ಹೊನ್ನಾವರ: ತಾಲೂಕಿನ ಹಳದೀಪುರ ಅಗ್ರಹಾರ ಸಮೀಪದ ದೇವಿದಾಸ್ ಸುಬ್ರಾಯ ಗುನಗಿ ಇವರ ಮನೆಯ ಸುಮಾರು ೩೫ ಅಡಿ ಆಳದ ಬಾವಿಯಲ್ಲಿ ಆಕಸ್ಮಿಕವಾಗಿ ಗೋವು ಬಿದ್ದಿತ್ತು. ವಿಷಯ ತಿಳಿದ ಸಾರ್ವಜನಿಕರು ಅಗ್ನಿಶಾಮಕ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕಾಗಮಿಸಜದ ಸಿಬ್ವಂದಿಗಳು ರಕ್ಷಣಾ ಉಪಕರಣದ ಸಹಾಯದಿಂದ ಬಾವಿಯಲ್ಲಿ ಬಿದ್ದ ಗೋವನ್ನು ಯಶ್ವಸಿಯಾಗಿ ಮೇಲಕ್ಕೆತ್ತಿದ್ದಾರೆ. ಸಿಬ್ವಂದಿಗಳ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಠಾಣಾಧಿಕಾರಿ ಅರುಣ ಎಸ್ ಮಾಳೋದೆ,ಸಿಬ್ಬಂದಿಗಳಾದ ನಾಗೇಶ ಪೂಜಾರಿ,ಕನ್ನೆ ಗೌಡ, ಲೋಕೇಶ್ವರ ಪಟಗಾರ, ಸೋಮನಾಥ ನಾಯ್ಕ, ಅಭಿಷೇಕ ನಾಯ್ಕ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.
Leave a Comment