ಚತ್ತಾಪುರ್ (ಮಧ್ಯ ಪ್ರದೇಶ):
ಮಳೆನೀರು ಸಂಗ್ರಹ ಕಾಮಗಾರಿ ವೇಳೆ
ವಿದ್ಯುತ್ ಶಾಕ್ನಿಂದ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿರುವ
ದುರಂತ ಘಟನೆ ಮಧ್ಯ ಪ್ರದೇಶದ ಚತ್ತಾಪುರ್ ಜಿಲ್ಲೆಯ ಮೌಹ್ವಾಜಾಲಾ
ಗ್ರಾಮದಲ್ಲಿ ನಡೆದಿದೆ. ಜಿಲ್ಲಾ ಕೇಂದ್ರದಿಂದ ಸುಮಾರು 42ಕಿ.ಮೀ.
ದೂರದಲ್ಲಿರುವ ಈ ಗ್ರಾಮದಲ್ಲಿ ಮಳೆನೀರು ಸಂಗ್ರಹಕ್ಕಾಗಿ ಲಕ್ಷ್ಮನ್
ಐಯಿರ್ವಾರ್ ಎಂಬುವವರು ಕಾಮಗಾರಿ ಕೈಗೊಂಡಿದ್ದರು.
ಬೆಳಗ್ಗೆ ಕಾಮಗಾರಿ ನಡೆಯುವ ಟ್ಯಾಂಕ್ನಲ್ಲಿ ಸ್ಲ್ಯಾಬ್ಗಳನ್ನು ಅಳವಡಿಸಿ
ಅದಕ್ಕೆ ವಿದ್ಯುತ್ ದೀಪದ ಸಂಪರ್ಕ ಕಲ್ಪಿಸಲಾಗಿತ್ತು. ಅಚಾನಕ್ಕಾಗಿ
ದೀಪ ಸ್ವಲ್ಪ ನೀರಿದ್ದ ಟ್ಯಾಂಕ್ಗೆ ಬಿದ್ದು ವಿದ್ಯುತ್ ಪ್ರವಹಿಸಿತ್ತು.
ಇದನ್ನು ತಿಳಿಯದೆ ಕುಟುಂಬದ ಸದಸ್ಯರು ಒಬ್ಬರ ನಂತರ ಒಬ್ಬರು
ಕಾಮಗಾರಿಗೆ ಟ್ಯಾಂಕ್ನೊಳಗೆ ಇಳಿದಾಗ ವಿದ್ಯುತ್ ಶಾಕ್ನಿಂದ ಎಲ್ಲರೂ
ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
Leave a Comment