
ಯಲ್ಲಾಪುರ: ಕುಂದರಗಿ ಗ್ರಾಮ ಪಂಚಾಯತದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವಾರದಲ್ಲಿ ಭಾ.ಜ.ಪ ಸಂಸ್ಥಾಪಕರಾದ ಡಾ.ಶ್ಯಾಮಪ್ರಸಾದ ಮುಖರ್ಜಿ ಅವರ ಜನ್ಮದಿನದ ನಿಮಿತ್ತ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ವ್ರಕ್ಷಾರೋಹಣ ಮಾಡಿದರು. ಅಲ್ಲಿನ ಕುಂದು ಕೊರತೆಗಳ ಬಗ್ಗೆ ಪರೀಶಿಲಿಸಿ, ಕುಂದರಗಿ ಶಾಲೆಯ ಅಭಿವೃದ್ದೀಗೆ ಈಗಾಗಲೇ ಮೂರು ಲಕ್ಷದ ತಮ್ಮ ಅನುದಾನ ನೀಡಿರುವ ಬಗ್ಗೆ ತಿಳಿಸಿದರು.
ನಂತರ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ,ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯುಷ್ ಡಾಕ್ಟರಗಳಾಗಿ ೧೪ ವರ್ಷಗಳ ನಿರಂತರ ಸೇವೆ ಸಲ್ಲಿಸಿ ವರ್ಗಾವಣೆಯಾಗುತ್ತಿರುವ ಚಂದ್ರಶೇಖರ ಬಿ ಅವರಿಗೆ ಸನ್ಮಾನ ಬಿಳ್ಕೋಡುಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶುಭ ಹಾರೈಸಿದರು.
ಭಾ.ಜ.ಪ.ಯಲ್ಲಾಪುರ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ್, ಗ್ರಾ.ಪಂ ಉಪಾಧ್ಯಕ್ಷ ಡಾಕ್ಲು ಪಾಟೀಲ್,ಗ್ರಾಮ ಪಂ ಸದಸ್ಯ ಭಾಜಪಾ ಕಾರ್ಯದರ್ಶಿ À ಗಣೇಶ ಹೆಗಡೆ,ಗ್ರಾಮ ಪಂ ಸದಸ್ಯ ರಾಮಕೃಷ್ಣ ಹೆಗಡೆ, ಎಸ್ ಡಿ ಎಂ ಸಿ ಅಧ್ಯಕ್ಷ ಸತೀಶ ಹೆಗಡೆ ಕು.ಸೇ.ಸ.ಸಂಘದ ನಿರ್ದೇಶಕ ಕೃಷ್ಣ ಹುದ್ದಾರ,ಜಿಲ್ಲಾ ಭಾ.ಜ.ಪ. ಯುವ ಮೋರ್ಚಾ ಉಪಾಧ್ಯಕ್ಷÀ ಸೋಮು ನಾಯ್ಕ,ಜಿಲ್ಲಾ ಸಾಮಾಜಿಕ ಜಾಲತಾಣದ ಕಾರ್ಯಕಾರಣಿ ಸದಸ್ಯ ರಾಘು ಕುಂದರಗಿ. ಪಕ್ಷದ ವಿವಿಧ ಸ್ಥರದ ಪಧಾದಿಕಾರಿಗಳು,ಎಸ್ ಡಿ ಎಂ ಸಿ ಸದಸ್ಯರು ಮುಂತಾದವರು ಉಪಸ್ಥಿತರಿದ್ದರು.


Leave a Comment