
ಯಲ್ಲಾಪುರ : ನಮ್ಮ ಆರ್ಥಿಕ ಸದೃಢತೆಗಾಗಿ ಉದ್ಯೋಗ ಕಲ್ಪಿಸಿಕೊಳ್ಳುವುದು ಸಾಮಾನ್ಯ. ಸಮಾಜಕ್ಕೆ ಒಳಿತನ್ನು ಮತ್ತು ಸಮಾಜದಲ್ಲಿ ಬಹುವರ್ಷಗಳ ಕಾಲ ಆ ವ್ಯಕ್ತಿಯನ್ನು ನೆನೆಸುವಷ್ಟು ಸಮಾಜಮುಖಿಯಾಗಿ ವ್ಯಕ್ತಿತ್ವ ರೂಪಿಸಿಕೊಂಡರೆ ಅದುವೇ ಶ್ರೇಷ್ಠ ಸೇವೆ ಎಂದು ಶಿರಸಿಯ ಭಾರತೀಯ ಜೀವ ವಿಮಾ ನಿಗಮದ ಮುಖ್ಯ ಪ್ರಬಂಧಕ ಗಣಪತಿ ಎನ್. ಭಟ್ಟ ಹೇಳಿದರು.
ಅವರು ಪಟ್ಟಣದ ವೇದವ್ಯಾಸ ಕಲ್ಯಾಣ ಮಂಟಪದಲ್ಲಿ ಮಧುಶ್ರೀ ಬಳಗದ ಮುಖ್ಯಸ್ಥ ರವೀಂದ್ರ ಪ್ರಭು ಸೇವಾ ನಿವೃತ್ತಿ ಸಂದರ್ಭದಲ್ಲಿ ಕುಟುಂಬ ಸಮಾವೇಶ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ ರವೀಂದ್ರ ಪ್ರಭು ೩೬ ವರ್ಷಗಳ ಕಾಲ ಕೇವಲ ಪ್ರತಿನಿಧಿಗಳ ಜೊತೆ ಮಾತ್ರವಲ್ಲದೇ, ಅವರ ಕುಟುಂಬದ ಪ್ರತಿಯೋರ್ವ ಸದಸ್ಯರೊಂದಿಗಿನ ಸ್ನೇಹ-ಸಂಬAಧವಿಟ್ಟುಕೊAಡು ವಿಮಾ ಕ್ಷೇತ್ರದಲ್ಲಿ ತಾಲೂಕಿನಾದ್ಯಂತ ಜಾಗೃತಿ ಮೂಡಿಸಿ, ಪ್ರತಿನಿಧಿ ಬಳಗಕ್ಕೆ ಮಾರ್ಗದರ್ಶನ ನೀಡಿರುವುದು ಸ್ಮರಣೀಯವಾದುದು ಎಂದರು.
ಅಭಿವೃದ್ಧಿ ಅಧಿಕಾರಿಯಾಗಿ ನಿವೃತ್ತಿಗೊಂಡ ರವೀಂದ್ರ ಪ್ರಭು ಪ್ರತಿನಿಧಿಗಳು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿ, . ಅಸಾಧ್ಯವಾದುದನ್ನು ಸಾಧ್ಯ ಮಾಡಿ ತೋರಿಸುವುದೇ ನಮ್ಮ ಸಂಕಲ್ಪವಾಗಬೇಕು. ಜನರ ಇಚ್ಛೆಗನುಗುಣವಾಗಿ ನಮ್ಮ ವ್ಯವಹಾರ ರೂಪಿಸಬೇಕು. ನಾವು ಮಾಡುವ ಪ್ರತಿಯೊಂದು ಕಾರ್ಯದಲ್ಲೂ ಖುಷಿ ಇರಬೇಕು. ಅಂದಾಗ ಮಾತ್ರ ಆ ಕ್ಷೇತ್ರದಲ್ಲಿ ಸಾಧನೆ ಸಾಧ್ಯ. ಸಮಾಜದಿಂದ ಬಂದ ಹಣ ಸಮಾಜಕ್ಕೆ ಸ್ವಲ್ಪವಾದರೂ ನೀಡಬೇಕು ಎಂದರು.
ಯಲ್ಲಾಪುರ ಸಂಪರ್ಕ ಶಾಖಾ ಪ್ರಬಂಧಕ ವಿದ್ಯಾಧರ ವಿ. ಹೆಗಡೆ ,ಶಿರಸಿಯ ಉಪಶಾಖಾಧಿಕಾರಿ ಡಾ.ರಾಜೇಶ ಗಾಂವ್ಕರ್ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರತಿನಿಧಿಗಳು ಸೇರಿ ರವೀಂದ್ರ ಪ್ರಭು ಮತ್ತು ರೂಪಾ ಪ್ರಭು ದಂಪತಿಗಳನ್ನು ಹಾಗೂ ರಾಹುಲ್ ಪ್ರಭು ಅವರನ್ನು ಸನ್ಮಾನಿಸಿದರು.
ರೋಟರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿನಾಯಕ ಪೈ . ಅಭಿವೃದ್ಧಿ ಅಧಿಕಾರಿಗಳಾದ ರಾಘವೇಂದ್ರ ಕಣಗಿಲ್, ಮಧುಕೇಶ್ವರ ಹೆಗಡೆ .
ಪ್ರತಿನಿಧಿಗಳಾದ ಆರ್.ಎನ್.ಕೋಮಾರ, ಸೂರ್ಯನಾರಾಯಣ ಹೆಗಡೆ, ರಾಮಚಂದ್ರ ಬೆಳ್ಳಣ್ಣನವರ್, ಶಂಕರ ಭಟ್ಟ ತಾರೀಮಕ್ಕಿ, ಟಿ.ಎನ್.ಭಟ್ಟ ನಡಿಗೆಮನೆ, ತುಕಾರಾಮ ಶೇಟ್, ಪ್ರಕಾಶ ಮಹಾಲೆ, ಬಸಯ್ಯ ಹಿರೇಮಠ, ಅರವಿಂದ ಗುಡಿಸಾಗರ, ಗುರುರಾಜ ಕಾಮತ್ ಮತ್ತಿತರರು ಮಾತನಾಡಿದರು.
.ದಯಾನಂದ ಶೆಟ್ಟಿ ಸ್ವಾಗತಿಸಿದರು. ಶ್ರೀಧರ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಟಿ.ಎನ್.ಭಟ್ಟ ವಂದಿಸಿದರು.
Leave a Comment