ಹೊನ್ನಾವರ:’ಕೊರೋನಾದ ವಿರುದ್ದ ಹೋರಾಡಲು ಕಾರ್ಮಿಕರು ಮತ್ತು ಅವರ ಕುಟುಂಬದ ಸದಸ್ಯರ ಸುರಕ್ಷತೆಗಾಗಿ ಕಾರ್ಮಿಕ ಇಲಾಖೆ ನೀಡುತ್ತಿರುವ ಕೊರೊನಾ ಸುರಕ್ಷತಾ ಕಿಟ್ನ್ನು ಎಲ್ಲರೂ ಸದುಪಯೋಗಪಡಿಸಿಕೊಂಡು ಆರೋಗ್ಯವಂತರಾಗಿರಬೇಕು ಎಂದು ಹೊನ್ನಾವರ ಜೆಎಂಎಫ್ಸಿ ಸಿವಿಲ್ ನ್ಯಾಯಾಧೀಶ ಕುಮಾರ್ ಜಿ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಬೆಂಗಳೂರು, ತಾಲೂಕಾಡಳಿತ ಮತ್ತು ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕಾರ್ಮಿಕ ಇಲಾಖೆ ಹೊನ್ನಾವರ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಕಟ್ಟಡ ಕಾರ್ಮಿಕರ ಕಿಟ್ ವಿತರಣಾ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ದೇಶದಲ್ಲಿ ಕೊರೊನಾ ಮಹಾಮಾರಿ ಉಲ್ಬಣವಾಗಿ, ಕೊರೋನಾದಿಂದ ಅನೇಕ ಸಾವು ನೋವುಗಳನ್ನು ಕಂಡಿದ್ದೇವೆ. ಅನೇಕ ಕುಟುಂಬಗಳ ಸದಸ್ಯರು ಸಂಕಷ್ಟಕ್ಕೊಳಗಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಕಾರ್ಮಿಕರು ಮತ್ತು ಅವರ ಕುಟುಂಬದವರ ಆರೋಗ್ಯ ಹಿತದೃಷ್ಟಿಯಿಂದ ಸುರಕ್ಷತಾ ಮತ್ತು ನೈರ್ಮಲಿಕರಣ ಕಿಟ್ ಗಳನ್ನು ನೀಡಲಾಗಿದೆ ಎಂದರು.
ಸಭಾ ಕಾರ್ಯಕ್ರಮದ ನಂತರ ಪಟ್ಟಣದ ಮಾಸ್ತಿ ಕಟ್ಟೆ ಹಾಗೂ ತಾಲೂಕಿನ ಮಠದಕೇರಿ ಕರ್ಕಿ,ಸಾಲಿಕೇರಿ ಹಳದಿಪುರ,ಮಂಕಿ ಮಾವಿನಕಟ್ಟೆ,ಚಿತ್ತಾರ,ದೇವರಗದ್ದೆ,ಹಳೇಮಠ,ಕಾಸರಕೋಡ್,ಅಪ್ಸರ್ ಕೊಂಡ,ಟೋಲ್ ನಾಕಾ ಕರ್ಕಿಕಟ್ಟಡ ಕಾರ್ಮಿಕರು ಕಾರ್ಯನಿರ್ವಹಿಸುತ್ತಿರುವ ಸ್ಥಳಗಳಿಗೆ ಕಾರ್ಮಿಕ ನಿರೀಕ್ಷಕರಾದ ಕಾವೇರಿ ಟಿ ಸಿಬ್ಬಂದಿಗಳೊಂದಿಗೆ ತೆರಳಿ ಕಾರ್ಮಿಕರಿಗೆ ಕಿಟ್ ವಿತರಿಸಿದರು. ಹೊನ್ನಾವರ ಜೆಎಂಎಫ್ಸಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಜಿ.ಬಿ.ಹಳ್ಳಕಾಯಿ, ಕಾರ್ಮಿಕ ಸಿಬ್ಬಂದಿ ಆನಂದ ಮತ್ತಿತರಿದ್ದರು..
Leave a Comment