ಹೊನ್ನಾವರ : ತಾಲೂಕಿನ ಕರ್ಕಿ ಗ್ರಾಮ ಪಂಚಾಯತ ವ್ಯಾಪ್ತಿಯ ಹೊರೆಸಾಲದಲ್ಲಿ ರಸ್ತೆಯ ಮೇಲೆ ಗುಡ್ಡ ಕುಸಿತವಾಗಿ ಅಲ್ಲಿ ವಾಸಿಸುತ್ತಿರುವ ಮನೆಯವರಿಗೆ ಮತ್ತು ರಸ್ತೆಯ ಮೇಲೆ ಓಡಾಡುವವರಿಗೆ ಆತಂಕ ನಿರ್ಮಾಣವಾಗಿದೆ. ತಾಲೂಕಿನಲ್ಲಿ ಕಳೆದ ಕೆಲ ದಿನದಿಂದ ಮಳೆಯ ಆರ್ಭಟ ಜೋರಾಗಿದ್ದು, ಈ ಮಧ್ಯೆ ಇಲ್ಲಿ ಗುಡ್ಡ ಕುಸಿತ ಅಪಾಯ ಕಾಡುತ್ತಿದೆ.
ಹೊರೆಸಾಲ ರಸ್ತೆಯ ಮೇಲೆ ಪ್ರತಿದಿನ ಸಾವಿರಾರು ಜನ ಸಂಚರಿಸುತ್ತಿದ್ದು, ಸುಮಾರು ಅರ್ಧ ಕಿ. ಮೀ. ಅಷ್ಟು ಗುಡ್ಡ ಕಟಾವು ಮಾಡಿ ರಸ್ತೆ ನಿರ್ಮಿಸಿರುವುದರಿಂದ ಸಂಚರಿಸಲು ಭಯ ಪಡುವಂತಾಗಿದೆ.
ಗುಡ್ಡದ ಅಂಚಿನಲ್ಲಿ ೫ ರಿಂದ ೬ ಮನೆಗಳಿದ್ದು , ಇದು ಇನ್ನಷ್ಟು ಆತಂಕ ಹೆಚ್ಚಿಸಿದೆ. ಈಗಾಗಲೇ ಈ ಹಿಂದೆ ೩ ಲಕ್ಷ ರೂ. ವೆಚ್ಚದಲ್ಲಿ ಐವತ್ತು ಮೀ. ರಷ್ಟು ತಡೆಗೋಡೆ ನಿರ್ಮಿಸಿದ್ದಾರೆ. ಇನ್ನೂ ಬಾಕಿ ಉಳಿದ ಗುಡ್ಡಕ್ಕೆ ತಡೆಗೋಡೆ ನಿರ್ಮಿಸಬೇಕಾಗಿದೆ. ಅನಾಹುತ ಸಂಭವಿಸುವ ಮೊದಲು ಜನಪ್ರತಿನಿಧಿಗಳು ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಸಮಸ್ಯೆ ಬಗೆಹರಿಸಿ ಎನ್ನುವುದು ಸ್ಥಳೀಯರ ಅಗ್ರಹವಾಗಿದೆ.
Leave a Comment