ಹೊನ್ನಾವರ ;ತಾಲೂಕಿನಲ್ಲಿ ತೌಕ್ತೆ ಚಂಡಮಾರುತ ಪ್ರದೇಶಗಳಿಗೆ ಕೇಂದ್ರದ ವಿಪತ್ತು ನಿರ್ವಹಣಾ ತಂಡ ಭೇಟಿ ನೀಡಿ ಪರೀಶೀಲನೆ ನಿಗಧಿಯಾಗಿತ್ತು. ಭೇಟಿ ಸಮಯ ಹಾಗೂ ಸ್ಥಳದ ಬಗ್ಗೆ ನೀಡಲಾದ ಮಾಹಿತಿಯಲ್ಲಿ ಕರ್ಕಿ ಗ್ರಾಮದ ತೊಪ್ಪಲಕೇರಿಯು ಸೆರ್ಪಡೆಯಾಗಿತ್ತು. ಇದರಿಂದ ಈ ಭಾಗದ ನಿವಾಸಿಗಳಲ್ಲಿ ದಶಕದ ಸಮಸ್ಯೆ ಬಗೆಹರಿಯುವ ವಿಶ್ವಾಸ ಮೂಡಿತ್ತು. ಕಳೆದ ಮೂರು ದಿನದಿಂದ ಅಧಿಕಾರಿಗಳು ಹಾಗೂ ಸಾರ್ವಜನಿಜರು ಭೇಟಿ ಸಂದರ್ಭದಲ್ಲಿ ತೋರಿಸಬಹುದಾದ ದಾಖಲೆ ಹಾಗೂ ಕೆಲವೊಂದು ಘಟನಾವಳಿಯ ಪೋಟೋ ಸಿದ್ದವಾಗಿಟ್ಟುಕೊಂಡಿದ್ದರು.

ಆದರೆ ಕೊನೆ ಕ್ಷಣದಲ್ಲಿ ಅಧಿಕಾರಿಗಳ ಭೇಟಿ ರದ್ದಾದ ಹಿನ್ನಲೆಯಲ್ಲಿ ಗ್ರಾಮಸ್ಥರ ಆಕ್ರೋಶಕ್ಕೂ ಕಾರಣವಾಯಿತು. ಸ್ಥಳಕ್ಕೆ ಅಸಗಮಿಸಿ ಸಮಸ್ಯೆ ಆಲಿಸದ ಅಧಿಕಾರಿಗಳ ವಿರುದ್ದ ಆಕ್ರೋಶಭರಿತರಾಗಿ ನಮ್ಮ ಸಮಸ್ಯೆ ಆಳುವವರು ಕಿವಿ ತಲುಪುದಿಲ್ಲ. ಅವರು ಕಡಲಕೊರೆತ ನೋಡಲು ಬಂದಿಲ್ಲ ಹೆದ್ದಾರಿ ಕಾಮಗಾರಿ ನೋಡಲು ಆಗಮಿಸಿದ್ದಾರೆ ಎಂದು ಲೇವಡಿ ಕೂಡಾ ಮಾಡಿದರು.*ದಶಕಗಳಿಂದ ಸಮಸ್ಯೆ ಉಂಟಾಗುವ ಸ್ಥಳಕ್ಕೆ ಭೇಟಿ ನೀಡಲು ಅಧಿಕಾರಿಗಳು ಜನಪ್ರತಿನಿಧಿಗಳು ಹಿಂದೇಟು*ಕರ್ಕಿ ಗ್ರಾಮದ ತೊಪ್ಪಲಕೇರಿ ಭಾಗದಲ್ಲಿ ದಶಕಗಳಿಂದ ಕಡಲಕೊರೆತ ಉಂಟಾಗುತ್ತಿದೆ. ತೊಪ್ಪಲಕೇರಿ, ಹೆಗಡೆಹಿತ್ತಲು ಭಾಗದ 500ಕ್ಕು ಅಧಿಕ ಕುಟುಂಬದವರಿಗೆ ನೆರೆ ಹಾಗೂ ಚಂಡಮಾರುತದ ಭೀತಿ ಕಾಡುತ್ತಿದೆ. ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಮನವಿ ನೀಡಿ ರೋಸಿ ಹೋಗಿರುವ ಇಲ್ಲಿಯ ನಿವಾಸಿಗಳಿಗೆ ಈ ಹಿಂದಿನಿಂದಲೂ ಅನ್ಯಾಯವಾಗುತ್ತಿರುದು ಮೆಲ್ನೋಟಕ್ಕೆ ಕಂಡುಬರುತ್ತಿದೆ. ಈ ಹಿಂದೆ ಕಂದಾಯ ಸಚೀವರು ಜಿಲ್ಲೆಯ ನೆರೆ ಹಾಗೂ ಚಂಡಮಾರುತ ಹಾನಿ ಪ್ರದೇಶಕ್ಕೆ ಭೇಟಿ ನೀಡಿದರು ಈ ಸ್ಥಳಕ್ಕೆ ಆಗಮಿಸಿಲ್ಲ. ವಾರದ ಹಿಂದೆ ಆಗಮಿಸಿದ ಮೀನುಗಾರಿಕಾ ಸಚೀವರು, ಹಾಗೂ ಜಿಲ್ಲೆಯ ಸಂಸದರು ಭೇಟಿ ನೀಡಿಲ್ಲ.
ಜಿಲ್ಲಾಧಿಕಾರಿಗಳು ವಾರದ ಹಿಂದೆ ಭೇಟಿ ನೀಡಿದಾಗಲೂ ತಾಲೂಕಿನ ಈ ಸ್ಥಳಕ್ಕೆ ಭೇಟಿ ನೀಡಿಲ್ಲ. ಒಮ್ಮೆ ಸಚೀವ ಶಿವರಾಮ ಹೆಬ್ಬಾರ ಗ್ರಾಮಸ್ಥರ ಮನವಿ ಮೇರೆಗೆ ಭೇಟಿ ನೀಡಿದ್ದು ಬಿಟ್ಟರೆ ಯಾರು ಭೇಟಿ ನೀಡದೇ ಇರುವುದು ಗ್ರಾಮಸ್ಥರ ಆಕ್ರೊಶಕ್ಕೆ ಕಾರಣವಾಗಿದೆ. ಅಧ್ಯಯನ ತಂಡದ ಭೇಟಿ ಪೂರ್ವನಿಗಧಿ ವೇಳಾಪಟ್ಟಿಯಲ್ಲಿ ಈ ಸ್ಥಳ ಇದ್ದರೂ, ನಿಗಧಿ ಇಲ್ಲದ ಶಾಲೆ ಭೇಟಿ ಮಾಡಿ ಈ ಸ್ಥಳ ಬಿಟ್ಟಿರುವುದು ಸಾರ್ವಜನಿಕ ಆಕ್ರೋಶ ಇಮ್ಮಡಿಯಾಗಲು ಕಾರಣವಾಗಿದೆ. ಕರ್ಕಿ ಗ್ರಾಮ ಪಂಚಾಯತ ಸದಸ್ಯ ಹರಿಶ್ಚಂದ್ರ ನಾಯ್ಕ ಮಾತನಾಡಿ ಕಳೆದ ೧೫ ವರ್ಷದಿಂದ ಸಮಸ್ಯೆ ಬಗ್ಗೆ ಗ್ರಾಮ ಮಟ್ಟದ ಅಧಿಕಾರಿಗಳಿಂದ ಜಿಲ್ಲೆಯ ಅಧಿಕಾರಿಗಳಿಗೆ ತಿಳಿಸಲಾಗಿದೆ. ಎಲ್ಲಾ ಸರ್ಕಾರದ ಶಾಸಕರಿಂದ ಸಚೀವರು ಸಂಸದರ ಗಮನಕ್ಕೂ ತರಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಲೆಕ್ಕವಿಲ್ಲದಷ್ಟು ಮನವಿ ನೀಡಿ ಸಮಸ್ಯೆ ಬಗೆಹರಿಸುವಂತೆ ಕೋರಲಾಗಿದೆ. ಸರ್ಕಾರದ ಗಮನ ಸೆಳೆಯಲು ಸಾಂಕೇತಿಕವಾಗಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದರೂ ಪ್ರಯೋಜನವಾಗಿಲ್ಲ.

ಜಿಲ್ಲೆಗೆ ಆಗಮಿಸುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಭಾಗಕ್ಕೆ ಸಮಸ್ಯೆ ಆಲಿಸಲು ಬರುವುದೆ ಇಲ್ಲ. ಈ ಬಗ್ಗೆ ಅಧಿಕಾರಿಗಳೊ ಅಥವಾ ಜನಪ್ರತಿನಿಧಿಗಳೊ ದಿಕ್ಕುತಪ್ಪಿಸುತ್ತಿದ್ದಾರೆ ಎನ್ನುವ ಅನುಮಾನ ಮೂಡುತ್ತಿದೆ. ಐದುನೂರಕ್ಕೂ ಅಧಿಕ ಕುಟುಂಬ ಆತಂಕದಲ್ಲಿದ್ದರು ಸಮಸ್ಯೆ ಆಲಿಸಲು ಬರುವುದಿಲ್ಲ ಎಂದರೆ ನಮ್ಮ ನೋವು ಆಳುವವರ ಮನ ಮುಟ್ಟುವುದಿಲ್ಲ ಎನ್ನುವ ಬೇಸರವಿದೆ.ಮುಂದಿನ ದಿನದಲ್ಲಿ ಸಮಸ್ಯೆ ಬಗೆಹರಿಯದೇ ಹೋದಲ್ಲಿ ಹೆದ್ದಾರಿ ತಡೆ ಅಥವಾ ಯಾವುದೇ ಹಂತದ ಪ್ರತಿಭಟನೆ ನಡೆದರು ಸಂಭಧಿಸಿದ ಅಧಿಕಾರಿ ಹಾಗೂ ಜನಪ್ರತಿನಿಧಿಗಳೇ ನೇರ ಹೋಣೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಮುಂದಿನ ದಿನದಲ್ಲಿ ಈ ಗ್ರಾಮಕ್ಕೆ ಇನ್ನಷ್ಟು ಕಡಲಕೊರೆತದಿಂದ ಹಾನಿ ಸಂಭವಿಸುವ ಆತಂಕವಿದ್ದು ಅಧಿಕಾರಿಗಳು ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ಇಲ್ಲಿಯ ನಿವಾಸಿಗಳ ಆತಂಕ ದೂರ ಮಾಡಬೇಕಿದೆ.
Leave a Comment