ಹೊನ್ನಾವರ : ಉತ್ತರಕನ್ನಡ ಜಿಲ್ಲೆಯ ಖ್ಯಾತ ಸಹಕಾರಿಗಳಲ್ಲೊಂದಾಗಿರುವ ಸೇಪ್ ಸ್ಟಾರ್ ಸೌಹಾರ್ಧ ತನ್ನ ಗ್ರಾಹಕ ಸದಸ್ಯರಿಗೆ ಗುಣಮಟ್ಟದ ಸೇವೆಯನ್ನು ನೀಡುತ್ತಿದೆ.
ಸೇಪ್ ಸ್ಟಾರ್ ಸೌಹಾರ್ಧದ ಅಳ್ಳಂಕಿ ಶಾಖೆಯಲ್ಲಿ ಸದಸ್ಯರಾಗಿದ್ದ ಮಾಬ್ಲೇಶ್ವರ ನಾರಾಯಣ ನಾಯ್ಕ ಎಂಬರು ಇತ್ತೀಚೆಗೆ ಅನಾರೋಗ್ಯದ ಹಿನ್ನಲೆಯಲ್ಲಿ ಮೃತಪಟ್ಟಿದ್ದರು. ಮೃತರ ವಾರಸುದಾರರಾದ ಮಡದಿ ರೋಹಿಣಿ ಮಾಬ್ಲೇಶ್ವರ ನಾಯ್ಕ ಇವರಿಗೆ ಸಹಕಾರಿ ಸೌಲಭ್ಯಗಳಲ್ಲೊಂದಾದ ಜೀವನ ಮೌಲ್ಯ ನಿಧಿಯಿಂದ 50 ಸಾವಿರ ರೂಪಾಯಿ ಚೆಕ್ ಅನ್ನು ಸಹಕಾರಿಯ ಅಧ್ಯಕ್ಷರಾದ ಜಿ.ಜಿ.ಶಂಕರ ಅವರು ವಿತರಿಸಿದ್ದಾರೆ.

ಈ ಸಂದರ್ಭದಲ್ಲಿ ಹೆರಂಗಡಿ ಗ್ರಾಮಪಂಚಾಯತ ಅಧ್ಯಕ್ಷ ಪ್ರಮೋದ ನಾಯ್ಕ, ಗ್ರಾ.ಪಂ ಸದಸ್ಯರಾದ ವಿನಾಯಕ ನಾಯ್ಕ, ವೈದ್ಯರಾದ ವಿಶ್ವೇಶ್ವರಯ್ಯ, ಉದಯಕುಮಾರ್ ಭಟ್, ಶಾಖಾ ವ್ಯವಸ್ಥಾಪಕ ಸತೀಶ ರಾಮ ಗೌಡ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಮಾದೇವ ಟಿ. ನಾಯ್ಕ ನಿರ್ವಹಿಸಿದರು. ಕೊನೆಯಲ್ಲಿ ಕುಮಾರಿ ಸುಮನಾ ತಿಮ್ಮಪ್ಪ ಗೌಡ ವಂದಿಸಿದರು.
Leave a Comment