ಹೊನ್ನಾವರ ತಾಲೂಕಿನ ಹಡಿನಬಾಳ ಗ್ರಾಮದ ಹಾಡಗೇರಿಯ ಶೃತಿ ರಮೇಶ ನಾಯ್ಕ ಇವರು ಮನೆ ಸಮೀಪದ ಗುಂಡಬಾಳ ನದಿ ತೀರದಲ್ಲಿ ಬಟ್ಟೆ ತೊಳೆಯಲು ಆಗಮಿಸಿದ್ದರು.
ತಾಯಿಯೊಂದಿಗೆ ಆಗಮಿಸಿದ ಒಂದುವರೆ ವರ್ಷದ ಕಾರ್ತಿಕ ನಾಯ್ಕ ಆಕಸ್ಮೀಕವಾಗಿ ನದಿಯಲ್ಲಿ ಮುಳುಗಿದ್ದಾನೆ. ವಿಷಯ ತಿಳಿದ ಹೊನ್ನಾವರ ಪೋಲಿಸ್ ಠಾಣಿಯ ಸಿಪಿಐ ಶ್ರೀಧರ ಎಸ್.ಆರ್ ಹಾಗೂ ಪಿಎಸೈ ಶಶಿಕುಮಾರ ನೇತ್ರತ್ವದಲ್ಲಿ ಸಿಬ್ಬಂದಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ. ಈ ಸಂಭದ ಹೊನ್ನಾವರ ಪೋಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment