• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ವಿದ್ಯಾರ್ಥಿಗಳ ವಿನಯತೆ ಯೇ ಗುರುವಿಗೆ ನೀಡುವ ಗೌರವವಾಗಿದೆ _ ಡಾ. ಅರುಣ ಉಳ್ಳಾಲ.

July 23, 2021 by Jayaraj Govi Leave a Comment

IMG 20210723 WA0144


    ಯಲ್ಲಾಪುರ ಭಗವಂತನ ಕಡೆ ಮಾರ್ಗ ತೋರಿಸುವ ಶಕ್ತಿ ಗುರುವಿಗೆ ಇದೆ. ಜಗತ್ತಿನಲ್ಲಿ ಗುರುಗಳಿಗಿಂತ ದೊಡ್ಡವರಿಲ್ಲ. ಸತ್ಯ ಮಾರ್ಗದ ಕಡೆ ನಡೆಯಲು ಗುರುವಿನ ಅಗತ್ಯ ಅನಿವಾರ್ಯ ಎಂದು
ಡಾ.ಅರುಣ ಉಳ್ಳಾಲ ರವರು ಹೇಳಿದರು.

ಅವರು ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ನಡೆದ ಗುರು ಪೂರ್ಣಿಮೆ’ಕಾರ್ಯಕ್ರಮದಲ್ಲಿ ಆನಲೈನ್ ಮೂಲಕ ವಿಶೇಷ ಉಪನ್ಯಾಸ ನೀಡಿ ಮಾತನಾಡಿ ವಿದ್ಯಾರ್ಥಿಗಳ ವಿನಯತೆ ಹಾಗೂ ಸದ್ಗುಣಗಳೇ ಗುರುವಿಗೆ ಸಲ್ಲಿಸುವ ಗೌರವವಾಗಿದೆ. ವಿದ್ಯಾರ್ಥಿಗಳ‌ ಜೀವನ ತ್ರಿಕೋನ ಆಕಾರದಂತೆ. ಅದರಲ್ಲಿ ಒಂದು ಕಡೆ ತಂದೆ, ಇನ್ನೊಂದು ಕಡೆ ತಾಯಿ ಇರುವರು. ಮುಂಬಾಗದಲ್ಲಿ ಗುರು ಬದುಕನ್ನು ಮುನ್ನಡೆಸುವರು.

ಜೀವನದ ಒಟ್ಟು ನಡೆಯಲ್ಲಿ ಗುರುವಿನ ಪಾತ್ರ ಅತಿ ದೊಡ್ಡದಾಗಿದೆ ಎಂದರು.. ಇಂದಿನ ಕಾಲಮಾನದಲ್ಲಿ ಕಾನೂನಿನ ಬಲೆಯೊಳಗೆ ಸಿಲುಕಿದ ಜಿಂಕೆಯ ಪರಿಸ್ಥಿತಿ ಗುರುವಿನದ್ದಾಗಿದೆ. ಹೀಗಾಗಿ ಗುರು ಆದವನು ಬಹಳ ಎಚ್ಚರದಿಂದ‌ ಇರಬೇಕು. ಜೊತೆಗೆ, ಮೃದುವಾಗಿ ಬೋಧನೆ ಮಾಡಿ ಮಗುವಿನ ಮನಸ್ಸು ಗೆಲ್ಲುವ ಸಾಮರ್ಥ್ಯ ಹೊಂದಿರಬೇಕು ಎಂದು ಕಿವಿಮಾತು ಹೇಳಿದರು. ಸಮಾಜಕ್ಕೆ ಪರಿಪೂರ್ಣ ಗುರುವಿನ ಕೊರತೆಯ ಜೊತೆ ಪ್ರಾಮಾಣಿಕ ಹಾಗೂ ಪ್ರಜ್ಞಾವಂತ ವಿದ್ಯಾರ್ಥಿಗಳ ಕೊರತೆಯೂ ಇದೆ. ನಮಗೆಲ್ಲ ಆದರ್ಶರ ನಡೆ ದಾರಿ ದೀಪವಾಗಬೇಕು.

ಪ್ರತಿಯೊಬ್ಬರ ಮೇಲೆಯೂ ಸಮಾಜದ ಋಣವಿದ್ದು, ನಾವು ಕಲಿತ ವಿದ್ಯೆ ಹಾಗೂ ಯಶಸ್ಸಿನಲ್ಲಿ ಒಂದು ಪಾಲನ್ನು ಸಮಾಜಕ್ಕೆ ನೀಡಬೇಕು ಎಂದು ಅವರು ಕರೆ ನೀಡಿದರು.
      ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲೆ ಮುಖ್ಯಾಧ್ಯಾಪಕ ಪ್ರಸನ್ನ ಹೆಗಡೆ ಕಾರ್ಯಕ್ರಮ ಉದ್ಘಾಟಿಸಿದರು. ಕುಮಾರಿ ಅಪೂರ್ವ ಕೆರೆತೋಟ ಪ್ರಾರ್ಥಿಸಿದರು. ವೀಣಾ ಭಾಗ್ವತ ಸ್ವಾಗತಿಸಿದರು. ಸೀತಾರಾಮ ಗೌಡ ನಿರ್ವಹಿಸಿದರು. ಪ್ರಶಿಕ್ಷಣಾರ್ಥಿಯಾದ ದೀಪಶ್ರೀ ಭಟ್ಟ ವಂದಿಸಿದರು.


ಬಿಇಡಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್ .ಎಲ್ .ಭಟ್ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಪಕಿ ಮುಕ್ತಾ ಶಂಕರ,ಬೆಳಕಿನಂದ ಸಂಚಾಲಕಿ ಕವಿತಾ ಹೆಬ್ಬಾರ ಹಾಗೂ ಶೇಖರ ಬೇಳಾಲ ಉಪಸ್ಥಿತರಿದ್ದರು.ಪಾಲಕರು ವಿದ್ಯಾರ್ಥಿಗಳು ಪ್ರಶಿಕ್ಷಣಾರ್ಥಿಗಳು ಗೂಗಲ್ ನೇರ ಪ್ರಸಾರ ವೀಕ್ಷಿಸಿದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Yellapur Tagged With: ಗೆಲ್ಲುವ ಸಾಮರ್ಥ್ಯ ಹೊಂದಿರಬೇಕು, ಬಹಳ ಎಚ್ಚರದಿಂದ‌ ಇರಬೇಕು, ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ, ಸಮಾಜಕ್ಕೆ ಪರಿಪೂರ್ಣ ಗುರುವಿನ ಕೊರತೆ

Explore More:

About Jayaraj Govi

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,147 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...