ಹೊನ್ನಾವರ: ಕೊರೋನಾ ಕಾರಣ ನೀಡಿ ಕರ್ನಾಟಕ ವಿಶ್ವವಿದ್ಯಾಲಯ ಪದವಿ 1,3,5ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಮಾರ್ಚನಲ್ಲಿ ನಡೆಸದೇ ಮುಂದೂಡಿತ್ತು. ನಂತರ ಏಪ್ರೀಲನಲ್ಲಿ ಪರೀಕ್ಷೆ ನಡೆಸದೇ ಮುಂದಿನ ಸೆಮಿಸ್ಟರ್ ತರಗತಿಯನ್ನು ಆನಲೈನ್ ಮೂಲಕ ಆರಂಭಿಸಿ ಅಗಸ್ಟ 14ರವರೆಗೆ ತರಗತಿ ಎಂದು ಆದೇಶ ಹೊರಡಿಸಿತ್ತು.
ಬಹು ಆಯ್ಕೆಯ ಮಾದರಿಯಲ್ಲಿ ಪರೀಕ್ಷೆ ನಡೆಸಿ 5ನೇ ಸೆಮಿಸ್ಟರ್ ಪ್ರಮೋಟ್ ಮಾಡಿ 6ನೇ ಸೆಮಿಸ್ಟರ್ ಪರೀಕ್ಷೆ ಎಂದು ಅಧಿಕೃತ ಆದೇಶ ಹೊರಡಿಸಲಾಗಿತ್ತು. ಇದೀಗ ಆದೇಶ ರದ್ದು ಮಾಡಿ ಅಗಸ್ಟ 7ರಂದು ತರಗತಿ ಪೂರ್ಣಗೊಳಿಸಿ 5ನೇ ಸೆಮಿಸ್ಟರ ಪರೀಕ್ಷೆ ಅಗಸ್ಟ 16 ರಿಂದ ಮತ್ತು ಸಪ್ಟೆಂಬರ್ 15ರಿಂದ 6ನೇ ಸೆಮಿಸ್ಟರ್ ಪರೀಕ್ಷೆ ಎಂದು ಆದೇಶ ಹೊರಡಿಸಿದೆ.

ಇದು ವಿದ್ಯಾರ್ಥಿಗಳಿಗೆ ಆತಂಕ ಮೂಡಿಸಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ 5ರಿಂದ 6 ಬಾರಿ ಆದೇಶವನ್ನು ಬದಲಿಸುತ್ತಾ ಗೊಂದಲಮಯ ಮಾಡಿದೆ. ವಿದ್ಯಾರ್ಥಿಗಳ ಭವಿಷ್ಯದೊಡನೆ ವಿಶ್ವವಿದ್ಯಾಲiÀು ಚೆಲ್ಲಾಟವಾಡುತ್ತಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಈ ಹಿಂದಿನಂತೆ 5 ನೇ ಸೆಮಿಷ್ಟರ್ ಪರೀಕ್ಷೆ ಪ್ರಮೋಟ್ ಮಾಡಿ ತರಗತಿ ಪೂರ್ಣಗೊಳಿಸಿ 6ನೇ ಸೆಮಿಸ್ಟರ್ ಪರೀಕ್ಷೆ ಬಹು ಆಯ್ಕೆ ಮಾದರಿ ನಡೆಸುವಂತೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ವಿದ್ಯಾರ್ಥಿಗಳ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಸಹಾಯಕ ಆಯುಕ್ತೆ ಮಮತಾದೇವಿ ಬಿ.ಎಸ್. ತಹಶೀಲ್ದಾರ ವಿವೇಕ ಶೇಣ್ವಿ ಜಂಟಿಯಾಗಿ ವಿದ್ಯಾರ್ಥಿಗಳ ಮನವಿ ಸ್ವೀಕರಿಸಿ ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

ಎಸ್.ಡಿ.ಎಂ. ಮತ್ತು ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರತಿಭಟನೆಯಲ್ಲಿ ಹಾಜರಿದ್ದರು.
5ನೇ ಸೆಮಿಸ್ಟರ್ ಪರೀಕ್ಷೆ ಪ್ರಮೋಟ್ ಮಾಡಿ 6ನೇ ಸೆಮಿಸ್ಟರ್ ಪರೀಕ್ಷೆ ನಡೆಸಬೇಕು. ಒಂದು ತಿಂಗಳ ಅವಧಿಯಲ್ಲಿ ಎರಡು ಸೆಮಿಸ್ಟರ್ ಅವಧಿಯ ವಿಷಯವನ್ನು ಅಧ್ಯಯನ ನಡೆಸಿ ಪರೀಕ್ಷೆ ಎದುರಿಸುದು ಕಷ್ಟ ಸಾಧ್ಯ. ಅದರಲ್ಲಿಯೂ ವಿಜ್ಞಾನ ವಿಭಾಗದವರು ಥೇರಿ ಮತ್ತು ಪ್ರಾಕ್ಟಿಕಲ್ ಪರೀಕ್ಷೆಯಲ್ಲಿ ಪಾಲ್ಗೊಂಡರೆ ಸಮಯವೇ ಇರುವದಿಲ್ಲ. ವಿದ್ಯಾರ್ಥಿಗಳಿಗೆ ಅನೂಕೂಲ ಮಾಡಲು ಈ ಹಿಂದೆ ನೀಡಿದ ಆದೇಶವನ್ನು ಅನುಷ್ಟಾನಗೊಳಿಸಬೇಕು.
ರಕ್ಷಾ ನಾಯ್ಕ ವಿಜ್ಞಾನ ವಿಭಾಗದ ಪದವಿ ಅಂತಿಮ ವರ್ಷದ ವಿದ್ಯಾರ್ಥಿನಿ
……………
ಈ ಬಾರಿ ಆನಲೈನ್ ಮೂಲಕ ತರಗತಿ ನಡೆಸಿದ್ದಾರೆ. ತಾಲೂಕಿನಲ್ಲಿ ಗ್ರಾಮೀಣ ಭಾಗದವರೆ ಅಧಿಕವಿದ್ದು, ಹಲವು ಭಾಗದಲ್ಲಿ ನೆಟವರ್ಕ ಸಮಸ್ಯೆಯಿಂದ ತರಗತಿ ಪೂರ್ಣಪ್ರಮಾಣದಲ್ಲಿ ಹಾಜರಾಗಲು ಸಾಧ್ಯವಾಗಿಲ್ಲ. ಈ ಮಧ್ಯೆ ವಿಶ್ವವಿದ್ಯಾಲಯದ ಆದೇಶ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟುಮಾಡಿದೆ. ಜುಲೈ 26ರವರೆಗೆ ಸಮಯ ನೀಡುತ್ತೇವೆ ಸಮಸ್ಯೆ ಬಗೆಹರಿಯದೇ ಹೋದಲ್ಲಿ ವಿದ್ಯಾರ್ಥಿಗಳು ಕರೆ ನೀಡಿದ ಹೋರಾಟಕ್ಕೆ ಸಂಘಟನೆಯವರು ಸೇರಿ ಹೋರಾಟ ನಡೆಸಲಗುವುದು
ಮಂಜುನಾಥ ಗೌಡ ಕರವೇ ಅಧ್ಯಕ್ಷ
Leave a Comment