
ಯಲ್ಲಾಪುರ: ತಾಲೂಕಿನ ಸರಕಾರಿ ಆಸ್ಪತ್ರೆಗೆ ಮಾಜಿ ಸಚಿವ , ಶಾಸಕ ಆರ್.ವಿ ದೇಶಪಾಂಡೆ ಹಾಗೂ ಯುವ ಮುಖಂಡ ಪ್ರಶಾಂತ ದೇಶಪಾಂಡೆ ನೀಡಿದ ಸುಮಾರು ೬೦,೦೦೦ ರೂ ಮೌಲ್ಯದ ಆಮ್ಲಜನಕ ಸಾಂದ್ರಕ ವನ್ನು ಗುರುವಾರ ಬ್ಲಾಕ್ ಕಾಂಗ್ರೇಸ್ ಸಮಿತಿ ಮೂಲಕ ತಾಲೂಕಾ ಆಸ್ಪತ್ರೆಯ ವೈದ್ಯರಿಗೆ ಹಸ್ತಾಂತರಿಸಲಾಯಿತು.
ನಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ ಡಿ.ಎನ್ ಗಾಂವ್ಕರ ಮಾತನಾಡಿ ಹಿರಿಯ ನಾಯಕರಾದ ಆರ್ವಿ.ದೇಶಪಾಂಡೆಯವರು ಕೋವಿಡ್ ಸಂಕಷ್ಟದಲ್ಲಿ ತಮ್ಮ ಕುಟುಂಬದವತಿಯಿಂದ ರಾಜಕೀಯ ಹೊರತಾಗಿ ಪಿ.ಪಿಇ ಕಿಟ್,ಆಕ್ಸಿಜನ ಸಿಲಿಂಡರ, ಔಷಧಿ ಕಿಟ್ ಹೀಗೆ ಹಲವು ಸಹಾಯ ಸಹಕಾರ ನೀಡಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿನ ಸೊಂಕಿತರ ಪ್ರಾಣ ರಕ್ಷಣೆಗೆ ನೆರವಾಗಿದ್ದಾರೆ.ಅವರು ನೀಡಿದ ಸಹಾಯಹಸ್ತಕ್ಕೆ ನಾವೆಲ್ಲರೂ ಚಿರಋಣಿಯಾಗಿರಬೇಕು ಎಂದರು .
ಈ ಸಂದರ್ಭದಲ್ಲಿ ಡಾ. ದೀಪಕ ಭಟ್, ಡಾ ಸೌಮ್ಯಾ ಕೆ.ವಿ, ಮಕ್ಕಳ ತಜ್ಞ ಡಾ.ಮನೋಜ ಪ್ರಮುಖರಾದ ಪ್ರಶಾಂತ ಸಭಾಹಿತ,ಕಾಂಗ್ರೆಸ್ ವಕ್ತಾರ ರವಿನಾಯ್ಕ, ಕಾರ್ಯದರ್ಶೀ ಅನಿಲ ಮರಾಠೆ, ಅಣ್ಣಪ್ಪ,ಮಹಿಳಾ ಸಮಿತಿಯ ಪೂಜಾ ನೇತ್ರೇಕರ ಮುಂತಾದವರು ಇದ್ದರು.
Leave a Comment