ಹೊನ್ನಾವರ: ತಾಲೂಕಿನ ಕರ್ಕಿ ಶ್ರೀ ಚೆನ್ನಕೇಶವ ಪ್ರೌಢಶಾಲೆಯ ಸಭಾಂಗಣದಲ್ಲಿ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೋಡುಗೆ ಸಮಾರಂಭ ನಡೆಯಿತು.ಈ ಸಂದರ್ಭದಲ್ಲಿ ಕಳೆದ ವರ್ಷದ ಪ್ರತಿಭಾಸಂಪನ್ನರಿಗೆ ಶಿಷ್ಯವೇತನ ಪುರಸ್ಕಾರ ಪ್ರದಾನ ಮಾಡಲಾಯಿತು.
ಸಭೆಯ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಬಿ ಎಸ್ ಎನ್ ಎಲ್ ಅಧಿಕಾರಿಯಾದ ಕೃಷ್ಣಮೂರ್ತಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಜೀವನದಲ್ಲಿ ಸಂಸ್ಕಾರ,ಸಂಸ್ಕೃತಿ ವಿದ್ಯೆಗೆ ಭೂಷಣವಾಗಿದೆ.ಕಲಿತ ಶಾಲೆ,ಋಣ ತೀರಿಸಲಾರದ ತಂದೆ,ತಾಯಿ ಮತ್ತು ಸಮಾಜವನ್ನು ಎಂದಿಗೂ ಮರೆಯಬಾರದು ಎಂದು ಕಿವಿಮಾತು ಹೇಳಿ ೧೦ ಸಾವಿರ ಹಣವನ್ನು ಶಾಲೆಗೆ ಧನಸಹಾಯ ಮಾಡಿದರು. ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ 8 ನೇ ಸ್ಥಾನ ಪಡೆದ ಕುಮಾರ ಅಮಿತ ಪೈಗೆ ಜಿ.ಜಿ.ಭಟ್ಟ, ಗದ್ದೆಯವರು 20000/- ಶಿಷ್ಯವೇತನ ನೀಡಿದರು.


ಶಾಲೆಯ ವಿಧ್ಯಾಭಿಮಾನಿಗಳು ನೀಡಿದ ಶಿಷ್ಯವೇತನ ಪುರಸ್ಕಾರವನ್ನು 20 ವಿದ್ಯಾರ್ಥಿಗಳು ಪಡೆದರು. ಗಜಾನನ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿಯ ಸದಸ್ಯ ಎಮ್.ಕೆ.ಭಟ್ಟ, ಶ್ರೀಮತಿ ದುರ್ಗಾಬಾಯಿ ಜೋಷಿ, ಮುಖ್ಯಪಧ್ಯಾಪಕರಾದ ಎಲ್.ಎಮ್.ಹೆಗಡೆ ಸುಬ್ರಹ್ಮಣ್ಯ ಭಟ್ ಜಿ.ಕೆ.ಭಟ್ಟ, ಮುಕ್ತಾ ನಾಯ್ಕ, ಸೀಮಾ ಭಟ್ ಉಪಸ್ಥಿತರಿದ್ದರು.
Honvar news:ಸುದ್ದಿ ಹಾಗೂ ಮಾಹಿತಿಗಾಗಿ ನಮ್ಮ. Whatsapp group join ಆಗಿ https://chat.whatsapp.com/G9SxG7l3Wo36m72c85bSOA

Leave a Comment