ಯಲ್ಲಾಪುರ: ಗೂಗಲ್ ನಕ್ಷೆಯಲ್ಲಿ ಯಲ್ಲಾಪುರದಲ್ಲಿಯೇ ಇಲ್ಲದ ಟೀಪು ನಗರ ದಾಖಲಾಗಿದೆ. ಯಲ್ಲಾಪುರದಲ್ಲಿರುವ ವಿಶ್ವ ಹಿಂದೂ ಪರಿಷತ್ ನ ಮಹಾಗಣಪತಿ ದೇವಸ್ಥಾನ ವಿರುವ ಸ್ಥಳವನ್ನು ಗೂಗಲ್ ನಕ್ಷೆಯಲ್ಲಿ ಪಟ್ಟಣವ್ಯಾಪ್ತಿಯಲ್ಲಿಯೇ ಇಲ್ಲದಿರುವ ಟೀಪು ನಗರವೆಂದು ತೋರಿಸುತ್ತಿರುವದು ಗೂಗಲ್ ನಲ್ಲಿ ಕಾಣುತ್ತಿದೆ.

ಮೂರು ವರ್ಷಗಳ ಹಿಂದೆಯೂ ಹೀಗೆ ಆಗಿತ್ತು. ಆಗಿನ ತಹಶೀಲ್ದಾರ ಡಿ.ಜಿ ಹೆಗಡೆ ಹಾಗೂ ಪೋಲಿಸ್ ಇಲಾಖೆ ಗೆ ಹಿಂದೂ ಜಾಗರಣಾ ವೇದಿಕೆಯಿಂದ ಮನವಿ ನೀಡಲಾಗಿತ್ತು.ಅಂದು ಪೋಲಿಸ ನಿರೀಕ್ಷಕರಾಗಿದ್ದ ವಿಜಯ ಬಿರಾದಾರ ವಿಶೇಷ ತನಿಖೆ ಕೈಗೊಂಡು ಯಲ್ಲಾಪುರದಲ್ಲಿಯೇ ಇರದ ಟೀಪು ನಗರ ದ ಹೆಸರನ್ನು ತೆಗೆಸಿದ್ದರು. ಇದೀಗ ಮತ್ತೆ ಕಾಣಿಸಿಕೊಂಡಿದ್ದು ಇದು ಯಾರ ಕೈವಾಡವೆಂಬುದು ತಿಳಿಸುಬಂದಿಲ್ಲ.ಈ ಕುರಿತು ತಹಶೀಲ್ದಾರ ಶ್ರಿಕೃಷ್ಣ ಕಾಮಕರ ಅವರನ್ನು ಮಾಹಿತಿ ಕೇಳಿದಾಗ ಟೀಪು ನಗರ ಪಟ್ಟಣದಲ್ಲಿ ಇಲ್ಲ ಈ ಬಗ್ಗೆ ಪಟ್ಟಣ ಪಂಚಾಯತದಿAದ ಪರಿಶೀಲಿಸಲಾಗುವದು ಹಾಗೂ ಪೋಲಿಸ್ ಇಲಾಖೆಯಿಂದತನಿಖೆಗೊಳಪಡಿಸಿ ಇಂತಹ ವಿಷಯವನ್ನು ಕಡೆಗಣಿಸದೇ ಶಿಘ್ರದಲ್ಲಿಯೇ ಕ್ರಮ ಕೈಗೊಳ್ಳಲಾಗುವದು ಎಂದರು.
ಕೂಡಲೇ ಪಪಂಯನ್ನು ಸಂಪರ್ಕಿಸಿ ಈ ಕುರಿತು ಪರಿಶೀಲಿಸಲು ತಿಳಿಸಿದರು. ಯಲ್ಲಾಪುರದ ಜನತೆ ಯಾವದೇ ಸಂಘರ್ಷಕ್ಕೆ ಆಸ್ಪದವಿಲ್ಲದಂತೆ ಕೋಮು ಸೌಹಾರ್ದತೆ ಕಾಪಾಡಿಕೊಂಡು ಬರುತ್ತಿದ್ದಾರೆ. ಆದರೂ ಕೂಡ ಕೆಲವು ಕಿಡಿಗೇಡಿಗಳ ಕೃತ್ಯ ಸಾಮರಸ್ಯವನ್ನು ಹದಗೆಡಿಸಲು ಯತ್ನಿಸುತ್ತಿರುವದು ಖಂಡನೀಯ
. ಹಿಂದೂಗಳ ಪ್ರಮುಖ ಆರಾಧ್ಯ ದೇವರಾದ ಶ್ರೀಗಣಪತಿ ದೇವಸ್ಥಾನ ವಿರುವ ಪ್ರದೇಶದ ಹೆಸರನ್ನೇ ಹೀಗೆ ಬದಲಾಯಿಸಿರುವದು ನಮ್ಮ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವ ಕಾರ್ಯವಾಗಿದೆ. ಪದೇ ಪದೇ ಹೀಗಾಗದಂತೆ ಇದಕ್ಕೆ ಕಾರಣಿಕರ್ತರಾದವರ ಮೇಲೆಕಠಿಣಕ್ರಮಕೈಗೊಳ್ಳಬೇಕು.ಎಂದುಹಿಂದೂ ಜಾಗರಣಾ ವೇದಿಕೆಅಧ್ಯಕ್ಷಗೋಪಾಲಕೃಷ್ಣ ಗಾಂವ್ಕರ್ ಹಾಗೂ ಸ್ಥಳಿಯ ಮುಖಂಡರ ಒತ್ತಾಯಿಸಿದ್ದಾರೆ .
Leave a Comment