ಹೊನ್ನಾವರ: ತಾಲೂಕಿನ ಪುರಾಣ ಪ್ರಸಿದ್ದ ಐತಿಹಾಸಿಕ ಸ್ಥಳವಾದ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಾಲಯದಲ್ಲಿ ಕೊರೋನಾ ಹಿನ್ನಲೆಯಲ್ಲಿ ಸುರಕ್ಷತಾ ದೃಷ್ಟಿಯಿಂದ ಸಾರ್ವಜನಿಕ ದರ್ಶನವನ್ನು ಮತ್ತೆ ಮುಂದೂಡಿದ್ದು, ಈ ಬಾರಿ ನಾಗರ ಪಂಚಮಿಗೂ ಸುಬ್ರಹ್ಮಣ್ಯ ದೇವರ ಸನ್ನಿದಿಗಾಗಲಿ ನಾಗಬನದಲ್ಲಿ ದರ್ಶನ ಪಡೆಯಲು ಅವಕಾಶವಿಲ್ಲ. ಆದರೆ ಪ್ರತಿವರ್ಷದಂತೆ ಆಚರಣೆ ಇದ್ದರೂ ಈ ಬಾರಿ ಸರಳವಾಗಿ ಆಚರಿಸುವ ಜೊತೆ, ನಾಗಬನದ ಪ್ರತಿ ಮೂರ್ತಿಗೂ ಪೂಜೆ ನೇರವೇರಿಸಲಾಗುವುದು ಭಕ್ತರು ಮನೆಯಲ್ಲಿ ಇದ್ದು ಸ್ಮರಿಸುವಂತೆ ಕೋರಿದರು.
ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ಎಸ್.ಆರ್.ಹೆಗಡೆ ಮಾತನಾಡಿ ಶ್ರಾವಣ ಮಾಸದ ಪಂಚಮಿ ದಿನದಂದು ಸನ್ನಿದಿಯಲ್ಲಿ ವಿಶೇಷ ಪೂಜೆ ನೇರವೇರುತ್ತಿತ್ತು. ಆದರೆ ಈ ಬಾರಿ ಕೊರೋನಾ ಹಿನ್ನಲೆಯಲ್ಲಿ ಸರಳವಾಗಿ ಆಚರಣೆ ಮಾಡುತ್ತಿದ್ದೇವೆ. ಆದರೆ ಭಕ್ತರ ಹಾಗೂ ರಾಜ್ಯದೆಲ್ಲರ ಹಿತದೃಷ್ಟಿಯಿಂದ ಯಾವುದೇ ಭಕ್ತರಿಗೂ ದೇವಾಲಯ, ನಾಗಬನದಲ್ಲಿ ದರ್ಶನ ಅಥವಾ ಪೂಜೆ ನಡೆಸಲು ಅವಕಾಶವಿಲ್ಲ. ತಾಲೂಕು ಆಡಳಿತದ ಸಲಹೆ ಮೇರೆಗೆ ಪೋಲಿಸ್ ಇಲಾಖೆಯ ಸಹಕಾರದೊಂದಿಗೆ ಬ್ಯಾರಿಕೇಟ್ ಅಳವಡಿಸುತ್ತಿದ್ದು ಭಕ್ತರು ಮನೆಯಲ್ಲಿ ಇದ್ದು, ಪ್ರಾರ್ಥನೆ ಮಾಡಬೇಕೆಂದು ವಿನಂತಿಸಿದರು. ಕರೋನಾ ಶಿಘ್ರ ಗುಣಮುಖವಾಗಲಿ ದೇವಾಲಯದಲ್ಲಿ ಪ್ರತಿನಿತ್ಯವು ಪ್ರಾರ್ಥಿಸುತ್ತಿದ್ದು, ಪಂಚಮಿ ದಿನವೂ ವಿಶೇಷ ಪೂಜೆ ಪ್ರಾರ್ಥನೆ ನಡೆಸಲಿದ್ದೇವೆ. ಭಕ್ತರು ಅವರ ಮನೆಯಲ್ಲಿಯೇ ಸ್ಮರಿಸುವಂತೆ ಮನವಿ ಮಾಡಿದರು.
ಟ್ರಸ್ಟ ಕಾರ್ಯದರ್ಶಿಗಳು ಗ್ರಾಮ ಪಂಚಾಯತ ಅಧ್ಯಕ್ಷರಾದ ಟಿ.ಎಸ್.ಹೆಗಡೆ ಕೊಂಡದಕೇರಿ ಮಾತನಾಡಿ ಈ ರೋಗದ ವಿರುದ್ದ ಹೋರಾಡಲು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿದ್ದು, ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಸದ್ಯದ ಮಟ್ಟಿಗೆ ದೇವಾಲಯದ ದರ್ಶನ ಸೇರಿದಂತೆ ಯಾವುದೇ ಕಾರ್ಯಕ್ರಮಕ್ಕೆ ಅವಕಾಶವಿಲ್ಲ. ಭಕ್ತರು ಸಹಕರಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮ್ಯಾನೇಜರ್ ಸತ್ಯನಾರಾಯಣ ಹೆಗಡೆ ತೋಟಿ, ಸದಸ್ಯ ನಾರಾಯಣ ಹೆಗಡೆ ಉಪಸ್ಥಿತರಿದ್ದರು.
Leave a Comment