ಹೊನ್ನಾವರ; ತಾಲೂಕಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಎಂ.ಎ.ರಾಜ್ಯಶಾಸ್ತ್ರ ವಿಭಾಗದಲ್ಲಿ ಧಾರವಾಡ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಗ್ರಾಮೀಣ ಭಾಗದ ಪ್ರತಿಭೆ ಮೇಘಾ ಬಂಗಾರ ಪದಕ ತನ್ನದಾಗಿಸಿಕೊಂಡಿದ್ದಾರೆ.
ಸರ್ಕಾರಿ ಶಾಲೆ ಹಾಗೂ ಕಾಲೇಜಿನಲ್ಲಿ ಅಧ್ಯಯನ ಮಾಡಿದರೆ ಸಾಧನೆ ಮಾಡಲು ಸಾಧ್ಯವಿಲ್ಲ ಎನ್ನುವ ಕೆಲವರ ಮೊಂಡು ವಾದಕ್ಕೆ ಬೆರಗಾಗುವ ರೀತಿಯಲ್ಲಿ, ಬಡತನದ ಮಧ್ಯೆ ಏನಾದರೂ ಸಾಧಿಸಲೇಬೇಕೆಂದು ತುಡಿತದಿಂದ ಆರಂಭದಿಂದಲೂ ಅಧ್ಯಯನದಲ್ಲಿ ತೊಡಗಿಕೊಂಡಿದ್ದರು. ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂತೇಗುಳಿ, ಪ್ರೌಡ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಎಸ್.ಕೆ.ಪಿ. ಅರೇಅಂಗಡಿ,ಪದವಿ ಹಾಗೂ ಸ್ನಾತಕೊತ್ತರ ಶಿಕ್ಷಣವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊನ್ನಾವರದಲ್ಲಿ ಅಧ್ಯಯನ ನಡೆಸಿದ್ದಾರೆ.
ಮೂಲತ ಹೊಸಾಕುಳಿಯ ಮಕ್ಕಿಗದ್ದೆಯ ಸೀಮಾ ಹಾಗೂಮಾಸ್ತಿಗೌಡ ಇವರ ಪುತ್ರಿಯಾದ ಇವರು ಎಂ.ಎ.ಅಂತಿಮ ವರ್ಷದಲ್ಲಿ ನೆರೆಯ ಕುಮಟಾ ತಾಲೂಕಿನ ಅಘನಾಷಿನಿಯ ರಾಘವೇಂದ್ರ ಗೌಡ ಇವರೊಡನೆ ವಿವಾಹವಾಗಿದ್ದರು. ನೆಚ್ಚಿನ ವಿಷಯವಾದ ರಾಜ್ಯಶಾಸ್ತ್ರ ವಿಭಾಗದಲ್ಲಿ ಎಂ.ಎ. ಮಾಡಲು ಆಯ್ಕೆ ಮಾಡಿಕೊಂಡು ವಿಶ್ವವಿದ್ಯಾಲಯ ಮಟ್ಟದ ಪ್ರಥಮ ಸ್ಥಾನ ಪಡೆಯುವ ಮೂಲಕ ಮೇಘಾ ಬಂಗಾರದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.
ಉಪನ್ಯಾಸಕ ಪ್ರೋ ನಾಗೇಶ ಶೆಟ್ಟಿ, ಉಪನ್ಯಾಸಕಿ ಸುಜಾತ, ಶಿಲ್ಪ ಇವರ ಮಾರ್ಗದರ್ಶನ ಹಾಗೂ ಕಾಲೇಜಿನ ಇತರೆ ಉಪನ್ಯಾಸಕರು ಹಾಗೂ ಕುಟುಂಬದವರ ಸಹಕಾರದಿಂದ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಅನಿಸಿಕೆ ಹಂಚಿಕೊಂಡಿದ್ದಾರೆ.ಇವರ ಸಾಧನೆಗೆ ಶಾಸಕ ದಿನಕರ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಕಲಾ ಶಾಸ್ತ್ರಿ, ಕಾಲೇಜಿನ ಪ್ರಾಚಾರ್ಯೆ ಡಾ.ಸುಮಂಗಲಾ ನಾಯ್ಕ ಗ್ರಾ.ಪಂ.ಸದಸ್ಯ ಸುರೇಶ ಶೆಟ್ಟಿ ಸೇರಿದಂತೆ ಶಾಲಾಭಿವೃದ್ದಿ ಸಮಿತಿ ಸದಸ್ಯರು, ಉಪನ್ಯಾಸಕರು ಗ್ರಾಮಸ್ಥರು ಸಾಧನೆಗೆ ಅಭಿನಂದಿಸಿದ್ದಾರೆ.
Leave a Comment