ಕುಮಟಾ : ಪಟ್ಟಣದ ಉಪ್ಪಾರಕೇರಿ ಬಳಿ ಪಾನಮತ್ತ ಯವಕರಿಬ್ಬರು ಪೊಲೀಸರ ಎದುರಲ್ಲೇ ಗಲಾಟೆ ಮಾಡಿಕೊಂಡಿದ್ದು ಕೆಲವು ಕ್ಷಣ ಗಮನಿಸಿ ಬಳಿಕ ಪೊಲೀಸ್ ಸಿಬ್ಬಂದಿಗಳು ಬೆತ್ತದ ರುಚಿ ತೊರಿಸಿದ್ದಾರೆ.
ಒಂದು ಕಡೆ ಕಾರ್ಮಿಕ ಇಲಾಖೆ ಕಚೇರಿಯಲ್ಲಿ ಕಿಟ್ ಪಡೆಯಲು ನೂರಾರು ಮಂದಿ ಸರತಿಸಾಲಿನಲ್ಲಿ ನಿಂತಿದ್ದರೆ. ಮತ್ತೊಂದು ಕಡೆ ಎರಡು ಕುಟುಂಬದ ನಡುವಿನ ಗಲಾಟೆ ಮಿತಿ ಮೀರಿತ್ತು. ಗಂಟೆಗಟ್ಟಲೆ ಕಿಟ್ ಪಡೆಯಲು ಕಾದು ನಿಂತಿದ್ದವರು ಸ್ಥಳೀಯರ ಈ ಗಲಾಟೆ ಕಂಡು ಕಂಗಾಲಾದರು. ಕೆಲವರು ಮನರಂಜನೆ ಪಡೆದುಕೊಂಡರು.
ಇಬ್ಬರು ಯುವಕರು ಕಂಠಪೂರ್ತಿ ಕುಡಿದು ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದುಕೊಳ್ಳುತ್ತಾ ಕಾಲರ್ ಹಿಡಿದು ಎಳೆಯುವಲ್ಲಿಗೆ. ತಳ್ಳುವಲ್ಲಿಗೆ ಜಗಳ ಮುಂದುವರಿದಿತ್ತು. ಹತ್ತಿರದಲ್ಲೇ ಇದ್ದ ಕ್ಯೆç ಪಿಎಸೈ ಎಚ್ಚರಿಕೆ ನೀಡಿದ್ದರೂ ಅವರ ಎದುರೇ ಬಂದು ಆವಾಜ್ ಹಾಕತೊಡಗಿದ್ದರು. ಎರಡು ಕುಡುಂಬದ ಮಹಿಳೆಯರ ಕೂಡ ಇವರೊಂದಿಗೆ ದನಿಗೊಡಿಸದ್ದರು. ತದನಂತರ ಪೊಲೀಸ್ ಸಿಬ್ಬಂದಿಗಳು ಲಾಠಿ ರುಚಿ ತೋರಿಸಿ ಇಬ್ಬರನ್ನೂ ಚದುರಿಸಿದರು. ಅಮಲು ಇಳಿದ ಬಳಿಕ ಇಬ್ಬರು ಸುಮ್ಮನಾಗಿದ್ದಾರೆ ಎನ್ನಲಾಗಿದೆ.
Leave a Comment