• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ವಯಕ್ತಿಕವಾಗಿ ದೋಣಿ ವಿತರಿಸಿದ ಭಟ್ಕಳ ಶಾಸಕ ಸುನೀಲ ನಾಯ್ಕ

August 3, 2021 by Vishwanath Shetty Leave a Comment

ಹೊನ್ನಾವರ : ತಾಲೂಕಿನ ನೆರೆಪೀಡಿತ ಪ್ರದೇಶವಾದ ಖರ್ವಾ ಮತ್ತು ಹಡಿನಬಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನೆರೆ ಹಾವಳಿ ಸಮಯದಲ್ಲಿ ತುರ್ತು ಕಾರ್ಯಾಚರಣೆಗೆ  ಭಟ್ಕಳ ಶಾಸಕ ಸುನೀಲ ನಾಯ್ಕ ಎರಡು ದೋಣಿಯನ್ನು ವೈಯಕ್ತಿಕವಾಗಿ ನೀಡಿದರು.ದೋಣಿ ಹಸ್ತಾಂತರದ ಬಳಿಕಹಡಿನಬಾಳ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಸುನೀಲ ನಾಯ್ಕ ಮಾತನಾಡಿ ಈ ಭಾಗದಲ್ಲಿ ಅತೀ ಹೆಚ್ಚು ಸಂಕಷ್ಟಕ್ಕೀಡು ಮಾಡುವುದು ನೆರೆಹಾವಳಿ.

ಕಳೆದ ವರ್ಷ ನೆರೆ ಬಂದಾಗ ಟೊಂಕದಿಂದ ತರಬೇಕಾಯಿತು. ನೆರೆ ಬರುವ ಪ್ರದೇಶದ ಒಂದೊಂದು ಪಂಚಾಯಿತಿಯಲ್ಲೂ ನಾಲ್ಕು ದೋಣಿಗಳ ಅಗತ್ಯವಿದೆ.  ಆ ನಿಟ್ಟಿನಲ್ಲಿ ಎರಡು ದೋಣಿ ವೈಯಕ್ತಿಕವಾಗಿ ನೀಡಿದ್ದೇನೆ.ಮತ್ತೆ ಎಷ್ಟು ದೋಣಿ ಬೇಕು ಹೇಳಿ ಗ್ರಾಮ ಪಂಚಾಯತದಿಂದ ವ್ಯವಸ್ಥೆ ಮಾಡಲು ತಿಳಿಸುತ್ತೇನೆ. ಒಂದೊಮ್ಮೆ ಗ್ರಾಮ ಪಂಚಾಯತದವರು ವ್ಯವಸ್ಥೆ ಮಾಡದೇ ಇದ್ದಲ್ಲಿ ನಾನೆ ವೈಯಕ್ತಿಕವಾಗಿ ಕೊಡುತ್ತೇನೆ ಎಂದು ಭರವಸೆ ನೀಡಿದರು. ಕೆಲವರು ರಾಜಕಾರಣದ ತೆವಲಿಗೆ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.

IMG20210802164526

ಅಂತಹ ಅಗತ್ಯ ನನಗಿಲ್ಲ. ಜನರ ಜೊತೆ ನಿಂತು ಕೆಲಸ ಮಾಡುತ್ತಿದ್ದೇನೆ.ನೆರೆಹಾವಳಿ ಬಂದಾಗ ಪಕ್ಷಾತೀತವಾಗಿ ಕೆಲಸ ಮಾಡೋಣ, ಚುನಾವಣೆ ಬಂದಾಗ ಪಕ್ಷ ನೋಡೋಣ ಎಂದು ವಿರೋಧಿಸುವರಿಗೆ ಟಾಂಗ್ ನೀಡಿದರು.ಸಿಪಿಐ ಶ್ರೀಧರ ಎಸ್. ಆರ್. ಮಾತನಾಡಿ ನೆರೆಹಾವಳಿ ಬಂದಾಗ ತುರ್ತಾಗಿ ರಕ್ಷಣಾ ವ್ಯವಸ್ಥೆಗೆ ದೋಣಿಯ ಅಗತ್ಯವಿತ್ತು. ಅಂತಹ ಅಗತ್ಯವನ್ನು ಶಾಸಕರು ಪೂರೈಸಿದ್ದಾರೆ. ನೆರೆಹಾವಳಿ ಸಂದರ್ಭದಲ್ಲಿ ತಕ್ಷಣ ಉಪಯೋಗಕ್ಕೆ ಸಿಗುವಂತೆ ಪಂಚಾಯಿತಿಗಳು ನಿರ್ವಹಣೆ ಮಾಡಬೇಕು.

ಆ ಸಮಯದಲ್ಲಿ ಬಳಕೆಗೆ ಬರುವ ಲೈಫ್ ಜಾಕೆಟ್ ಮತ್ತು ರಿಂಗ್ ವ್ಯವಸ್ಥೆ ಗ್ರಾಮ ಪಂಚಾಯತದವರು ವ್ಯವಸ್ಥೆ ಮಾಡಿಕೊಳ್ಳಬೇಕು. ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಆಗುತ್ತಿರುವ ಮೋಸದ ಬಗ್ಗೆ ಗಮನವಿರಲಿ ಎಡಿಟ್ ಮಾಡಿದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಬಳಸಿ ಯಾಮಾರಿಸುತ್ತಾರೆ. ನಿಮ್ಮ ಕಾಳಜಿಯಲ್ಲಿ ನೀವು ಇರಿ ಇತ್ತೀಚಿಗೆ ಇಂತಹ ಪ್ರಕರಣ ಹೆಚ್ಚಾಗಿ ಕಂಡುಬರುತ್ತಿದೆ ಎಂದರು.

ಗ್ರಾಮ ಪಂಚಾಯತ ಸದಸ್ಯ ಸಚಿನ್ ಶೇಟ್ ಸ್ವಾಗತಿಸಿ ಗಣಪತಿ ಬಿಟಿ ವಂದಿಸಿದರು. ತಾ.ಪಂ.ಸದಸ್ಯ ಆರ್.ಪಿ.ನಾಯ್ಕ ವಿ. ಎಸ್. ಎಸ್. ಬ್ಯಾಂಕ್ ಅಧ್ಯಕ್ಷ ಹರಿಯಪ್ಪ ನಾಯ್ಕ,  ಗ್ರಾ. ಪಂ. ಅಧ್ಯಕ್ಷರಾದ ವಿಘ್ನನೇಶ್ವರ ಹೆಗಡೆ, ಮಂಜುನಾಥ ನಾಯ್ಕ, ಶ್ರೀಧರ ನಾಯ್ಕ, ವಿನಾಯಕ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.,

ನೆರೆ ಬಂದಾಗ  ಗ್ರಾಮಕ್ಕೆ ಅನೂಕೂಲ ಆಗಲು ದೋಣಿ ವ್ಯವಸ್ಥೆ ಕಲ್ಪಿಸಲು ಪಂಚಾಯತಿಗೆ ಶಾಸಕ ಸುನೀಲ ನಾಯ್ಕ ಆಗಮಿಸಿದರೆ ಸ್ಥಳಿಯ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷರು ಗೈರಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸೌಲಭ್ಯದ ವಿಷಯದಲ್ಲಿ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ ಎನ್ನವ ಮಾತು ಸಾರ್ವಜನಿಕವಲಯದಲ್ಲಿ ಕೇಳಿಬಂತು.

ಲಾರಿ ಚಾಲಕ ಅಪಹರಣ ; 22 ಸಾವಿರ ರೂ. ದೋಚಿ ಹುಬ್ಬಳ್ಳಿಯಲ್ಲಿ ಬಿಟ್ಟ ಉಪರಾರಿ

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News Tagged With: ತಕ್ಷಣ ಉಪಯೋಗಕ್ಕೆ ಸಿಗುವಂತೆ ಪಂಚಾಯಿತಿಗಳು ನಿರ್ವಹಣೆ, ದೋಣಿ ಹಸ್ತಾಂತರದ ಬಳಿಕ, ನೆರೆಹಾವಳಿ ಸಂದರ್ಭದಲ್ಲಿ, ರಿಂಗ್ ವ್ಯವಸ್ಥೆ ಗ್ರಾಮ ಪಂಚಾಯತದವರು ವ್ಯವಸ್ಥೆ, ಲೈಫ್ ಜಾಕೆಟ್, ಹಡಿನಬಾಳ ಸರಕಾರಿ ಪ್ರೌಢಶಾಲೆ

Explore More:

About Vishwanath Shetty

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...