ಉಡುಪಿ: ಫೇಸ್ಬುಕ್ನಲ್ಲಿ ಪರಿಚಿತನಾದ ವ್ಯಕ್ತಿಯೊಬ್ಬ ನಂಬಿಸಿ ಮಹಿಳೆಯೊಬ್ಬರಿಗೆ ರೂ. 19 ಲಕ್ಷ ವಂಚನೆ ಎಸಗಿದ್ದಾನೆ. ಲಿನೆಟ್ ಸೀಮಾ ರೊಡ್ರಿಗಸ್ ವಂಚನೆಗೊಳಗಾದವರು. ಶಂಕರಪುರದ ಲಿನೆಟ್ ಕುವೈತ್ನಲ್ಲಿ ಉದ್ಯೋಗದಲ್ಲಿದ್ದು, ಮೇನಲ್ಲಿ ಫೇಸ್ಬುಕ್ ಮೂಲಕ ಡಾ. ಆ?ಯಂಡ್ರಿವ್ ಫೆಲಿಕ್ಸ್ ಎಂಬಾತ ಪರಿಚಿತನಾಗಿದ್ದ.
ವೈದ್ಯನೆಂದು ಹೇಳಿಕೊಂಡ ಆತ, ದೆಹಲಿಯಲ್ಲಿ ಫಾರ್ಮಸಿ ತೆರೆಯುತ್ತಿರುವುದಾಗಿ ತಿಳಿಸಿ ಹಣದ ಸಹಾಯ ಕೋರಿದ್ದಾನೆ. ಬಳಿಕ ಹಂತ ಹಂತವಾಗಿ ರೂ. 19 ಲಕ್ಷವನ್ನು ಖಾತೆಗೆ ಹಾಕಿಸಿಕೊಂಡು ವಂಚನೆ ಎಸಗಿದ್ದಾನೆ ಎಂದು ಮಹಿಳೆ ದೂರು ನೀಡಿದ್ದು, ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment