ಹೊನ್ನಾವರ ತಾಲೂಕಿನ ಕಾಸರಕೊಡಟೊಂಕದ ಮೀನುಗಾರರಿಗೆ ಭರವಸೆ ನೀಡಿದರು.ತಾಲೂಕಿನ ಕಾಸರಕೋಡು ಟೊಂಕದಲ್ಲಿಖಾಸಗೀ ವಾಣಿಜ್ಯ ಬಂದರು ನಿರ್ಮಾಣ ಪ್ರದೇಶಕ್ಕೆಬುಧವಾರದಂದು ಭೇಟಿ ನೀಡಿ ಸ್ಥಳೀಯಮೀನುಗಾರರ ಅಳಲು ಆಲಿಸಿ ಅವರು ಮಾತನಾಡಿದರು.ಖಾಸಗಿಯವರಿಗೆ ಬೇರೆ ಎಲ್ಲಿ ಬೇಕಾದರೂಜಾಗ ಕೊಡಬಹುದು.
ಆದರೆ ತಲೆಮಾರುಗಳಿಂದವಾಸ್ತವ್ಯದಲ್ಲಿದ್ದ ಜೀವನ ಕಟ್ಟಿಕೊಂಡಿರುವಮೀನುಗಾರರನ್ನು ಒಕ್ಕಲೆಬ್ಬಿಸಬಾರದು.ಕಾಸರಕೋಡ ವಾಣಿಜ್ಯ ಬಂದರಿನ ಕುರಿತು ಕಾಗದಪತ್ರಗಳನ್ನು ತರಿಸಿಕೊಂಡು ಅಧ್ಯಯನ ಮಾಡಿಮೀನುಗಾರರಿಗೆ ನ್ಯಾಯ ಕೊಡಿಸಲು ಹೋರಾಟ ಮಾಡುವುದಾಗಿ ಹೇಳಿದರು.
ಬಂದರು ನಿರ್ಮಾಣ ಸ್ಥಳದಲ್ಲಿ ಬಂದು ಧರಣಿನಡೆಸುವ ಬಗ್ಗೆಯೂ ಮುಂದಾಗುತ್ತೇನೆಎಂದರು.ಇತ್ತೀಚೆಗೆ ಮೃತಪಟ್ಟ ಮೀನುಗಾರಉದಯ ದಾಮೋದರ ತಾಂಡೇಲ್ ಅವರಕುಟುಂಬದವರಿಗೆ ಸಾಂತ್ವನ ಹೇಳಿ,ಕುಟುಂಬದವರಿಗೆವೈಯ್ಯಕ್ತಿಕವಾಗಿಧನ ಸಹಾಯ ನೀಡಿದರು.ಮಾಜಿ ಶಾಸಕ ಮಂಕಾಳ ವೈದ್ಯ ಮಾತನಾಡಿ ಬಿಜೆಪಿ ಸರ್ಕಾರ ಮೀನುಗಾರರಿಗೆ ಅನ್ಯಾಯ ಮಾಡುತ್ತಿದೆ. ಕಾಂಗ್ರೇಸ್ ಪಕ್ಷ ಮೀನುಗಾರರಿಗೆ ನೆರವಾಗುದಕ್ಕಾಗಿ ರಾಜ್ಯಧ್ಯಕ್ಷರು ಈ ಸ್ಥಳಕ್ಕೆ ಆಗಮಿಸಿ ನೈತಿಕ ಬೆಂಬಲ ನೀಡಲಿದೆ ಎಂದರುಮೀನುಗಾರರ ಮುಖಂಡ ಪ್ರಾಸ್ತವಿಕವಾಗಿ ವಿವನ್ ಫರ್ನಾಂಡಿಸ್ಮಾತನಾಡಿ ಖಾಸಗಿ ಬಂದರು ನಿರ್ಮಾಣಕ್ಕೆಮೀನುಗಾರರನ್ನು ಒಕ್ಕಲೆಬ್ಬಿಸಲಾಗುತ್ತಿದೆ.
ಬಂದರು ನಿರ್ಮಾಣ ಪ್ರದೇಶಕ್ಕೆ ಚತುಷ್ಪಥ ಹೆದ್ದಾರಿನಿರ್ಮಿಸಲು ಬಲವಂತವಾಗಿ ಕಂಪನಿ ಮುಂದಾಗಿದ್ದು ಬಡಮೀನುಗಾರರು ಮನೆ, ಭೂಮಿಕಳೆದುಕೊಂಡು ಅನಾಥರಾಗುವ ಪರಿಸ್ಥಿತಿಎದುರಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರಿಗೆ ವಿವಿರಿಸಿದರು.ರಾಷ್ಟಿಯ ಮೀನುಗಾರರ ಸಂಘಟನೆಯ ರಾಜ್ಯಕಾರ್ಯದರ್ಶಿ ಚಂದ್ರಕಾಂತ ಕೊಚರೇಕರಮಾತನಾಡಿ ಎರಡು ದಿನಗಳ ಹಿಂದೆಮೀನುಗಾರರೊಬ್ಬರು ಸಾವನ್ನಪ್ಪಿದ್ದು ಇದಕ್ಕೆವಾಣಿಜ್ಯ ಬಂದರು ನಿರ್ಮಾಣದ ಕಾಮಗಾರಿಯೇ ಕಾರಣಎಂದರು.
ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷಭೀಮಣ್ಣ ನಾಯ್ಕ, ಮಾಜಿಶಾಸಕ ಜೆ.ಡಿ. ನಾಯ್ಕ,ಮಾಜಿ ಶಾಸಕಿ ಶಾರದಾ ಶೆಟ್ಟಿ,ಮಾಜಿ ಶಾಸಕ ಸತೀಶಶೈಲ್,ಕಾಂಗ್ರೆಸ್ ಶಿಸ್ತು ಸಂಚಲನಾಸಮಿತಿಯ ಸದಸ್ಯ ನಿವೇದಿತ ಆಳ್ವಾ, ಜಿಲ್ಲಾ ಸೇವಾದಳದ ಅಧ್ಯಕ್ಷ ಆರ್. ಹೆಚ್.ನಾಯ್ಕ, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಸತೀಶನಾಯ್ಕ ಉಪಸ್ಥಿತರಿದ್ದರು.ಮೀನುಗಾರರ ಮುಖಂಡರಾದ ಹಮ್ಜಾಪಟೇಲ, ಗಣಪತಿ ತಾಂಡೇಲ, ರಾಜು ತಾಂಡೇಲ,ರಾಜೇಶ ತಾಂಡೇಲ, ಸ್ಥಳೀಯಮೀನುಗಾರರು, ಮೀನುಗಾರ ಮಹಿಳೆಯರುಮತ್ತಿತರರು ಉಪಸ್ಥಿತರಿದ್ದರು.
Leave a Comment