ಯಲ್ಲಾಪುರ : ಇತ್ತೀಚೆಗೆ ಕಳಚೆ ಗ್ರಾಮದಲ್ಲಿ ಸಂಭವಿಸಿದ ಭಾರೀ ಭೂ ಕುಸಿತದಿಂದ ಸಂತ್ರಸ್ತರಾದ
ಜನರಿಗೆ, ಯಲ್ಲಾಪುರದ ಮಾತೃಭೂಮಿ ಸೇವಾ ಪ್ರತಿಷ್ಠಾನ ಐದು ಲಕ್ಷ ರೂ. ನಗದು ಪರಿಹಾರ ಮತ್ತು ಎರಡು ಲಕ್ಷ ರೂ ಪ್ಯಾಕೇಜ್ ಘೋಷಿಸಿ, ಹಾನಿಗೊಳ
ಗಾದವರಿಗೆ ಸಾಂತ್ವನ ಹೇಳುವ ಕಾರ್ಯ ಮಾಡಿದೆ.

ಸಂಸ್ಥೆಯ ಅಧ್ಯಕ್ಷ, ಶ್ರೀರಂಗ ಕಟ್ಟಿಯವರ ನೇತ್ರತ್ವದಲ್ಲಿ ಸಂಸ್ಥೆಯ ಟ್ರಸ್ಟಿಗಳು ಮತ್ತು ಸದಸ್ಯರು
ಕಳಚೆ ಗ್ರಾಮಕ್ಕೆ ಭೇಟಿ ನೀಡಿದರು.ಈ ಸಂದರ್ಭ ದಲ್ಲಿ ಐವತ್ತು ಆಯ್ದ ಫಲಾನುಭವಿಗಳ ಸೊಸೈಟಿ ಖಾತೆಗೆ ಐದು ಲಕ್ಷ ರೂ.ಹಣ ವರ್ಗಾವಣೆಮಾಡುವ ಯಾದಿಯನ್ನು ಬಿಡುಗಡೆ ಗೊಳಿಸಲಾಯಿತು. ಈ ಕುರಿತು ಸಂತ್ರಸ್ಥರಿಗೆ ಮಾಹಿತಿ ಪತ್ರ ವಿತರಿಸಿದ ಶ್ರೀರಂಗ ಕಟ್ಟಿ, ನೈಸರ್ಗಿಕ ಅನಾಹುತದಿಂದ ನೊಂದವರಿಗೆ ಆದ ಹಾನಿ ಮತ್ತು ಅವರ ಆರ್ಥಿಕ ಪರಿಸ್ಥಿತಿಯ ಆಧಾರದ ಮೇಲೆ ತಲಾ ಐದು ಸಾವಿರದಿಂದ ಇಪ್ಪತೈದು ಸಾವಿರ ರೂ. ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು. ಭೂ ಕುಸಿತದಿಂದ ಕಳಚೆ ಭಾಗದಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾಗಿದ್ದು ಇದಕ್ಕಾಗಿ ಸಂಸ್ಥೆ, ಅಗತ್ಯವಿದ್ದವರಿಗೆ ಒಂದು ಲಕ್ಷ ರೂ ಬೆಲೆಯ ನೀರಿನ ಪೈಪು ಮತ್ತು ಕಳಚೆಯ ಮಕ್ಕಳ ಶೈಕ್ಷಣಿಕ ವೆಚ್ಚಕ್ಕಾಗಿ ಒಂದು ಲಕ್ಷ ರೂ. ನೀಡುವದಾಗಿ ಘೋಷಿಸಿದರು. ಕಳಚೆಯ ಜನರಿಗೆ ನೈತಿಕ ಬೆಂಬಲ ನೀಡುವ ಉದ್ದೇಶದಿಂದ ಸಂಸ್ಥೆ ಕಿಂಚಿತ್ ಸಹಾಯ ಮಾಡುತ್ತಿದ್ದು, ಜನರು ಧೃತಿಗೆಡದೆ ತಮ್ಮ ಬದುಕನ್ನು ಪುನರ್ ಸೃಷ್ಟಿಸಿಕೊಳ್ಳು ವಂತಾಗಲಿ ಎಂದು ಅವರು ಹಾರೈಸಿದರು.
ಟ್ರಸ್ಟಿ ಜನಾರ್ಧನ ಹೆಬ್ಬಾರ CA, ಪ್ರಾಸ್ತಾವಿಕ ಮಾತನಾಡಿ ಮಾತೃಭೂಮಿ ಸಂಸ್ಥೆಗೆ ಒಂದು ಲಕ್ಷ ರೂ. ದೇಣಿಗೆ ನೀಡುವದಾಗಿ ಘೋಷಿಸಿದರು. ಇದರಿಂದ ಬರುವ ಬಡ್ಡಿ ಹಣದಿಂದ ಏಳನೇ ತರಗತಿ ಮತ್ತು ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸುವ ಕಳಚೆಯ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವದಾಗಿ ಅವರು ತಿಳಿಸಿದರು.

ಇನ್ನೋರ್ವ ಟ್ರಸ್ಟಿ ಕಮಲಾಕರ ಭಟ್ಟ CA, ಫಲಾನುಭವಿಗಳ ಯಾದಿಯನ್ನು ಓದಿ ಹೇಳಿ ಕೊನೆಯಲ್ಲಿ ವಂದಿಸಿದರು. ಸಂಸ್ಥೆಯ ಸದಸ್ಯರಾದ ಪ್ರೇಮಾನಂದ ನಾಯ್ಕ ಇಡಗುಂದಿ, ಗಣೇಶ ಭಾಗ್ವತ ತೆಲಂಗಾರ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬೆಂಗಳೂರಿನ ಗುಡ್ ಕ್ವೆಸ್ಟ ಫೌಂಡೇಶನ್ ನ ಪ್ರತಿಮಾ ಹೆಗಡೆ ಕೆರೆತೋಟ ಮತ್ತು ಸಂಗಡಿಗರು ಸಾರ್ವಜನಿಕರಿಗೆ ಅಗತ್ಯವಾದ ಸೋಲಾರ್ ಲ್ಯಾಂಪ್ ಗಳನ್ನು ವಿತರಿಸಿದರು.
Leave a Comment