ಯಲ್ಲಾಪುರ :ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಪ್ರಮುಖರ ಉಪಸ್ಥಿತಿಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಜರುಗಿತು.
ಈ ಹಿಂದೆ ಅಧ್ಯಕ್ಷರಾಗಿದ್ದ ನಾಗರಾಜ್ ಮದ್ಗುಣಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಕೆ.ಎಸ್ ಭಟ್ಟ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಮಾತನಾಡಿದ ಕೆ.ಎಸ್.ಭಟ್ಟ ಸದಸ್ಯರೆಲ್ಲರನ್ನು ವಿಶ್ವಾಸದೊಂದಿಗೆ ಕರೆದೊಯ್ಯಲಿದ್ದು ಮಾದರಿ ಸಂಘವಾಗಿಸುವತ್ತ ಪ್ರಯತ್ನಿಸುವೆ. ಹಿರಿಯರ ಮಾರ್ಗದರ್ಶನ ಸದಸ್ಯರ ಅಭಿಪ್ರಾಯಕ್ಕೆ ಗೌರವಿಸುವೆಎಂದರು.ಇದೇ ಸಂದರ್ಭದಲ್ಲಿ ನೂತನ ಕಾರ್ಯದರ್ಶಿಯಾಗಿ ಪತ್ರಕರ್ತ ಶ್ರೀದರ ಅಣಲಗಾರ್ ಆಯ್ಕೆಯಾದರು ಉಳಿದಂತೆ ಹಿಂದಿನ ಆಡಳಿತ ಮಂಡಳಿಯ ಪದಾಧಿಕಾರಿಗಳನ್ನೆ ಮುಂದುವರೆಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಭಟ್ಕಳ , ಕಾರ್ಯದರ್ಶಿ ನರಸಿಂಹ ಅಡಿ, ರಾಜ್ಯ ಸಂಘದ ಸದಸ್ಯ ಸುಭ್ರಾಯ ಭಟ್ಟ ಬಕ್ಕಳ, ಜಿಲ್ಲಾಧ್ಯಕ್ಷ ರಾಧೆಕೃಷ್ಣ ಭಟ್,ಉಪಾಧ್ಯಕ್ಷ ಬಿ.ವಿ ಪಾಟೀಲ,ತಾಲೂಕ ಸಂಘದ ಉಪಾಧ್ಯಕ್ಷ ಜಿ. ಎನ್ ಭಟ್ ತಟ್ಟಿಗದ್ದೆ, ಖಜಾಂಚಿ ಪ್ರಭಾವತಿ ಗೋವಿ, ಸಹಕಾರ್ಯದರ್ಶಿ ಕೇಬಲ್ ನಾಗೇಶ, ಮಾಜಿ ಅಧ್ಯಕ್ಷ ನರಸಿಂಹ ಸಾತೊಡ್ಡಿ,,ಸದಸ್ಯರಾದ ಜಯರಾಜ ಗೋವಿ, ಸುಬ್ರಾಯ ಬಿದ್ರೆಮನೆ,ದತ್ತಾತ್ರೇಯ ಭಟ್ ಕಣ್ಣಿಪಾಲ್ ಉಪಸ್ಥಿತರಿದ್ದರು.
Leave a Comment