ಭಟ್ಕಳ: ಹೊಳೆಯ ಮದ್ಯ ಭಾಗದಲ್ಲಿನ ಮುಳ್ಳಿನ ಪೊದೆಯಲ್ಲಿ ಸಿಲುಕಿಕೊಂಡ ಇರಡು ಹೋರಿಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣೆ ಮಾಡಿದ ಘಟನೆ ತಡ ರಾತ್ರಿ ಮುಟ್ಟಳ್ಳಿಯ ಕೋಟದಮನೆ ಸಮೀಪ ನಡೆದಿದೆ .
ತಾಲೂಕಿನ ಮುಟ್ಟಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿನ ಕೋಟದಮನೆ ಸಮೀಪದ ಹೊಳೆಯ ಮದ್ಯ ಭಾಗದಲ್ಲಿ ಮುಳ್ಳಿನ ಪೊದೆಯಲ್ಲಿ 2 ಹೋರಿಗಳು ಸಿಲುಕಿರುದನ್ನು ಗಮನಿಸಿದ ಸ್ಥಳೀಯ ರಾಘವೇಂದ್ರ ಭಾಸ್ಕರ್ ನಾಯ್ಕ ಅಗ್ನಿಶಾಮಕ ದಳದ ಸಿಬಂದಿಗಳಿಗೆ ಕರೆ ಮಾಡಿ ತಿಳಿಸಿದ್ದು ತಕ್ಷಣಕ್ಕೆ ಕರೆಗೆ ಸ್ಪಂದಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಬಂದು ಜಲವಾಹನದೊಂದಿಗೆ ಹೊಳೆಯ ಮದ್ಯ ಸಿಲುಕುಕೊಂಡಿದ್ದ 2 ಹೊರಿಗಳನ್ನು ರಕ್ಷಣೆ ಮಾಡಿದ್ದಾರೆ.
Leave a Comment