• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಯಲ್ಲಾಪುರ ತಾ ಪಂ ಕೆಡಿಪಿ ಸಭೆ

July 8, 2021 by Jayaraj Govi Leave a Comment

IMG 20210707 190419 scaled
ತಾಲೂಕಾ ಪಂಚಾಯತ ಸಭಾಭವನದಲ್ಲಿ ತಾಪಂ ಆಡಳಿತಾಧಿಕಾರಿ  ನಟರಾಜ ಟಿ.ಪಿ ಅಧ್ಯಕ್ಷತೆಯಲ್ಲಿ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಯಲ್ಲಾಪುರ: ಇಲಾಖಾ ಪ್ರಗತಿಪರಿಶೀಲನಾ ಸಭೆಗೆ ಹಿರಿಯ ಅಧಿಕಾರಿಗಳು ಆಗಮಿಸಬೇಕು .ಒಂದುವೇಳೆ ಅವರಿಗೆ ಬರಲು ಆಗದಿದ್ದರೆ ಮುಂಚಿತವಾಗಿ ಮಾಹಿತಿÀ ನೀಡಬೇಕು.ಹಾಗೂ ಅವರ ಅಧೀನ ಅಧಿಕಾರಿಗಳು ಇಲಾಖೆಗೆ ಸಂಬAಧಿಸಿದ ವರದಿ,ಮಾಹಿತಿಯನ್ನು ಸಮರ್ಪಕಾಗಿ ನೀಡಲು ತಯಾರಿ ಮಾಡಿಕೊಂಡು ಬರಬೇಕು ಕೇವಲ ಹಾಜರಾತಿಗೆಂಬAತೆ ಬರಬಾರದು ಎಂದು ತಾಪಂ ಆಡಳಿತಾಧಿಕಾರಿ  ನಟರಾಜ ಟಿ.ಪಿ ಹೇಳಿದರು.ಅವರು ತಾಲೂಕಾ ಪಂಚಾಯತ ಸಭಾಭವನದಲ್ಲಿ ನಡೆದಮಾಸಿಕ ಪ್ರಗತಿ ಪರಿಶೀಲನಾ ಸಭೆ ಯಲ್ಲಿ ಹೇಳಿದರು.


ಪ್ರಸಕ್ತ ಸಾಲಿನಲ್ಲಿ ೬೦ ಕೋಟಿ ೯ಲಕ್ಷ ೩೯ ಸಾವಿರ ರೂಗಳು ತಾಪಂ ಸಿಬ್ಬಂದಿಗಳ ವೇತನ ಸೇರಿದಂತೆ ಇತರ ಕಾರ್ಯಗಳಿಗೆ  ಸರ್ಕಾರದ ಅನುದಾನ ಬಿಡುಗಡೆಯಾದ ಕುರಿತು ಲೆಕ್ಕಾಧಿಕಾರಿ ಮೋಹನ ವಿವರವಾದ ಮಾಹಿತಿ ನೀಡಿದರು.
ಪ್ರಸಕ್ತ ಸಾಲಿನಲ್ಲಿ ತಾಲೂಕಿಗೆ ೫ ಆಂಗ್ಲ ಮಾಧ್ಯಮ ಶಾಲೆ ಮಂಜೂರಾಗಿದ್ದು , ಪ್ರವೇಶಾತಿ ಪ್ರಕ್ರಿಯೆ ಆರಂಭವಾಗಿದೆ. ಎಸ್ ಎಸ್‌ಎಲ್‌ಸಿ ಪರೀಕ್ಷೆ ಜು೧೯ಮತ್ತು,೨೦ರಂದು ೮ ಕೇಂದ್ರಗಳಲ್ಲಿ ಕೋವಿಡ ನಿಯಮಾನುಸಾರ ನಡೆಯಲಿದೆ ಎಂದು ಶಿಕ್ಷಣ ಇಲಾಖೆಯ ಸಮನ್ವಯಾಧಿಕಾರಿ ಶ್ರೀರಾಮ ತಿಳಿಸಿದರು.

IMG 20210707 184909
೧೧ ತಾಲೂಕಾ ಪಂಚಾಯತಿ ಸದಸ್ಯರು ಹಾಗೂ ೨ ಜಿಲ್ಲಾ ಪಂಚಾಯತಿಸದಸ್ಯರನ್ನು ತಾಪಂ ವತಿಯಿಂದ ಗೌರವಿಸಿ ಬಿಳ್ಕೋಡಲಾಯಿತು.ತಾ ಪಂ ಮಾಜಿ ಸದಸ್ಯರು ಗೌರವ ಸ್ವೀಕರಿಸಿ ಮಾತನಾಡಿದರು


ತಾಲೂಕಾ ಆರೋಗ್ಯಾಧಿಕಾರಿ  ಡಾ ನರೆಂದ್ರ ಪವಾರ ಕೋರೋನಾ ಲಸಿಕೆ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದ್ದು ,ಲಸಿಕೆ ಕೊರತೆಯಿಂದಾಗಿ ಹಿನ್ನಡೆಯಾಗುತ್ತಲಿದೆ. ಪ್ರತಿನಿತ್ಯ ಅನಿವಾರ್ಯವಾಗಿ ಹೊರಗಡೆ ಓಡಾಡುತ್ತಿರುವ  ಸರಕಾರಿ ಆಧಿಕಾರಿಗಳು ತಮ್ಮ ಹಾಗೂ ಕುಟುಂಬದವರ ಆರೋಗ್ಯದ ದೃಷ್ಟಿಯಿಂದ ಪ್ರತಿತಿಂಗಳು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಹಾಗೂ ಕಡ್ಡಾಯವಾಗಿ ಮಾಸ್ಕ ಧರಿಸಿ ಮೂರನೇ ಅಲೆಯ ಎದುರಿಸಲು ನಿಯಮ ಪಾಲಿಸಿ ಎಂದು ವಿನಂತಿಸಿದರು
ಪಶು ಸಂಗೋಪನೆ, ತೋಟಗಾರಿಕೆ, ಕೃಷಿ ಕೆಎಸ್ ಆರ್ ಟಿಸಿ ಮುಂತಾದ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದು ಮಾಹಿತಿ ನೀಡಿದರು.


ತಾಲೂಕಾ ಪಂಚಾಯತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಗದೀಶ ಕಮ್ಮಾರ, ವ್ಯವಸ್ಥಾಪಕ ಗಂಗಾಧರ ಭಟ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅವಧಿ ಪೂರ್ಣಗೊಳಿಸಿದ  ೧೧ ತಾಲೂಕಾ ಪಂಚಾಯತಿ  ಸದಸ್ಯರು ಹಾಗೂ ೨ ಜಿಲ್ಲಾ ಪಂಚಾಯತಿಸದಸ್ಯರನ್ನು ತಾಪಂ ವತಿಯಿಂದ  ಗೌರವಿಸಿ ಬಿಳ್ಕೋಡಲಾಯಿತು. ಎಲ್ಲ ಸದಸ್ಯರು ಗೌರವ ಸ್ವೀಕರಿಸಿ ಮಾತನಾಡಿ ತಾಪಂ ಹಾಗೂ ಎಲ್ಲ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು, ಜನಪ್ರತಿನಿಧಿಗಳ, ಮಾಧ್ಯಮದವರ ಸಹಕಾರ ನೀಡಿದ್ದರಿಂದ ಸುಲಲಿತವಾಗಿ ಆಡಳಿತ ನಡೆಸಲು ಸಾಧ್ಯವಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Yellapur

Explore More:

About Jayaraj Govi

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...