಲಂಘನೆಯ ಪ್ರಕರಣ ದಾಖಲಿಸಿದೆ.
ಮೇ. ೨೨ ರಂದು ದೇಹಳ್ಳಿಯ ಈ ಪ್ರದೇಶದಲ್ಲಿ ಅನದಿಕೃತವಾಗಿ ೨೫೦ ಮೀ. ದಾರಿ ಮಾಡಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ನಿಲ್ಲಿಸಿ ಪ್ರಕರಣ ದಾಖಲಿಸಿ ತಂತಿ ಬೇಲಿ ಹಾಕಲಾಗಿತ್ತಲ್ಲದೇ ಮತ್ತೆ ಇಂತಹ ಕೃತ್ಯ ಎಸೆಗದಂತೆ ಎಚ್ಚರಿಕೆ ನೀಡಲಾಗಿತ್ತು. ಅದಾಗ್ಯೂ ದೇಹಳ್ಳಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಬೆತ್ತದ ನೆಡುತೋಪು ನಿರ್ಮಾಣ ಮಾಡುತ್ತಿರುವುದನ್ನು ನೋಡಿಯೂ ಸಹ ೧೦೦ ಮೀ. ದಾರಿಯನ್ನು ನಿರ್ಮಾಣ ಮಾಡಲಾಗಿದೆ. ಈಗ ದಾರಿ ನಿರ್ಮಾಣ ಮಾಡಿರುವ ಸದ್ಥಳದಲ್ಲಿ ಎರಡೂ ಬದಿ ಕಂದಕ ತೆಗೆದು ಸಸಿಗಳನ್ನು ನೆಡಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
Leave a Comment