ಯಲ್ಲಾಪುರ: ಗೂಗಲ್ ನಕಾಶೆಯಲ್ಲಿ ಕಾಳಮ್ಮ ನಗರ ಪದೇ ಪದೇ ಟಿಪ್ಪು ನಗರವೆಂದು ದಾಖಲಾಗುತ್ತಿರುವಂತಹ ಹಿಂದೂ ಅಸ್ಮಿತೆಗೆ ಧಕ್ಕೆ ತರುವ ಚಟುವಟಿಕೆಗಳನ್ನು ತಡೆಯುವಂತೆ ತಾಲೂಕಾ ಹಿಂದೂ ಜಾಗರಣಾ ವೇದಿಕೆಯಿಂದ ತಹಶೀಲ್ದಾರರಿಗೆ ಪೊಲೀಸ್ ಇಲಾಖೆ ಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಿಂದೂ ಜಾಗರಣಾ ವೇದಿಕೆ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ ಮಾತನಾಡಿ ಕಳೆದೆರಡು ಮೂರು ವರ್ಷಗಳಿಂದ ಕಾಳಮ್ಮನಗರ ಪದೇ ಪದೇ ಸಾಮಾಜಿಕ ಜಾಲತಾಣ ಹಾಗೂ ಗೂಗಲ್ ನಕ್ಷೆಯಲ್ಲಿ ಯಲ್ಲಾಪುರದಲ್ಲಿಯೇ ಇಲ್ಲದ ಟಿಪ್ಪು ನಗರವೆಂದು ದಾಖಲಾಗುತ್ತಿರುವದು ಕೋಮು ಸೌಹಾರ್ಧತೆಗೆ ಧಕ್ಕೆ ತರುವ ಸಮಾಜ ಘಾತುಕ ಶಕ್ತಿಗಳ ಕುತಂತ್ರವಾಗಿದೆ. ಯಾವದೇ ಪ್ರದೇಶವನ್ನು ಹೆಸರಿಸುವ ಮುನ್ನ ಪಟ್ಟಣ ಪಂಚಾಯತಿಯಿAದ ಧೃಡಿಕರಣಗೊಳಿಸಬೇಕು. ಆದರೆ ಯಾವದೇ ಕಾರಣವಿಲ್ಲದೇ ಕಾಳಮ್ಮ ದೇವಿಯ ಗಣೇಶನ ಆರಾಧ್ಯ ಸ್ಥಳವಾಗಿರುವ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಕಾಳಮ್ಮನಗರವನ್ನು ಪದೇ ಪದೇ ಅನಧಿಕೃತವಾಗಿ ಟಿಪ್ಪು ನಗರವೆಂದು ನಕ್ಷೆಯಲ್ಲಿ ಗೋಚರಿಸುತ್ತಿರುವದು ಹಿಂದೂಗಳ ಭಾವನೆಗಳನ್ನು ಕೆರಳಿಸುವ ಕಾರ್ಯವಾಗಿದೆ.ಟ್ವಟ್ಟರ್ ನಲ್ಲಿ ಭಾರತಾಂಭೆಯ ನಕ್ಷೆ ಬದಲಾಗಿದೆ . ಪಾಕಿಸ್ತಾನದ ಮಹಿಳೆ ಅನಧಿಕೃತವಾಗಿ ನಮ್ಮಜಿಲ್ಲೆಯಲಿ ವಾಸ್ತವ್ಯ ಮಾಡಿದ್ದು ಇವುಗಳೆಲ್ಲರ ಕುರಿತುಶೀಘ್ರವಾಗಿ ತನಿಖೆಗೊಳಪಡಿಸಿ ದುಷ್ಕರ್ಮಿಗಳವಿರುಧ್ಧ ಕ್ರಮ ಕೈಗೊಳ್ಳಬೇಕು .ಸಂಬಂದಿಸಿದ ಸೈಬರ್ ಕ್ರೈಮ್ ನವರು ಕ್ರಮಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವದು ಎಂದರು.
ತಹಶೀಲ್ದಾರ ಶ್ರೀ ಕೃಷ್ಣ ಕಾಮಕರ ಮನಿ ಸ್ವೀಕರಿಸಿ ಕ್ರಮ ತೆಗೆದುಕೊಳ್ಳು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಸುನಂದಾದಾಸ ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ, ತ್ರಿಶೂಲ ಬಳಗದ ಅಧ್ಯಕ್ಷ ಮಹೇಶ ನಾಯ್ಕ, ರಮೇಶ ಕಮ್ಮಾರ ಪಟ್ಟಣ ಪಂಚಾಯತ ಸದಸ್ಯರಾದ ಸತೀಶ ನಾಯ್ಕ , ಅದಿತ್ಯ ಗುಡಿಗಾರ , ಹಿ.ಜಾ.ವೇಸಂಚಾಲಕ ಸೋಮೇಶ್ವರ ನಾಯ್ಕ,ಪ್ರಮುಖರಾದ ಪ್ರದೀಪ ಯಲ್ಲಾಪುರಕರ,ದಿಲೀಪ ಅಂಬಿಗ,ಸುರೇಶ ನಾಯ್ಕ ,ಸುಧೀರ ಅಚಾರಿ, ಹೇಮಂತ ನೇತ್ರೇಕರ,ಪ್ರಕಾಶ ನಾಯ್ಕ ಮುಂತಾದವರು ಇದ್ದರು.
Leave a Comment