ಯಲ್ಲಾಪುರ: ತಾಲೂಕಿನಲ್ಲಿ ವರುಣನ ಅರ್ಭಟದಿಂದ ಹಲವೆಡೆ ಮರಗಳು ಧರೆಗುರುಳಿ, ಗುಡ್ಡಕುಸಿತ ಉಂಟಾಗಿ ಗ್ರಾಮಗಳ ನಡುವಿನ ಸಂಪರ್ಕವೇ ಕಡಿತಗೊಂಡಿದೆ. ನದಿ ,ಹಳ್ಳಕೊಳ್ಳಗಳು ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿವೆ. ಕೆಲವು ಗ್ರಾಮಗಳು ಸಂಪೂರ್ಣ ಜಲಾವೃತಗೊಂಡು ನಡುಗಡ್ಡೆಯಂತಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.ಶುಕ್ರವಾರ ಸಂಜೆಯಿAದ ಮಳೆಯ ಅರ್ಭಟ ಸ್ವಲ್ಪಕಡಿಮೆಯಾಗಿತ್ತು.
ತಾಲೂಕಿನ ತಳಕೈ ಬೈಲ್, ಕಳಚೆಯಲ್ಲಿ ಗುರುವಾರ ರಾತ್ರಿ ಗುಡ್ಡ ಕುಸಿದು ಮನೆಯೊಳಗೆ ಬಿದ್ದಿದೆ. ಆರ್. ವಿ. ಭಟ್ ಹೊಸ ಕುಂಬ್ರಿ ಎಂಬುವವರ ಮನೆಯ ಹಿಂಬದಿಯ ಸುಮಾರು ಒಂದು ಎಕರೆ ಅಡಿಕೆ ತೋಟ ೨ ನೆಡುತೋಪು ನೆಲಸಮವಾಗಿದೆ.ಮನೆಗಳಿಗೆ ತೆರಳುವ ರಸ್ತೆ ಸಂಪೂರ್ಣವಾಗಿ ಮುಚ್ಚಿ ಹೋಗಿವೆ. ಇನ್ನು ಮನೆ ಕುಸಿಯುವ ಆತಂಕದಿAದ ಇರುವಂತಾಗಿದೆ. ಸಮೀಪದಲ್ಲಿ ಹರಿಯುತ್ತಿರುವ ಹಳ್ಳ ತುಂಬಿ ಹರಿಯುತ್ತಿದ್ದು, ಗುಡ್ಡದಿಂದ ನೀರು ಹರಿದುಬರುತ್ತಿದೆ.


ಇದರಿಂದ ಮತ್ತಷ್ಟು ಆತಂಕ ಮೂಡಿದೆ ಎಂದು ಗ್ರಾಮಸ್ಥರ ಅಳಲು ಆಗಿದೆ.ಕಳಚೆಯ ನಾರಾಯಣ ಎನ್ನುವವರ ಮನೆಸಂಪೂರ್ಣವಾಗಿ ಕುಸಿದು ಬಿದ್ದಿದೆ. ಮಹಿಳೆಯೊಬ್ಬರು ಮನೆಯಲ್ಲಿ ಸಿಲುಕಿಕೊಂಡಿರಬಹುದುಎನ್ನಲಾಗುತ್ತಿದೆ. ಮಕ್ಕಳನ್ನು ರಕ್ಷಿಸಲಾಗಿದೆ ಹಾಗೂ ಪಿ. ಜಿ ಹೆಗಡೆ ದನದ ಕೊಟ್ಟಿಗೆಯ ಸಂಪೂರ್ಣ ನೆಲಸಮವಾಗಿದ್ದು ಜಾನವಾರು ಸಿಲುಕಿಕೊಂಡು ಅಸುನೀಗಿದೆ. ಕಳಚೆ-ಮಲ್ಲಾಪುರ ರಸ್ತೆ ಕುಸಿದಿದ್ದರಿಂದ ಸಂಪರ್ಕ ಕಡಿತಗೊಂಡಿದೆ.
ತಾಲೂಕಿನ ಉಮ್ಮಚ್ಗಿ ಪಂಚಾಯತ ವ್ಯಾಪ್ತಿಯಲ್ಲಿ ಬಹಳ ಹಾನಿ.ಶೀಗೇಮನೆ ರೈತರು ಹೊಲಕ್ಕೆ ಹೋಗುವ ರಸ್ತೆ ಕುಸಿತ ಉಂಟಾಗಿದ್ದು, ರೈತರ ಓಡಾಟಕ್ಕೆ ತೀರ್ವ ತೊಂದರೆ ಉಂಟಾಗಿರುತ್ತದೆ.
ತುಡುಗುಣಿಯಿAದ ಸೂರಿಮನೆಗೆ ಹೋಗುವ ರಸ್ತೆ ಕೂಡ ತುಡುಗುಣಿ ಹೊಳೆಯ ಪಕ್ಕದಲ್ಲಿ ಕುಸಿತವಾಗುತ್ತಿದ್ದು, ತುಡುಗುಣಿಯ ನಾಗೇಂದ್ರ ಭಟ್ಟ, ಅಶೋಕ ಹೆಗಡೆ, ಎನ್.ಜಿ.ಹೆಗಡೆ ಮೊದಲಾದ ರೈತರ ಅಡಿಕೆ ತೋಟಗಳು ಜಲಾವೃತವಾಗಿ ತೋಟಕ್ಕೆ ಹಾಕಿದ ಮಣ್ಣು,ಗೊಬ್ಬರ ಕೊಚ್ಚಿ ಹೋಗಿರುತ್ತದೆ.
ಕೆಲವು ಕಡೆ ಅಡಿಕೆ ಮರಗಳು ಕಿತ್ತು ಬೀಳುತ್ತಿವೆ. ನೀರಿನಲ್ಲಿ ಮುಳುಗಿದ ಕಾಳುಮೆಣಸಿನ ಬಳ್ಳಿಗಳು ಹಾಳಾಗುತ್ತಿವೆ.ಹುಣಸೆಮನೆಯ ಕುಪ್ಪಯ್ಯ ಪೂಜಾರಿ ಅವರಿಗೆ ಸೇರಿದ ಅಡಿಕೆ ತೋಟದ ಮೇಲೆ ಮರ ಬಿದ್ದು ಇಪ್ಪತ್ತಕ್ಕೂ ಹೆಚ್ಚು ಅಡಿಕೆ ಮರಗಳು ಹಾನಿಯಾಗಿರುತ್ತವೆ.
ಸೂರಿಮನೆಗೆ ಹೋಗುವ ಕರೆಂಟ್ ಲೈನ್ ನ ಹತ್ತಕ್ಕಿಂತ ಹೆಚ್ಚು ಕಂಬಗಳು ಮುರಿದು ಬಿದ್ದಿರುತ್ತವೆ. ತೋಟದಕಲ್ಲಳ್ಳಿ ಗ್ರಾಮದ ಆಚೆ ಬಾಳೆಗದ್ದೆಯಲ್ಲೂ ಲೈನ್ ಮೇಲೆ ಮರ ಬಿದ್ದು ಹಾನಿಯಾದ ಬಗ್ಗೆ ತಿಳಿದು ಬಂದಿದೆ.ಹಾನಿಗೊಳಗಾದ ಪ್ರದೇಶಗಳಿಗೆ ಉಮ್ಮಚ್ಗಿ ಪಂಚಾಯತದ ಉಪಾಧ್ಯಕ್ಷ ಶಿವರಾಯ ಪೂಜಾರಿ, ಪಿ.ಡಿ.ಒ.ಶ್ರೀಧರ ಪಟಗಾರ, ವಿಲೇಜ್ ಅಕೌಂಟೆAಟ್ ಸವಿತಾ ಭಜಂತ್ರಿ, ಗ್ರಾ.ಪಂ.ಸದಸ್ಯರುಗಳಾದ ಕುಪ್ಪಯ್ಯ ಪೂಜಾರಿ, ಖೈತಾನ್ ಡಿಸೋಜ, ಅಶೋಕ ಪೂಜಾರಿ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿರುತ್ತಾರೆ.
ತಾಲ್ಲೂಕಿನ ವಜ್ರಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಳೆಯ ನೀರು ನುಗ್ಗಿದೆ. ಹೊನ್ನಗದ್ದೆ ಗ್ರಾಮದಲ್ಲಿ ತುಂಬಿ ಹರಿದ ಹಳ್ಳ ಅಪಾರವಾದ ಕೃಷಿ ತೋಟಗಳಿಗ್ಗೆ ನುಗ್ಗಿ ಗೊಬ್ಬರ,ಸೊಪ್ಪು,ತೆರಕು ತೊಳೆದು ಹೋಗಿದೆ.ಬಾಳೆಅಡಿಕೆ ಗಿಡಗಳು ನೆಲಕ್ಕೆ ಉರುಳಿವೆ. ಪ್ರತಿ ರೈತರಿಗೂ ಅಪಾರ ಹಾನಿ ಸಂಭವಿಸಿದ್ದು ತಾಲ್ಲೂಕಾಡಳಿತ ಸಮೀಕ್ಷೆ ನೆಡಸಬೇಕಿದೆ. ಮಳೆಯ ಹೆಚ್ಚಾಗುತ್ತಿದ್ದು. ಗ್ರಾಮೀಣ ಪ್ರದೇಶದಲ್ಲಿನ ಹಳ್ಳದ ಕಾಲು ಸಂಕಗಳೆಲ್ಲಾ ತೇಲಿ ಹೋಗಿದೆ. ಭೀಕರ ಮಳೆಯಿಂದ ಮನೆಗಳಲ್ಲಿ ಜನರ ಆತಂಕ ಹೆಚ್ಚಾಗುತ್ತಿದೆ.ತಾಲೂಕಿನ ಅರಬೈಲ್ ಘಟ್ಟ,ವಜ್ರಳ್ಳಿ,ಕಳಚೆ, ಬೀಗಾರ ರಸ್ತೆಯಂಚಿನಲ್ಲಿ ಮಣ್ಣು ಕುಸಿತ ವಾಗಿದ್ದರಿಂದ ರಸ್ತೆ ಸಂಪರ್ಕಕಡಿತಗೊAಡAತಾಗಿದೆ.
yellapura news:ಸುದ್ದಿ ಹಾಗೂ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಿ
https://chat.whatsapp.com/D0Ry5Povwke1s77ibSLq4A
Leave a Comment