ಗೊಕರ್ಣ : ಈಜಲೆಂದು ಸಮುದ್ರಕ್ಕೆ ಇಳಿದ ಯುವಕನೋರ್ವ ನೀರಿಸಲ್ಲಿ ಮುಳಗಿ ಮೃತಪಟ್ಟ ಘಟನೆ ಗೋಕರ್ಣದ ಪ್ಯಾರಡೈಸ್ ಬೀಚ್ ಬಳಿ ಮಂಗಳವಾರ ನಡೆದಿದೆ. ಮುಂಬೈ ಮೂಲದ ಅದ್ವೆöÊ ದೀಪಕ ಜೈನ್ (20) ಮೃತ ಯುವಕ. ಈತ ಮುಂಬೈನಿAದ 6 ಜನ ಗಳೆಯರೊಂದಿಗೆ ಗೋಕರ್ಣಕ್ಕೆ ಪ್ರವಾಸಕ್ಕೆಂದು ಆಗಮಿಸಿದ್ದ.
ಮಂಗಳವಾರ ಮಧ್ಯಾಹ್ನದ ಸಮಯದಲ್ಲಿ ಈಜಲು ಗೆಳೆಯರೊಂದಿಗೆ ಪ್ಯಾರಡೈಸ್ ಬೀಚ್ಗೆ ತೆರಳಿದ್ದಾಗ ಸಮುದ್ರದ ಸುಳಿಗೆ ಸಿಲುಕಿದ ಈರ್ವರಲ್ಲಿ ಓರ್ವನನು ರಕ್ಷಿಸಲಾಗಿದೆ.
ಅದ್ವೆöÊ ಮುಳಗಿ ಮೃತಪಟ್ಟಿದ್ದಾನೆ. ಶವವನ್ನು ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಗಾರದಲ್ಲಿ ಇಡಲಾಗಿದೆ. ಸ್ಥಳಕ್ಕೆ ಗೊಕರ್ಣ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Leave a Comment