
ಯಲ್ಲಾಪುರ :ವಜ್ರಳ್ಳಿ ಪಂಚಾಯತ ದ ಕಳಚೆ ಗ್ರಾಮವು ಮೌನದಲ್ಲಿದೆ. ಪ್ರಕೃತಿಯ ಅಪರೂಪದ ತಾಣವೊಂದು ಹಳ್ಳಗಳ ಮೂಲಕ ಕೊಚ್ಚಿಹೋಗಿದೆ. ಮಕ್ಕಳು, ವೃದ್ದರನ್ನು, ಮಹಿಳೆಯರು ಬದುಕಿದ್ದ ಮನೆಯನ್ನು ತೊರೆದು ಬೇರೆ ನೆಲೆಯನ್ನು ಕಾಣತೊಡಗಿದ್ದಾರೆ.
ಭಾರಿ ಮಳೆಯು ಕಳಚೆಯ ಗ್ರಾಮದ ಸಂಪೂರ್ಣ ಗುಡ್ಡಹೋಗಿದೆ. ಈ ಕುಗ್ರಾಮ ಕಳಚೆಯಲ್ಲಿ ಅಪಾಯದಮನೆಗಳು ಈ ಅವಘಡದಿಂದ ಕಂಗಾಲಾಗಿದೆ. ಕೃಷಿ ತೋಟ, ಅರಣ್ಯ ನೆಲಸಮವಾಗಿದೆ. ಜೊತೆಗೆ ವಿದ್ಯುತ್,ಮೊಬೈಲ್ ,ಬಸ್‌ಸಂಪರ್ಕ ಸಂಪೂರ್ಣ ಸ್ಥಬ್ದಗೊಂಡಿದೆ. ಇಂದು ಕಳಚೆ ತಲುಪಬೇಕಾದ ಏಕೈಕ ರಸ್ತೆಯೂ ತಲಕೇಬೈಲ್ ರಾಜ್ಯ ಹೆದ್ದಾರಿಯ ಕುಸಿತದಿಂದ ಸಂಪರ್ಕ ಕಳೆದುಕೊಂಡಿದೆ.ಹಾಗಾಗಿ ಕಾಲ್ನಡಿಗೆಯಲ್ಲಿಯೇ ಕ್ರಮಿಸಿದರೆ ಕಳಚೆ ತಲುಪಬಹುದು.
ದನ ಜಾನುವಾರು ಕುಟುಂಬ ಅನಾಥವಾಗಿ ಬಂಧುಬಳಗದ ಆಶ್ರಯವಾಗಿದ್ದಾರೆ.ಶಾಶ್ವತವಾದ ರಸ್ತೆ ಸಂಪರ್ಕವಿಲ್ಲದೇ , ಬೆಟ್ಟ ಗುಡ್ಡದಿಂದ ಹರಿಯುವ ಕುಡಿಯುವ ನೀರಿಗೂ ಪರಿತಪಿಸು
ಹೊರ ಜಗತ್ತಿನ ಸಂಪರ್ಕ ದಿಂದ ವಂಚಿತರಾಗಿರುವುದು ದಾಖಲೆಯಾಗಿದೆ. ಕಳೆದ ನಾಲ್ಕು ದಿನಗಳಿಂದ ನರಕಯಾತನೆ ಅನುಭವಿಸುತ್ತಿದ್ದ ಕಳಚೆಯ ಜನರೊಂದಿಗೆ ಅನೇಕರು ಸಹಕರಿಸುತ್ತಿದ್ದಾರೆ. ಹೊರಗಿನಿಂದ ಸ್ವಯಂ ಸೇವಕರಾಗಿ ಸೇವೆಯಲ್ಲಿ ತೊಡಗಿ ಜನರ ಬಳಿ ಸೇವಾ ನಿರತರಾಗಿದ್ದಾರೆ.
ನೂರಾರು ಮನೆಗಳಿರುವ ಹಳ್ಳಿಯ ಕುಟುಂಬ ಕೃಷಿ ಜಮೀನು ಮಣ್ಣುಪಾಲಾಗಿದೆ. ಸೃಷ್ಟಿಯ ಸವಾಲುಗಳಿಗೆ ಬದುಕು ಮೌನವಾಗಿದೆ. ಶತಮಾನಗಳಿಂದ ಕಟ್ಟಿ ಬೆಳೆಸಿದ ಊರು ಅವಷೇಶವಾಗಿ ಪರಿಣಮಿಸಿದೆ..ಯಾವ ಸಂಪರ್ಕದ ವ್ಯವಸ್ಥೆಯನ್ನೂ ಮಾಡಲಾಗದ ಅಸಹಾಯಕತೆ ಆವರಿಸಿದೆ. ಪರ್ಯಾಯವಾಗಿ ಪುನರ್ವಸತಿಯೇ ದಾರಿಯಾಗಿರುವ ಕಳಚೆಗೆ ಮತ್ತೆ ನೆಲೆ ಕಾಣುವ ಸಾಗುವಳಿ ಮಾಡುವ ಕನಸು ಕನಸೇ ಆಗಿದೆ. ಪುರ್ನವಸತಿಯ ಬಗೆಗೆ ಯೋಚಿಸುವಂತೆ ಮಾಡಿದೆ.
yellapura news:ಸುದ್ದಿ ಹಾಗೂ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಿ
https://chat.whatsapp.com/D0Ry5Povwke1s77ibSLq4A


Leave a Comment