ಹೊನ್ನಾವರ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ,(ರಿ) ತಾಲೂಕು ಘಟಕ ಹೊನ್ನಾವರ ಅರಣ್ಯ ಇಲಾಖೆ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮವನ್ನು ಸ.ಹಿ.ಪ್ರಾ.ಶಾಲೆ ಉರ್ದು ಹಿರೇಮಠ ಶಾಲಾ ಆವರಣದಲ್ಲಿ ಆಚರಿಸಿದರು.
ಗಿಡ ನೆಡುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಡಾ|| ಸವಿತಾ ನಾಯಕ ಮಾತನಾಡಿ, ಪರಿಸರ ಕಾಳಜಿ ಬಹಳ ಮಹತ್ವದ್ದು, ಪರಿಸರ ಚೆನ್ನಾಗಿದ್ದರೆ ಮನುಕುಲ ಚೆನ್ನಾಗಿ ಬಾಳಿ ಬದುಕಲು ಸಾಧ್ಯ. ವನಮಹೋತ್ಸವದ ಹೆಸರಲ್ಲಿ ಕೇವಲ ಗಿಡ ನೆಟ್ಟರಷ್ಟೇ ಸಾಲದು. ಅದನ್ನು ಸಾಕಿ ಸಲಗುವ ಜವಾಬ್ದಾರಿಯು ನಮ್ಮದಾಗಬೇಕು. ಶಿಕ್ಷಕರ ಸಂಘ ಎಂದರೆ ಕೇವಲ
ಶಿಕ್ಷಕರ ಬೇಡಿಕೆಗಳ ಹೋರಾಟಕ್ಕಷ್ಟೆ. ಸೀಮಿತವಾಗದೇ, ಉತ್ತಮ ಮೌಲ್ಯಗಳನ್ನು ಸಾರುವ ಇಂತಹ ಅನೇಕ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಸಮಾಜಕ್ಕೆ ನಾವೊಂದು ದಿಕ್ಸುಚಿಯಾಗಬೇಕು ಎಂದರು.

\
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಎಂ.ಜಿ.ನಾಯ್ಕ ಮಾತನಾಡಿ, ಸಂಘ ಸಂಘಟನೆಯ ಉದ್ದೇಶ ಕೇವಲ ನಮ್ಮ ಬೇಡಿಕೆಗಳನ್ನು ಪಡೆದುಕೊಳ್ಳುವುದು ಅಷ್ಟೇ ಸೀಮಿತವಾಗದೆ ಅದನ್ನು ಸಮಾಜ ಮುಖಿಯಾಗಿ ಬೆಳೆಸುವ ಜವಬ್ಧಾರಿ ನಮ್ಮ ಮೇಲಿದೆ. ಶೈಕ್ಷಣಿಕವಾಗಿ ಅಥವಾ ಸಾಮಾಜಿಕವಾಗಿ ಶಿಕ್ಷಕರ ಮೇಲಿಟ್ಟ ಭರವಸೆ ದೊಡ್ಡದು. ತಮ್ಮ ಮನೆಗಳಲ್ಲಿ, ಶಾಲೆಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸಿ ಉಳಿಸಿ ಪರಿಸರವನ್ನು ಉಳಿಸಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳಾದ ಸುರೇಶ ನಾಯ್ಕ,ಎಸ್.ಡಿ.ಎಂ.ಸಿ. ಅಧ್ಯಕ್ಷ ನಾಸೀರ, ಜಮಾತ್ ಅಧ್ಯಕ್ಷ ಮುರಾದ್, ಮುಖ್ಯಾಧ್ಯಾಪಕಿÀ ಬಿಬಿಫರಿದಾ ಶಿಕ್ಷಣ ಸಂಯೋಜಕಿ ದೀಪಾ ಶೆಟ್ಟಿ, ಸಿ.ಆರ್.ಪಿ ಎಮ್.ವಾಯ್.ಶೇಖ್, ಜಿಲ್ಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಸಾದನಾ ಬರ್ಗಿ, ಶಿಕ್ಷಕ ಸಂಘದ ಪದಾಧಿಕಾರಿಗಳು, ಅರಣ್ಯ ಇಲಾಖೆಯ ಸಿಬ್ಬಂದಿಗಳು, ಎಸ್.ಡಿ.ಎಂ.ಸಿ. ಸದಸ್ಯರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾ ಶಿಕ್ಷಕ ಸಂಘದ ಗೌರವಾಧ್ಯಕ್ಷರಾದ ಸುಧೀಶ ನಾಯ್ಕ ಸ್ವಾಗತಿಸಿ, ಸುರೇಶ ನಾಯ್ಕ ವಂದಿಸಿದರು. ಸುಮಾರು 20 ಕ್ಕೂ ಹೆಚ್ಚು ವಿವಿಧ ಜಾತಿಯ ಹಣ್ಣಿನ, ಔಷಧಿಯ ಮತ್ತು ಇತರ ಜಾತಿಯ ಸಸಿಗಳನ್ನು ನೆಡಲಾಯಿತು.
Leave a Comment