ಹೊನ್ನಾವರ: ಲಯನ್ಸ್ ಕ್ಲಬ್ ಹೊನ್ನಾವರದ 2021-22 ನೇ ಲಯನ್ ವರ್ಷದ ಅಧ್ಯಕ್ಷರಾಗಿ ಲಯನ್ ವಿನೋದ ನಾಯ್ಕ ಮಾವಿನಹೊಳೆ, ಪ್ರಧಾನ ಕಾರ್ಯದರ್ಶಿಯಾಗಿ ಲಯನ್ ಉದಯ ನಾಯ್ಕ ಹಾಗೂ ಕೋಶಾಧ್ಯಕ್ಷರಾಗಿ ಎಮ್.ಜೆ.ಎಫ್ ಲಯನ್ ಎಸ್.ಜೆ.ಕೈರನ್ನ್ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಲಯನ್ ವಿನೋದ ನಾಯ್ಕ ಉದ್ಯಮಿಗಳಾಗಿದ್ದು,ಉಪ್ಪೋಣಿ ಗ್ರಾಮ ಪಂಚಾಯತ್ ಸದಸ್ಯರಾಗಿ,ಶರಾವತಿ ಮರಳು ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವುದರ ಜೊತೆಗೆ ವಿವಿಧ ಸಂಘ ಸಂಸ್ಥೆಗಳ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರಾಗಿದ್ದಾರೆ.
ಕಾರ್ಯದರ್ಶಿಯಾದ ಲಯನ್ ಉದಯ ನಾಯ್ಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು ನೌಕರರ ಸಂಘ,ಭಾರತ ಸೇವಾದಳದಂತಹ ವಿವಿಧ ಸಂಘಟನೆಗಳಲ್ಲಿ ಕ್ರಿಯಾಶೀಲತೆಯಿಂದ ತೊಡಗಿಸಿಕೊಂಡ ಉತ್ತಮ ಸಂಘಟಕರಾಗಿರುತ್ತಾರೆ.ಕೋಶಾಧ್ಯಕ್ಷರಾದ ಎಮ್.ಜೆ.ಎಫ್ ಲಯನ್ ಎಸ್.ಜೆ ಕೈರನ್ನ್ ರವರು ರಾಜ್ಯ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರಾಗಿದ್ದು,ಕಳೆದ 45 ವರ್ಷಗಳಿಂದ ಲಯನ್ ಸಂಸ್ಥೆಯಲ್ಲಿ ಅನೇಕ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ,ಸಾಮಾಜಿಕ ಸೇವೆಯಲ್ಲಿ ಪಾಲ್ಗೊಂಡವರಾಗಿದ್ದಾರೆ.
ಪದಗ್ರಹಣ ಸಮಾರಂಭವು 11 ಜುಲೈ 2021 ರ ರವಿವಾರ ಸಂಜೆ 5-30 ಗಂಟೆಗೆ ಹೊನ್ನಾವರದ ಫಾರೆಸ್ಟ್ ಕಾಲೋನಿಯಲ್ಲಿರುವ ಲಯನ್ಸ್ ವಿದ್ಯಾಭವನದಲ್ಲಿ ನಡೆಯಲಿದ್ದು,ಪ್ರಮಾಣ ವಚನ ಬೋಧಕರಾಗಿ ರೀಜನಲ್ ಚೇರ್ ಪರ್ಸನ್ ಎಮ್.ಜೆ.ಎಫ್ ಲಾಯನ್ ಡಾl ಸುರೇಶ ಎಸ್ ಹಾಗೂ ಮುಖ್ಯ ಅತಿಥಿಗಳಾಗಿ ಹೊನ್ನಾವರದ ಶ್ರೀ ದೇವಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮೆನೆಜಿಂಗ್ ಡೈರೆಕ್ಟರ್ ಆದ ಲಾಯನ್ ಡಾl ವಿ.ಚಂದ್ರಶೇಖರ್ ಶೆಟ್ಟಿಯವರು ಭಾಗವಹಿಸಲಿದ್ದಾರೆ.
Leave a Comment